ಶಿವಮೊಗ್ಗ

ಶಸ್ತ್ರಚಿಕಿತ್ಸೆ ಇಲ್ಲದೆ ಹೃದಯದ ರಂಧ್ರ ಮುಚ್ಚಿದ ವೈದ್ಯರು

Published On :

ಶಿವಮೊಗ್ಗ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುಟಾಣಿಗಳಿಬ್ಬರ ಹೃದಯದ ರಂಧ್ರವನ್ನು ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ರಕ್ತನಾಳಗಳ ಮೂಲಕ ರಂಧ್ರ ಮುಚ್ಚುವಲ್ಲಿ ಸಹ್ಯಾದ್ರಿ ನಾರಾಯಣ ಹೃದಯಾಲಯದ ವೈದ್ಯರ ತಂಡ ಯಶಸ್ವಿಯಾಗಿದೆ.
ಆಯನೂರು ಸಮೀಪದ ಬಿಲ್ಗುಳಿಯ ಉಮಾ- ನಾಗರಾಜ್ ದಂಪತಿಯ 7 ವರ್ಷದ ಮಗಳು ತನುಶ್ರೀ ಹಾಗೂ ಹೊಳಲೂರಿನ ಅಸೀಫ್‌ವುಲ್ಲಾ ಹಾಗೂ ನಾಸೀರ ಬಾನು ದಂಪತಿಯ 4 ವರ್ಷದ ಮಗಳಾದ ಸುಮನಾಬಾನು ಅವರಿಗೆ ಉಚಿತವಾಗಿ ಈ ಚಿಕಿತ್ಸೆ ನೀಡಲಾಗಿದ್ದು, ಈಗ ಗುಣಮುಖರಾಗಿದ್ದಾರೆ.
ಹೆಮ್ಮೆಯ ಸಂಗತಿ: ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಡಾ. ರಘುಪ್ರಸಾದ್ ಈ ಕುರಿತು ಮಾಹಿತಿ ನೀಡಿ, ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲದೆ, ಕಲೆಯೂ ಉಂಟಾಗದಂತೆ, ಅರವಳಿಕೆ ಚುಚ್ಚುಮದ್ದು ನೀಡದೆ, ದೀರ್ಘ ಕಾಲದ ಸಮಸ್ಯೆ ಬಾರದಂತೆ, ಮಗುವಿನಲ್ಲಿ ಹೃದಯದ ರಂಧ್ರ ಗುರುತಿಸಿ ರಕ್ತನಾಳಗಳ ಮೂಲಕ ಮುಚ್ಚುವ ವಿಶೇಷ ಪ್ರಯತ್ನ ಇದಾಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಶಸ್ತ್ರ ಚಿಕಿತ್ಸೆ ರಹಿತ: ಚಿಕಿತ್ಸೆಗೊಳಗಾದ ಮಕ್ಕಳ ಹೃದಯದ ರಂಧ್ರವನ್ನು ಮುಚ್ಚಲಾಗಿದೆ. ಮಕ್ಕಳು ಆರೋಗ್ಯದಿಂದಾಗಿದ್ದಾರೆ ಎಂದು ಅವರು ಹೇಳಿದರು.
ಹೃದಯಲ್ಲಿನ ರಂಧ್ರದ ಸಮಸ್ಯೆ ನಾನಾ ಕಾರಣಗಳಿಂದ ಬರುತ್ತದೆ. ಇದು ಸಾವಿರ ಮಕ್ಕಳಲ್ಲಿ ಸರಾಸರಿ 8 ಮಕ್ಕಳಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಈ ಸಮಸ್ಯೆ ಇರುವವರಿಗೆ ಶಸ್ತ್ರ ಚಿಕಿತ್ಸೆ ರಹಿತವಾಗಿ ಕೇವಲ ಒಂದೇ ದಿನದಲ್ಲಿ ಯಶಸ್ವಿ ಚಿಕಿತ್ಸೆ ನೀಡಿ ಗುಣ ಪಡಿಸಬಹುದು ಎಂದರು.
ಅತ್ಯಾಧುನಿಕ ತಂತ್ರಜ್ಞಾನ: ಇಂತಹ ಸಮಸ್ಯೆ ಮಗುವಿಗೆ ಆರಂಭದಲ್ಲೇ ಕೆಮ್ಮು, ಶೀತ, ಜ್ವರದಂತಹ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಗುವನ್ನು ಯಾವುದೇ ವೈದ್ಯರು ಪರೀಕ್ಷಿಸುವ ಸಂದರ್ಭದಲ್ಲಿ ಈ ಸಮಸ್ಯೆ ಗುರುತು ಪತ್ತೆಯಾಗುವ ಸಾಧ್ಯತೆಗಳಿವೆ ಎಂದರು.
 ಈ ಸಮಸ್ಯೆ ಪರಿಹಾರಕ್ಕೆಂದೇ ನಾರಾಯಣ ಹೃದಯಾಲಯ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣ ತಂದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.