ಗುಟ್ಕಾದಲ್ಲಿರುವ ಹಾನಿಕಾರಕ ಪದಾರ್ಥ ನಿಷೇಧಿಸಲಿ
ಶಿವಮೊಗ್ಗ: ಸರ್ಕಾರ ನಿಷೇಧ ಮಾಡುವುದೇ ಆದರೆ ಗುಟ್ಕಾದಲ್ಲಿರುವ ಹಾನಿಕಾರಕ ಪದಾರ್ಥಗಳನ್ನು ನಿಷೇದ ಮಾಡಲಿ. ಗುಟ್ಕಾ ನಿಷೇದ ಮಾಡಿ ಲಕ್ಷಾಂತರ ಕುಟುಂಬಗಳನ್ನು ಬೀದಿಗೆ ತಳ್ಳುವುದು ಬೇಡ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ 143 ತಾಲೂಕುಗಳಲ್ಲಿ ಅಡಕೆ ಬೆಳೆಯಲಾಗುತ್ತಿದೆ. 6 ಲಕ್ಷ ಕುಟುಂಬಗಳು ನೇರವಾಗಿ ಅಡಕೆ ಬೆಳೆ ಮೇಲೆ ಅವಲಂಬಿತವಾಗಿವೆ. 1 ಕೋಟಿ ಜನರ ಪರೋಕ್ಷವಾಗಿ ಅವಲಂಬಿಸಿದ್ದಾರೆ. ವಾರ್ಷಿಕ 3,58,000 ಟನ್ ಅಡಕೆ ಉತ್ಪಾದನೆಯಾಗುತ್ತಿದೆ. ಪ್ರತಿವರ್ಷ 2,500 ಕೋಟಿ ರು. ವಹಿವಾಟು ನಡೆಯುತ್ತಿದೆ. ಇಷ್ಟು ದೊಡ್ಡ ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಗಮನಿಸಬೇಕು ಎಂದರು.
ಪ್ರದಾನಮಂತ್ರಿ ಮನಮೋಹನ ಸಿಂಗ್ ಅವರ ಬಳಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿಯೋಗ ತೆರಳಿದ್ದಾಗ ಸ್ವತಃ ಸಿದ್ದರಾಮಯ್ಯ ಅವರೇ ಗುಟ್ಕಾ ನಿಷೇಧ ಮಾಡುವುದರಿಂದ ರಾಜ್ಯದ ಬೆಳೆಗಾರರು ಅನುಭವಿಸುವ ಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಅಂದು ನಮ್ಮ ಜತೆ ಕೇಂದ್ರದ ಆಹಾರ ಸಚಿವರು, ಕೈಗಾರಿಕಾ ಸಚಿವರನ್ನೂ ಭೇಟಿ ಮಾಡಿದ್ದರು. ಈಗ ಅವರೇ ಗುಟ್ಕಾ ನಿಷೇಧದಂತಹ ನಿರ್ಧಾರ ಕೈಗೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಿಗರೇಟ್ ಲಾಬಿ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದಕ್ಕೆ ಸಿಗರೇಟಟ್ಕಂಪನಿಗಳ ಲಾಬಿಯೇ ಕಾರಣ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.
ಗುಟ್ಕಾ ನಿಷೇಧಿಸಿ ಸಿಗರೇಟು ಕಂಪನಿಗಳಿಗೆ ರಕ್ಷಣೆ ನೀಡುವುದು ಬೇಡ ಎಂದ ಅವರು, ಗುಟ್ಕಾ ತಯಾರಿಸುವ ಕಂಪನಿಗಳ ಮೇಲೆ ಕ್ರಮ ಏಕಿಲ್ಲ ಗುಟ್ಕಾ ನಿಷೇದಿಸುವುದು ಅಡಕೆ ಬೆಳೆಯುವ ರೈತರನ್ನು ನಾಶ ಮಾಡಿದಂತೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

