ಉತ್ಸಾಹವಿಲ್ಲದ ರಾಜ್ಯೋತ್ಸವ
ಶಿವಮೊಗ್ಗ: ಪ್ರತಿ ವರ್ಷ ಶಿವಮೊಗ್ಗದಲ್ಲಿ ಉತ್ಸಾಹದಿಂದ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವ ಈ ಬಾರಿ ಕಳೆಗುಂದಿದಂತೆ ಕಂಡುಬಂತು. ಸಂಭ್ರಮಿಸಲು ಜನರಿಲ್ಲ, ಜನಪ್ರತಿನಿಧಿಗಳೂ ಇಲ್ಲ. ಆಚರಣೆ ಮಾಡಲೇಬೇಕೆಂಬ ಕಾರಣಕ್ಕೆ ನಡೆದ ಕಾರ್ಯಕ್ರಮದಂತೆ ಈ ಬಾರಿಯ ರಾಜ್ಯೋತ್ಸವ ಸಾಕ್ಷಿಯಾಯಿತು.
ನೆಹರೂ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಯುವುದು ವಾಡಿಕೆ. ಸಿಂಥೆಟಿಕ್ ಕಾಮಗಾರಿ ಹೆಸರಿನಲ್ಲಿ ಈ ಬಾರಿಯ ರಾಜ್ಯೋತ್ಸವವನ್ನು ಗಣರಾಜ್ಯೋತ್ಸವದಂತೆ ಡಿಎಆರ್ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ರಾಜ್ಯೋತ್ಸವ ಕಳೆಗುಂದಲು ಪ್ರಮುಖ ಕಾರಣವಾಯಿತು ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಹೀಗಿತ್ತು ಕಾರ್ಯಕ್ರಮ: ಆಯೋಜನೆಯಾಗಿದ್ದು ಸಂಭ್ರಮದ ರಾಜ್ಯೋತ್ಸವ ಸಮಾರಂಭ, ಅಲ್ಲಿಗೆ ಬರುವ ಸಾರ್ವಜನಿಕರಿಗೆ ಆಸೀನರಾಗಲು ಒಂದೈದುನೂರು ಖುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ನಡೆಯುವಾಗ ಅವುಗಳಲ್ಲೂ ಖಾಲಿ ಖಾಲಿ. ಇರುವ ಖುರ್ಚಿಗಳಲ್ಲಿ ಸಶಸ್ತ್ರ ಮೀಸಲು ಪಡೆಯ ಆವರಣದ ಸುತ್ತಮುತ್ತಲೇ ಇರುವ ಪೊಲೀಸರು ಹಾಗೂ ಅವರ ಕುಟುಂಬದವರು ಆಸೀನರಾಗಿದ್ದರು.
ಇನ್ನು ಸರ್ಕಾರಿ ಕಾರ್ಯಕ್ರಮದಲ್ಲಿನ ಆಹ್ವಾನ ಪತ್ರಿಕೆಯ ಶಿಷ್ಟಾಚಾರದ ಬಗ್ಗೆ ಕಿರಿಕಿರಿ ಉಂಟು ಮಾಡುವ ಬಹುತೇಕ ಜನಪ್ರತಿನಿಧಿಗಳು ಅತ್ತ ಸುಳಿಯಲಿಲ್ಲ. ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದ ಬಿ.ವೈ. ರಾಘವೇಂದ್ರ ಕೂಡ ಅತ್ತ ಕಡೆ ಬರಲಿಲ್ಲ.
ಉತ್ಸಾಹದಲ್ಲಿ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಚಪ್ಪಾಳೆ ತಟ್ಟಲೂ ಜನರ ಕೊರತೆ ಕಂಡುಬಂತು.
ಧ್ವಜಾರೋಹಣ ಮಾಡಬೇಕಾಗಿದ್ದ ಶಿಕ್ಷಣ ಸಚಿವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹೀಗಾಗಿ ಶಿಕ್ಷಣ ಸಚಿವರ ಪರವಾಗಿ ಡಿಸಿಯವರೇ ಧ್ವಜಾರೋಹಣ ಮಾಡಿದರು ಹಾಗೂ ಸಚಿವರ ಭಾಷಣಕ್ಕೆ ಸಿದ್ಧಗೊಂಡಿದ್ದ ಭಾಷಣ ಪ್ರತಿಯನ್ನು ಸಾಂಕೇತಿಕವಾಗಿ ಡಿಸಿಯವರೇ ಒಂದಿಷ್ಟು ಅಂಶ ಓದಿ ಮುಗಿಸಿದರು. ಅಂತಿಮವಾಗಿ ಉತ್ಸಾಹ ರಹಿತವಾದ ರಾಜ್ಯೋತ್ಸವ ಮುಕ್ತಾಯಕಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

