9ರಿಂದ ಛಾಯಾಚಿತ್ರಗಳ ಪ್ರದರ್ಶನ
ಶಿವಮೊಗ್ಗ: ಅಭ್ಯುದಯ ಮತ್ತು ಭಾರತೀಯ ವೈದ್ಯಕೀಯ ಸಂಘ ಆಶ್ರಯದಲ್ಲಿ ನ.9 ಮತ್ತು 10ರಂದು ರೆಕ್ಕೆ ಬಿಚ್ಚಿದ ಚಿತ್ರಗಳು ಶೀರ್ಷಿಕೆಯಡಿಯಲ್ಲಿ ಡಾ. ಶ್ರೀಕಾಂತ್ ಎನ್. ಹೆಗಡೆ ಮತ್ತು ಡಾ ಪಿ.ಕೆ. ಪೈ ಅವರು ಸೆರೆಹಿಡಿದ ಪಕ್ಷಿಗಳ ಛಾಯಾಚಿತ್ರಗಳ ಪ್ರದರ್ಶನವನ್ನು ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ನ.9ರಂದು ಸಂಜೆ 4ರಿಂದ ನ.10ರ ರಾತ್ರಿ 9 ಗಂಟೆವರೆಗೆ ಪ್ರದರ್ಶನ ಇರುತ್ತದೆ. ಉದ್ಘಾಟನೆಯನ್ನು ಅಂತಾರಾಷ್ಟ್ರೀಯ ಛಾಯಾಯಗ್ರಾಹಕ ಅಮಚಿ ಲಕ್ಷ್ಮೀನಾರಾಯಣ ನೆರವೇರಿಸುವರು.
ಸಾರಿಗೆ ವ್ಯವಸ್ಥೆ
ಸಾಗರ: ಕೃಷಿಕರಿಗೆ ಅನುಕೂಲವಾಗುವಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಎಪಿಎಂಸಿಗೆ ಓಡಾಡುವ ಸಾರಿಗೆ ವ್ಯವಸ್ಥೆಯನ್ನು ಪುನಃ ಆರಂಭಿಸಲಾಗಿದೆ. ಎಪಿಎಂಸಿಯವರು ನಿರ್ವಹಿಸುತ್ತಿರುವ ಈ ವಾಹನವು ಬೆಳಗ್ಗೆ 10.30, 11.30, 12.30 ಹಾಗೂ ಮಧ್ಯಾಹ್ನ 3.30ಕ್ಕೆ ಖಾಸಗಿ ಬಸ್ ನಿಲ್ದಾಣದಿಂದ ಹೊರಡಲಿದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ವ.ಶಂ. ರಾಮಚಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಜನಪದರ ಆಚರಣೆ ಹಿಂದೆ ಬದುಕಿನ ಮೌಲ್ಯವಿದೆ'
ಹೊಸನಗರ: ಜನಪದರು ಆಚರಿಸುವ ಪ್ರತಿಯೊಂದು ಕಾರ್ಯಕ್ರಮದ ಹಿಂದೆ ವಿಶೇಷ ಅರ್ಥದ ಜೊತೆಗೆ ಉತ್ತಮ ಬದುಕಿನ ಮೌಲ್ಯಗಳಿವೆ ಎಂದು ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಹೇಳಿದರು. ತಾಲೂಕಿನ ಕುಸುಗುಂಡಿ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುಸುಗುಂಡಿ ಶ್ರೀ ಮಹಾಗಣಪತಿ ಯುವಕ ಸಂಘ ಮತ್ತು ಶ್ರೀರಾಮಾರ್ಪಣ ಕಲಾವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ದೀಪಗೋ ಜನಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಪದರ ಆಚರಣೆ ಬಗ್ಗೆ ಅಸಡ್ಡೆ ಬೇಡ. ನಮ್ಮ ಬದುಕು ಮತ್ತು ಸಂಸ್ಕೃತಿ ಮಿಳಿತಗೊಂಡ ಜನಪದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂದರು. ಮಹಾಗಣಪತಿ ಯುವಕ ಸಂಘದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ ಸದಸ್ಯ ಕುಬೇರಪ್ಪ, ಗ್ರಾಪಂ ಅಧ್ಯಕ್ಷ ಕೃಷ್ಣ ಬಿ.ಶೆಟ್ಟಿ, ಸದಸ್ಯರಾದ ಕೋಡೂರು ಚಂದ್ರಮೌಳಿ, ಸಾವಿತ್ರಿ ದೇವರಾಜ್, ಪ್ರಸಂಗಕರ್ತ ರಮೇಶಹೆಗಡೆ ಗುಂಡೂಮನೆ, ಸ್ವಾಗತ ಯುವತಿ ಮಂಡಳಿ ಅಧ್ಯಕ್ಷೆ ಶಾಲಿನಿ, ರಾಮಾರ್ಪಣ ಕಲಾವೇದಿಕೆಯ ಅಧ್ಯಕ್ಷ ಲಕ್ಷ್ಮಣಪೂಜಾರಿ, ವಿ. ಗಣಪತಿ, ಸರ್ಜನ್ಕುಮಾರ್, ಕೆ. ಸುರೇಶ್, ರೇವಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

