ಶಿವಮೊಗ್ಗ

'ಸಮಸ್ಯೆ ಪರಿಹಾರಕ್ಕೆ ಹೋರಾಟ'

Published On :

ಕನ್ನಡಪ್ರಭ ವಾರ್ತೆ, ಭದ್ರಾವತಿ, ನ.7 ಬಗರ್‌ಹುಕುಂ ರೈತರ ಸಮಸ್ಯೆಗೆ ಪರಿಹಾರ ಕಾಣಲು ರೈತ ಸಂಘ ಸದಾ ರೈತರೊಂದಿಗೆ ಸ್ಪಂದಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಹೇಳಿದರು.
ಬದನೆಹಾಳ ಗ್ರಾಮದಲ್ಲಿ ರೈತ ಸಂಘದ ಶಾಖೆ ಉದ್ಘಾಟಿಸಿ, ರೈತರು ದೇಶಕ್ಕೆ ಅನ್ನ ಕೊಡುವ ಅನ್ನದಾತನಾದರೂ ಆತನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಸಿದ್ಧವಿಲ್ಲ. ಇದು ಸರ್ಕಾರದ ಬೇಜವಾಬ್ದಾರಿ ಎತ್ತಿ ತೋರುತ್ತದೆ ಎಂದರು.
ರೈತರು ಸಾಲಗಾರರಲ್ಲ. ಆದರೆ, ಸರ್ಕಾರ ಅವರನ್ನು ಸಾಲದ ಕೂಪದಲ್ಲಿ ನರಳುವಂತೆ ಮಾಡುತ್ತಾ ಬಂದಿದೆ. ಬದನೆಹಾಳ್, ಉದಯನಗರ, ಬಂಡೀಗುಡ್ಡ, ಬೆಳ್ಳಿಗೆರೆ ಪ್ರದೇಶದಲ್ಲಿ ರೈತರು 40 ವರ್ಷಗಳಿಂದ ಕೃಷಿ ಚಟುವಟಿಕೆ ಮಾಡುತ್ತಾ ಬದುಕುತ್ತಿದ್ದಾರೆ. ಆದರೆ, ಅರಣ್ಯ ಒತ್ತುವರಿ ಕಾರಣ ನೀಡಿ ಸರ್ಕಾರ ಈ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿ ಕೃಷಿ ಭೂಮಿ ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ಪ್ರದೇಶದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹೋರಾಟಕ್ಕೆ ರೈತ ಸಂಘ ಸದಾ ನಿಮ್ಮ ಜೊತೆಗಿರುತ್ತದೆ. ನ್ಯಾಯ ದೊರಕುವವರೆಗೂ ಹೋರಾಡೋಣ ಎಂದರು.
ಹಳ್ಳಿಯ ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ರೈತ ಮಹಿಳೆಯರ ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರಗಳನ್ನು ಸಂಘಟಿತವಾಗಿ ಕಂಡುಕೊಳ್ಳಬೇಕಿದೆ ಎಂದರು.
ರೈತರ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕು. ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
 ರೈತರ ಸಾಲ ವಸೂಲಿ ಮಾಡಲು, ಭ್ರಷ್ಟ ಅಧಿಕಾರಿಗಳು ಹೇಳದೇ, ಕೇಳದೇ ಗ್ರಾಮಗಳಿಗೆ ಪ್ರವೇಶಿಸುವುದು ನಿಲ್ಲಬೇಕು. ಈ ಕುರಿತಂತೆ ಗ್ರಾಮದ ಪ್ರವೇಶ ದ್ವಾರದಲ್ಲಿ ಫಲಕ ಹಾಕಲು ನಿರ್ಧರಿಸಲಾಯಿತು.
ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಪುಟ್ಟಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.