ಶಿವಮೊಗ್ಗ

ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

Published On :

ಕನ್ನಡಪ್ರಭ ವಾರ್ತೆ  ಸೊರಬ  ನ.8
ತಾಲೂಕು ಕೋಣನಮನೆ ಗ್ರಾಮದ ಜಟ್ಟೇಶ್ವರ ಯುವಕರ ವಾಲಿಬಾಲ್ ಸಂಘ ಹಾಗೂ ಗ್ರಾಮದ ವಿವಿಧ ಸಂಘ- ಸಂಸ್ಥೆ, ಗ್ರಾಮಸ್ಥರು ಗ್ರಾಮದಲ್ಲಿ 19ನೇ ವರ್ಷದ ಅಂತರ್ ತಾಲೂಕು ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಸೌರಭ ಸಾಂಸ್ಕೃತಿಕ ಟ್ರಸ್ಟ್ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಚಾಲನೆ ನೀಡಿದರು. ಬಾಡದಬೈಲು ನಂದೀಶ್ವರ ಶ್ರೀಗಳು, ಹೆಚ್ಚೆ ಗ್ರಾಪಂ ಅಧ್ಯಕ್ಷ ಜಯಶೀಲಗೌಡ, ಸದಸ್ಯ ಸತ್ಯನಾರಾಯಣ್ ಮೊದಲಾದವರು ಇದ್ದರು.
ಬೇರೆ ಬೇರೆ ತಾಲೂಕಿನ ಒಟ್ಟು 23 ತಂಡಗಳು ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಿದ್ಧಾಪುರ ತಾಲೂಕು ಕುಂಬಾರಕುಳಿ ತಂಡ ವಿನ್ನರ್, ಅದೆ ತಾಲೂಕಿನ ಬಿಳಗಿ ತಂಡ ರನ್ನರ್, ಪ್ರಕಾಶ್, ವಿನಯ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಕ ಪರಮೇಶ್ವರಪ್ಪ, ಹೊಸಕೊಪ್ಪ ಕೆ.ರಮೇಶ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ವಾಲಿಬಾಲ್ ಆಟಗಾರ ಗ್ರಾಮದ ಕೆ.ಆರ್. ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಹುಲ್ತಿಕೊಪ್ಪದ ಎಸ್. ಪುರುಷೋತ್ತಮ, ಕಡಸೂರು ಶಾಲಾ ಸಮಿತಿ ಅಧ್ಯಕ್ಷ ಕೆ.ರಾಮಪ್ಪ, ಕೆ.ಬಿ. ಸತೀಶ್‌ಗೌಡ, ಕನ್ನಪ್ಪ, ನಾರಾಯಣಪ್ಪ, ಅಶೋಕ್, ಲಿಂಗರಾಜ್ ಗೌಡ, ಕೆ.ದಾನಶೇಖರ್, ಕೆ.ದೇವರಾಜ್, ಆರ್. ಹೊಳೆಯಪ್ಪ ಗ್ರಾಮಸ್ಥರು, ಕ್ರೀಡಾಭಿಮಾನಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.