ಶಿವಮೊಗ್ಗ

ಡಿ.9ರವರೆಗೆ ಮರಳು ಗಣಿಗಾರಿಕೆಗೆ ಅವಕಾಶ

Published On :

ಶಿವಮೊಗ್ಗ: ಸುಪ್ರೀಂಕೋರ್ಟ್ನ ಹಸಿರುಪೀಠವು ಮರಳು ಗಣಿಗಾರಿಕೆಗೆ ನಿಲ್ಲಿಸುವಂತೆ ನೀಡಿದ ಆದೇಶಕ್ಕೆ ತಡೆಯಾಗಿದ್ದು, ಮರಳು ಗಣಿಗಾರಿಕೆ ಹಾಗೂ ಸಾಗಾಣೆಗೆ ತಾತ್ಕಾಲಿಕ ಅವಕಾಶ ದೊರಕಿದೆ.
 ಮುಂದಿನ ವಿಚಾರಣೆಯು ಡಿ.11ರಂದು ನಿಗದಿಯಾಗಿದ್ದು, ಈ ನಡುವಿನ ದಿನಗಳಲ್ಲಿ ಮರಳು ಗಣಿಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಮಂಗಳವಾರ ಸಂಜೆ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಅವರು ಸಂಬಂಧಪಟ್ಟ ಇಲಾಖೆಗಳ ಸಭೆ ನಡೆಸಿದ ನಂತರ ನೀಡಿದ ಮಾಹಿತಿಯಂತೆ ತೀರ್ಥಹಳ್ಳಿ ತಾಲೂಕಿನ ಮಹಿಷಿ ಹಾಗೂ ದಬ್ಬಣಗದ್ದೆ ಬ್ಲಾಕ್ಗಳಲ್ಲಿ ಗಣಿಗಾರಿಕೆ ನಡೆಸಲು ಪ್ರತಿದಿನ ತಲಾ 100 ಲಾರಿಗಳಿಗೆ ಅನುಮತಿ ನೀಡಲಾಗುವುದು.
450 ಲಾರಿಗಳಿಗೆ ಪರ್ಮಿಟ್: ಹೊಸನಗರ ತಾಲೂಕಿನ ತ್ರಿಣಿವೆ 25 ಪರ್ಮಿಟ್, ಪುಣಜೆ 15, ಸೋನ್ಲೆ 50, ಭದ್ರಾವತಿ ತಾಲೂಕಿನ ಸಿದ್ಲೀಪುರ 50, ನಾಗಸಮುದ್ರ 25, ಸನ್ಯಾಸಿ ಕೋಡಮಗ್ಗಿ 50, ಶಿವಮೊಗ್ಗ ತಾಲೂಕಿನ ಹಾರ್ನಹಳ್ಳಿಯಲ್ಲಿ 25 ಲಾರಿಗಳಿಗೆ ಪರ್ಮಿಟ್ ಸೇರಿ ಒಟ್ಟು 450 ಲಾರಿಗಳಿಗೆ ಪರ್ಮಿಟ್ ನೀಡಲಾಗುವುದು. ಕೆಲವು ದಿನಗಳ ನಂತರ ನೀರು ಕಡಿಮೆಯಾದರೆ ಪರಿಶೀಲನೆ ನಡೆಸಿ ಇನ್ನಷ್ಟು ಬ್ಲಾಕ್ಗಳನ್ನು ತೆರೆಯಲಾಗುವುದು.
ಆದರೆ, ಈ ಅವಕಾಶ ಡಿ.9ರ ವರೆಗೆ ಮಾತ್ರ. ಅಷ್ಟರೊಳಗೆ ಮತ್ತೆ ನ್ಯಾಯಾಲಯದ ಆದೇಶವೇನಾದರೂ ಬಂದರೆ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್
 ಹೇಳಿದ್ದಾರೆ.
ಸಮಸ್ಯೆ ಏನಾಗಿತ್ತು: ಸುಪ್ರೀಂಕೋರ್ಟ್ನ ಹಸಿರು ಪೀಠವು ಮರಳು ಗಣಿಗಾರಿಕೆಯನ್ನು ನಿಷೇಧಿಸಿ ಇದೇ ನವೆಂಬರ್ 1ರಂದು ಆದೇಶ ನೀಡಿತ್ತು. ಹಾಗಾಗಿ ಎಲ್ಲಿಯೂ ಸಹ ಮರಳು ಗಣಿಗಾರಿಕೆಗೆ ಅವಕಾಶ ನೀಡಿರಲಿಲ್ಲ. ಆದರೆ, ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ನವೆಂಬರ್ 11ರಂದು ತಡೆಯಾಜ್ಞೆ ಸಿಕ್ಕಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಡಿಸೆಂಬರ್ 11ರಂದು ನಿಗದಿಯಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿಯೂ ಸಹ ಮರಳು ಗಣಿಗಾರಿಕೆಗೆ ಇದ್ದ ತಡೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲು ಮುಂದಾಗಿದೆ. ಡಿ.9ರ ವರೆಗೆ ಅವಕಾಶ ನೀಡಿದೆ.
ಆದರೆ ಬುಧವಾರದಿಂದಲೇ ಪರ್ಮಿಟ್ ನೀಡಿಕೆ ಶುರುವಾಗುವುದಿಲ್ಲ. ಮರಳು ಬ್ಲಾಕ್ಗೆ ಸಾಗುವ ರಸ್ತೆಯ ದುರಸ್ತಿ ಇತ್ಯಾದಿ ವ್ಯವಸ್ಥೆ ಮಾಡಿದ ನಂತರ ಮೂರ್ನಾಲ್ಕು ದಿನದಲ್ಲಿ ಶುರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿದ್ದಾರೆ.
ಇನ್ನಷ್ಟು ಅವಕಾಶ ಕೊಡಿ: ಸಭೆಯಲ್ಲಿ ಭಾಗವಹಿಸಿದ್ದ ಮರಳು ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಾಜಶೇಖರ್, ಇನ್ನಷ್ಟು ಬ್ಲಾಕ್ ಗಳಲ್ಲಿ ಮರಳು ಸಂಗ್ರಹಕ್ಕೆ ಅವಕಾಶ ಮಾಡಿಕೊಡಿ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಲಾರಿಗಳಿದ್ದು, ಅನಗತ್ಯ ಪೈಪೋಟಿ ಎದುರಾಗುತ್ತದೆ ಎಂದು ಕೋರಿದರು.
 ಹೊಸನಗರ, ಸಾಗರದ ಲಾರಿಗಳ ಮಾಲೀಕರೂ ಸಹ ಇದೇ ರೀತಿಯ ಕೋರಿಕೆಯನ್ನು ಮಂಡಿಸಿದರು.
ಆಗ ಜಿಲ್ಲಾಧಿಕಾರಿಯವರು ಗಣಿ ಇಲಾಖೆ ಅಧಿಕಾರಿಗಳಿಗೆ ದಬ್ಬಣಗದ್ದೆಯಲ್ಲಿರುವ ಇನ್ನೊಂದು ಬ್ಲಾಕ್, ಬಗ್ಗೋಡಿಗೆ, ಮರಳೂರು, ಹುಣಸವಳ್ಳಿ ಹಾಗೂ ಇನ್ನಿತರ ಬ್ಲಾಕ್ ಗಳಲ್ಲಿ ಅವಕಾಶ ನೀಡಲು ಸಾಧ್ಯವೇ ಎಂದು ಪರಿಶೀಲಿಸಲು ತಿಳಿಸಿದರು.
 ಪರ್ಮಿಟ್ ನೀಡುವ ಕಾರ್ಯ ಆರಂಭವಾಗುವುದರೊಳಗೆ ಸ್ಥಳ ಪರಿಶೀಲನೆ ನಡೆಸಿ ಅವಕಾಶ ನೀಡುವಂತೆ ಸೂಚಿಸಿದರು.
ಜಿಪಿಎಸ್ ನಿರ್ವಹಣೆ ಬಗ್ಗೆ ಲಾರಿ ಮಾಲೀಕರು ಆಕ್ಷೇಪಣೆ ಎತ್ತಿದಾಗ, ಮರು ಸಂಪರ್ಕಕ್ಕೆ 250 ಹಾಗೂ ತಿಂಗಳ ಶುಲ್ಕ 250 ನೀಡಿದರೆ ಪರ್ಮಿಟ್ ದೊರೆಯುತ್ತದೆ ಎಂದು ಖಡಾಖಂಡಿತವಾಗಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಉಪವಿಭಾಗಾಧಿಕಾರಿಗಳಾದ ಉದಯಕುಮಾರ್, ಕುಸುಮಾ ಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.