ಶಿವಮೊಗ್ಗ

ವಿರೋಧಿಗಳ ವಿಶ್ವಾಸಗಳಿಸಿ ಸಮಸ್ಯೆ ಪರಿಹರಿಸಿ

Published On :

ಕ.ಪ್ರ.ವಾರ್ತೆ, ಶಿಕಾರಿಪುರ, ನ. 12 ವಿರೋಧಿಗಳ ವಿಶ್ವಾಸಗಳಿಸಿ ಅವರ ಸಮಸ್ಯೆ ಪರಿಹರಿಸುವುದು ಉತ್ತಮ ನಾಯಕತ್ವದ ಗುಣವಾಗಿದ್ದು, ಈ ದಿಸೆಯಲ್ಲಿ ಶಿಕಾರಿಪುರ ಬ್ರಾಹ್ಮಣ ಸಮಾಜದಲ್ಲಿನ ಸದಸ್ಯರಿಗೆ ಸೂಕ್ತವಾಗಿ ಸ್ಪಂದಿಸಿರುವ ತೃಪ್ತಿ ಹೊಂದಿರುವಾದಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಮ.ಸ ನಂಜುಂಡಸ್ವಾಮಿ ತಿಳಿಸಿದರು.
ಮಂಗಳವಾರ ಪಟ್ಟಣದ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಚುನಾವಣಾ ಹಿನ್ನಲೆಯಲ್ಲಿ ನಡೆದ ತಾಲೂಕು ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿಯೂ  ಕೆಲವು ಅವಕಾಶಗಳು ಆಕಸ್ಮಿಕವಾಗಿ ಲಭಿಸಲಿದ್ದು, ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಕ್ರಿಯಾಶೀಲ: ತಾಲೂಕು ಸಮಾಜದಿಂದ ಅವಿರೋಧವಾಗಿ ಆಯ್ಕೆಯಾದ ನ್ಯಾಯವಾದಿ ವಸಂತಮಾಧವ ಮಾತನಾಡಿ, ಕೆಲ ಆಂತರಿಕ ಭಿನ್ನಾಭಿಪ್ರಾಯದಿಂದ ಸಂಘ ಕೆಲ ವರ್ಷದ ಹಿಂದೆ ನಿಷ್ಕ್ರಿಯವಾಗಿದ್ದು, ಇದೀಗ ಸದಸ್ಯರು ಅತ್ಯಂತ ಕ್ರಿಯಾಶೀಲವಾಗಿದ್ದಾರೆ ಎಂದರು.
ತಾ.ವಿಪ್ರ ಸಂಘದ ಅಧ್ಯಕ್ಷ ಗಣಪತಿಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಸಂಘಟನೆ,ಸಾಮರ್ಥ್ಯದ ವ್ಯಕ್ತಿಯ ಆಯ್ಕೆಯಿಂದ ಮಾತ್ರ ತಾಲೂಕು ಸಮಾಜಕ್ಕೆ ಸಹಕಾರ, ಸಹಾಯ ಸಾಧ್ಯವಿದ್ದು, ಈ ದಿಸೆಯಲ್ಲಿ ಉತ್ತಮ ನಿರ್ಣಯ ಕೈಗೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ವಸಂತಮಾಧವರನ್ನು ಅಭಿನಂದಿಸಲಾಯಿತು. ಅಭ್ಯರ್ಥಿ ಜನಾರ್ಧನ ಅಯ್ಯಂಗಾರ್, ಹರನಾಥರಾವ್, ಸ್ಥಳೀಯ ಮುಖಂಡ ಚಿದಂಬರ ದೀಕ್ಷಿತ್, ಬೇಗೂರು ಸುಬ್ಬಣ್ಣ, ನ್ಯಾಯವಾದಿ ಶಶಿಧರ, ಬಾಲಕೃಷ್ಣ ಜೋಯಿಸ್, ಮಂಜುನಾಥ್, ಪ್ರಕಾಶ್ ಹೋತನಕಟ್ಟೆ, ಪ್ರದೀಪಪ್ ದೀಕ್ಷಿತ್, ವೀಣಾ, ಸುಗುಣ, ವತ್ಸಲ, ಉಮೇಶ್ ಭಟ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.