ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧಾರ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ನ.13
ಈ ಬಾರಿಯ ಶಿವಮೊಗ್ಗ ಲೋಕಸಭಾ ಚುನಾವಣೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಜಯಗಳಿಸುವ ಸಂಪೂರ್ಣ ವಿಶ್ವಾಸವಿರುವ ವ್ಯಕ್ತಿಯನ್ನು ಕಣಕ್ಕಿಳಿಸುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸಭೆಯ ಮುಖ್ಯ ಸಚೇತಕರಾದ ನಂತರದಲ್ಲಿ ಇದೇ ಪ್ರಥಮ ಬಾರಿಗೆ ಬುಧವಾರ ಶಿಕಾರಿಪುರಕ್ಕೆ ಆಗಮಿಸಿದ್ದ ಅವರಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಕೆಜೆಪಿ ಪಕ್ಷದಿಂದ ಸ್ವರ್ಧಿಸಿ ಜೆಡಿಎಸ್ ವಿರುದ್ಧ ಗೆದ್ದು ಆಯ್ಕೆಯಾಗಲಿ ಎಂದು ಸವಾಲೆಸೆದ ಅವರು, ಇಲ್ಲದಿದ್ದಲ್ಲಿ ಪುರಸಭೆಗೆ ವಾಪಾಸು ತೆರಳ ಬೇಕಾಗಲಿದೆ ಎಂದು ವ್ಯಂಗ್ಯವಾಡಿದರು.
ಮಾಜಿ ಸಿಎಂ ಯಡಿಯೂರಪ್ಪನವರು ಹಿರಿಯರು ಎಂಬ ಗೌರವ ಭಾವನೆಯನ್ನು ಹೊಂದಿದ್ದು ಆದರೆ ಮಗ ರಾಘವೇಂದ್ರರಿಗೆ ಹಿರಿಯ ಮುಖಂಡರ ಬಗ್ಗೆ ಆಸಡ್ಡೆ ಭಾವನೆ ಹೊಂದಿದ್ದಾರೆ ಎಂದ ಅವರು ಪುರಸಭೆಯಿಂದ ದಿಢೀರನೆ ದೆಹಲಿ ದರ್ಶನದಿಂದ ಈ ರೀತಿಯಾಗಿದೆ ಎಂದು ಅಣುಕಿಸಿದರು.
ಬಗರ್ಹುಕುಂ ಸಾಗುವಳಿದಾರ ರೈತರ ಒಕ್ಕಲೆಬ್ಬಿಸುವಿಕೆಯನ್ನು ತೀವ್ರವಾಗಿ ವಿರೋಧಿಸಿದ ಅವರು, ಇಂತಹ ಕೃತ್ಯದಿಂದ ಮುಳುಗಡೆ ಪ್ರದೇಶದಿಂದ ಸ್ಥಳಾಂತರಗೊಂಡ ರೈತರ ಪರಸ್ಥಿತಿ ಶೋಚನೀಯವಾಗಲಿದ್ದು ಸರ್ಕಾರ ಕೂಡಲೇ ಅರಣ್ಯ ಹಾಗೂ ಕಂದಾಯ ಭೂಮಿಯ ಸಮೀಕ್ಷೆ ನಡೆಸಿ ಒತ್ತುವರಿ ಕೆರೆ ಜಾಗವನ್ನು ವಶಪಡಿಸಿಕೊಂಡು ರೈತ ವರ್ಗಕ್ಕೆ ರಕ್ಷಣೆ ನೀಡಿ ಹಕ್ಕುಪತ್ರ ವಿತರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಬಳಿಗಾರ್ ಮಾತನಾಡಿದರು. ನಾಗನಗೌಡ ಪಾಟೀಲ್, ಜಯಾನಾಯ್ಕ, ಚಂದ್ರಪ್ಪ, ಗಜೇಂದ್ರ, ರಶೀದಾಬಾನು, ರಾಮಲಿಂಗಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

