ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಎಟಿಎಂ ತೆರೆಯಲು ಆಗ್ರಹ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ನ.15
ಬಹುತೇಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದ ಬಸ್ಸು ನಿಲ್ದಾಣಗಳಲ್ಲಿ ಎಟಿಎಂ ಕೇಂದ್ರಗಳಿವೆ. ಆದರೆ, ರಾಜ್ಯದಲ್ಲೇ ಮಾದರಿ ಬಸ್ಸು ನಿಲ್ದಾಣ ಎಂದು ಹೆಸರು ಪಡೆದಿರುವ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಎಟಿಎಂ ಕೇಂದ್ರ ಇಲ್ಲದೆ ಪ್ರಯಾಣಿಕರು ಪರಿತಪಿಸುವಂತಾಗಿದೆ.
ಗ್ರಾಮೀಣ ಮತ್ತು ನಗರ ಭಾಗದ ಜನರು ಬ್ಯಾಂಕ್ ಸೌಲಭ್ಯವನ್ನು ಹೊಂದಿದ್ದು, ಎಲ್ಲರಿಗೂ ಬ್ಯಾಂಕ್ ವ್ಯವಹಾರದ ಅರಿವಿರುತ್ತದೆ. ದೂರದ ಊರುಗಳಿಂದ ಶಿವಮೊಗ್ಗ ನಗರಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಗರದ ಎರಡು ಬಸ್ಸು ನಿಲ್ದಾಣಗಳಲ್ಲಿ ಎಟಿಎಂ ಕೇಂದ್ರಗಳಿಲ್ಲದಿರುವುದು ಅನಾನುಕೂಲ ಉಂಟಾಗಿದೆ.
ಹಣಕ್ಕಾಗಿ ಅಲೆದಾಟ: ತುರ್ತು ಸಂದರ್ಭದಲ್ಲಿ ಎಟಿಎಂನಿಂದ ಹಣ ಪಡೆಯ ಬೇಕೆಂದರೆ ಬಿ.ಎಚ್. ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂ ಕೇಂದ್ರಕ್ಕೆ ಬರಬೇಕು. ಅಲ್ಲಿಯೂ ಕೆಲವೊಮ್ಮೆ ಎಟಿಎಂ ಯಂತ್ರ ಸರಿಯಾಗಿ ಕೆಲಸ ಮಾಡದಿದ್ದರೆ ಗೋಪಿ ವೃತ್ತ, ಜಿಲ್ಲಾಧಿಕಾರಿ ಕಚೇರಿ ಆವರಣ ಸೇರಿದಂತೆ ಕಿ.ಮೀ.ಗಟ್ಟಲೇ ದೂರ ಕ್ರಮಿಸಬೇಕು. ನೂರಾರು ಕಿ.ಮೀ. ಬಸ್ನಲ್ಲಿ ಪ್ರಯಾಣ ಮಾಡಿ ಬಂದಂತಹ ಪ್ರಯಾಣಿಕರಿಗೆ ಇದು ನುಂಗಲಾರದ ತುತ್ತಾಗಿದೆ.
ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಬಸ್ಸು ನಿಲ್ದಾಣದಲ್ಲಿ ಎಟಿಎಂ ಕೇಂದ್ರ ತೆರೆಯಲು ಸಂಬಂಧಪಟ್ಟವರು ಮುಂದಾಗಬೇಕು.
ನಾನು ಶಿಕಾರಿಪುರದಿಂದ ಕೃಷಿಗೆ ಸಂಬಂಧಿಸಿದ ಸಲಕರಣಿಗಳನ್ನು ಕೊಂಡೊಯ್ಯಲು ಬಂದಿದ್ದು, ಜೇಬುಕಳ್ಳರ ಹಾವಳಿ ಇರುವುದರಿಂದ ನಗದು ತಂದಿಲ್ಲ. ಬದಲಿಗೆ ಎಟಿಎಂ ಕಾರ್ಡ್ ತಂದಿದ್ದೆ. ಹೇಳುವುದಕ್ಕೆ ಹೈಟೆಕ್ ಬಸ್ ನಿಲ್ದಾಣ ಆದರೆ, ಬಸ್ ನಿಲ್ದಾಣದಲ್ಲಿ ಒಂದು ಎಟಿಎಂ ಕೇಂದ್ರ ಇಲ್ಲದಿರುವುದು ಬೇಸರ ತಂದಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಟಿಎಂ ಕೇಂದ್ರ ತೆರೆದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
ಟಿ ಕಾಶಿನಾಥ್, ಕೃಷಿಕ, ಶಿಕಾರಿಪುರ
ಗುತ್ತಿಗೆ ರೂಪದಲ್ಲಿ ಬಸ್ ನಿಲ್ದಾಣವನ್ನು ಕೆಎಸ್ಎಂಜೆಡ್ ಎಂಬ ಖಾಸಗಿ ಸಂಸ್ಥೆಗೆ ನೀಡಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಬಳಸುವಂತೆ ಇಲಾಖೆ ಸೂಚಿಸಿದೆ. ಆದರಿಂದ ಎಟಿಎಂ ಕಾರ್ಡ್ ತೆರೆಯಲು ಇಲಾಖೆಯಿಂದ ಯಾವುದೇ ಅಭ್ಯಂತರವಿಲ್ಲ. ಸಂಸ್ಥೆಯ ಒಪ್ಪಿಗೆ ಪಡೆದು ಬ್ಯಾಂಕುಗಳು ಎಟಿಎಂ ಕೇಂದ್ರ ತೆರೆಯಬಹುದು.
ಟಿ ಎಲ್.ಎನ್. ಗೌಡ, ಕೆಎಸ್ಅರ್ಟಿಸಿ ಡಿಪೋ ವ್ಯವಸ್ಥಾಪಕ
ನಮ್ಮ ಬ್ಯಾಂಕ್ನಿಂದ ಎರಡು ಎಟಿಎಂ ಕೇಂದ್ರ ತೆರೆಯಲು ಕೆಎಸ್ಎಂಜೆಡ್ ಸಂಸ್ಥೆಯಿಂದ ಅನುಮತಿ ಪಡೆದಿದ್ದೇವೆ. ಬ್ಯಾಂಕ್ನ ದೆಹಲಿಯ ಕೇಂದ್ರ ಶಾಖೆಗೆ ಯಂತ್ರಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಂತ್ರಗಳು ಬಂದ ನಂತರ ಮುಂದಿನ ಎರಡು ತಿಂಗಳಲ್ಲಿ ಬಸ್ ನಿಲ್ದಾಣದಲ್ಲಿ ಎಟಿಎಂ ಯಂತ್ರಗಳು ಕಾರ್ಯನಿರ್ವಹಿಸಲಿದೆ.
ಟಿ ಎಲ್. ಸುಬ್ಬರಾವ್, ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

