ಸೊರಗುತ್ತಿರುವ ಶರಾವತಿ ಸಂತ್ರಸ್ತರು: ಸೌಕರ್ಯಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ಶಿವಮೊಗ್ಗ, ನ.17 ರಾಜ್ಯದ ಜನತೆಗೆ ಬೆಳಕು ನೀಡಲು ಸಹಕರಿಸಿದ ಶರಾವತಿ ಮುಳುಗಡೆ ಸಂತ್ರಸ್ರಸ್ತರು ಸಾಗರ ಹಾಗೂ ಶಿವಮೊಗ್ಗ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಹಲವು ಗ್ರಾಮಗಳಲ್ಲಿದ್ದು, ಅವರು ಮೌಲ ಸೌಕರ್ಯವಿಲ್ಲದೇ ಕೊಳೆಯುವಂತಾಗಿದೆ.
200ರಿಂದ 250 ಮನೆಗಳನ್ನು ಹೊಂದಿರುವ ಕೋಣೆಹೊಸೂರು, ಇಡ್ಲಿಸರ, ತೋಟದಸರ, ಬಾಳೆಕೊಪ್ಪ, ಬೇಡನಹಳ್ಳ ಎಂಬ ಗ್ರಾಮಗಳಲ್ಲಿ ತಮ್ಮ ಜಮೀನಿಗೆ ಹೊಂದಿಕೊಂಡಂತೆ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿಕೊಂಡಿದ್ದು ಇವರಿಗೆ ಸಮರ್ಪಕ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಹಾಗೆಯೇ ವಿದ್ಯುತ್ ಸೌಲಭ್ಯ ಇಲ್ಲದೇ ಜೀವನ ಕತ್ತಲೆಯಲ್ಲೇ ತಳ್ಳುವಂತಾಗಿದೆ.
ಜನರ ಉಪಯೋಗಕ್ಕೆಂದು ಕೆಲವು ವರ್ಷಗಳ ಹಿಂದೆ ರಾ.ಹೆ. (206) ಕೋಣೆಹೊಸೂರು ಬಸ್ಸುನಿಲ್ದಾಣದಿಂದ ಇಡ್ಲಿಸರ, ತೋಟದಸರ, ಬಾಳೆಕೊಪ್ಪ, ಬೇಡನಹಳ್ಳದ ಮುಖಾಂತರ ಶಿಕಾರಿಪುರಕ್ಕೆ ಸೇರುವ ರಸ್ತೆಯನ್ನು ನಬಾರ್ಡ್ ಯೊಜನೆಯಡಿ ಹಸ್ತೆ ಕಾಮಗಾರಿ ನಡೆಸಿದ್ದು, ಬಾಳೆಕೊಪ್ಪ ಹಾಗೂ ಕೋಣೆಹೊಸೂರು ಬಸ್ಸು ನಿಲ್ದಾಣದ ಮಧ್ಯ ಭಾಗದಲ್ಲಿನ ಹಳ್ಳದ ಸೇತುವೆ ಮಳೆಯಲ್ಲಿ ಕೊಚ್ಚಿಹೋಗಿದೆ.
ಸರ್ಕಾರದ ನಿರ್ಲಕ್ಷ್ಯ: ಈ ರಸ್ತೆಯ ಮೂಲಕ ರೈತರು ಬೆಳೆದ ಬೆಳೆ ಮಾರುಕಟ್ಟೆಗೆ, ಅನಾರೋಗ್ಯಕ್ಕೆ ತುತ್ತಾದವರು ಆಸ್ಪತ್ರೆಗೆ, ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಶಾಲೆಗೆ, ಹೋಗಲಾರದೆ ಮಕ್ಕಳ ಭವಿಷ್ಯ ಶೂನ್ಯವಾಗಿ, ರೈತರ ಭವಿಷ್ಯ ಸೊನ್ನೆಯಾಗಿ ಪರಿಣಮಿಸಿದೆ. ಇದುವರೆಗೂ ಸೇತುವೆ ಪುನರ್ ನಿರ್ಮಾಣಗೊಳ್ಳದೇ ಇರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
ಗ್ರಾಮ ಸ್ವರಾಜ್ಯ ಕನಸನ್ನು ಹೇಳುವ ಸರ್ಕಾರ ಇದುವರೆಗೂ ಗ್ರಾಪಂ, ತಾಪಂ, ಜಿಪಂಗಳ ಮುಖಾಂತರ ಬಿಡಿಗಾಸನ್ನು ನೀಡದೇ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಗ್ರಾಮಗಳು ಕುಗ್ರಾಮವಾಗಿದೆ. ಸರ್ಕಾರದ ಹಲವು ಯೋಜನೆಗಳಲ್ಲಿ ಒಂದಾದ ಗ್ರಾಮ ಸಡಕ್, ಜಲಾನಯನ ಯೊಜನೆಗಳು ಈ ಗ್ರಾಮಗಳಿಗೆ ತಲುಪದೇ ಇರುವುದಕ್ಕೆ ಹಾಳಾದ ರಸ್ತೆ ಹಾಗೂ ಹೂಳು ತುಂಬಿದ ಕೆರೆಗಳೇ ಸಾಕ್ಷಿಯಾಗಿದೆ. ಶಿವಮೊಗ್ಗ ಗ್ರಾಮಾಂತರ ವಿಭಾನಸಭಾ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ಇನ್ನಾದರೂ ಈ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತಾರೆಯೇ ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

