'ಲಾರಿ ಚಾಲಕರಿಗೆ ರಕ್ಷಣೆ ನೀಡಿ'
ಶಿವಮೊಗ್ಗ: ಕಾನೂನು ಪ್ರಕಾರ ಜಿಲ್ಲೆಯಲ್ಲಿ ಮರಳು ಸಾಗಾಣೆ ಮಾಡುತ್ತಿರುವ ಲಾರಿ ಚಾಲಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿ ಶಿವಮೊಗ್ಗ ಕಟ್ಟಡ ಸಾಮಾಗ್ರಿ ಸರಬರಾಜು ಲಾರಿ ಮಾಲೀಕರ ಸಂಘ ಶುಕ್ರವಾರ ಉಸ್ತುವಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಮನವಿ ಮಾಡಿದೆ.
ಕಾನೂನಿನ್ವಯ ಲಾರಿಗಳಿಗೆ ಜಿಪಿಎಸ್ ಅಳವಡಿಸಿಕೊಂಡು ಜಿಲ್ಲಾಡಳಿತ ಗುರುತಿಸುವ ಲೋಡಿಂಗ್ ಪಾಯಿಂಟ್ಗಳಲ್ಲಿ ಮರಳು ತುಂಬುವ ಲಾರಿ ಚಾಲಕರಿಗೆ ಕೆಲವರು ಮರಳು ತುಂಬದಂತೆ ತಾಕಿತು ಮಾಡುತ್ತಿದ್ದಾರೆ. ಅಲ್ಲದೇ ಲೋಡಿಂಗ್ ಪಾಯಿಂಟ್ ಗಳಿಗೆ ಹೋದರೆ ಲಾರಿ ಚಾಲಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದರಿಂದ ಲಾರಿ ಚಾಲಕರಿಗೆ ರಕ್ಷಣೆ ಒದಗಿಸಬೇಕು. ಮರಳು ತುಂಬುವ ಸ್ಥಳದಲ್ಲಿ ಸೂಕ್ತ ಭದ್ರತೆ ನೀಡಬೇಕು ಎಂದು ಸಂಘ ಮನವಿಯಲ್ಲಿ ಆಗ್ರಹಿಸಿದೆ.
ಅವಕಾಶ ನೀಡುತ್ತಿಲ್ಲ: ಭದ್ರಾವತಿ ತಾಲೂಕಿನ ನಾಗಸಮುದ್ರ, ಸನ್ಯಾಸಿ ಕೊಡಮಗ್ಗಿ, ಸಿದ್ಲಿಪುರ, ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಭಾಗಗಳಲ್ಲಿ ಮರಳು ಲೋಡಿಂಗ್ ಪಾಯಿಂಟ್ ಸ್ಥಳಗಳನ್ನು ಗುರುತಿಸಲಾಗಿದೆ. ಅದರಂತೆ ಕಾನೂನು ಪ್ರಕಾರ ನ.21ರಿಂದ ಲೋಕೋಪಯೋಗಿ ಇಲಾಖೆಯಿಂದ ಪರವಾನಿಗೆ ಪಡೆದು ಮರಳು ಸಾಗಾಣೆಗೆ ಸಂಬಂಧಿಸಿದ ಲೋಡಿಂಗ್ ಪಾಯಿಂಟ್ ತೆರಳುತ್ತಿವೆ. ಆದರೆ, ಲೋಡಿಂಗ್ ಪಾಯಿಂಟ್ ಸ್ಥಳಗಳಲ್ಲಿ ಕೆಲವರು ಲಾರಿಗಳಿಗೆ ಮರಳು ತುಂಬಲು ಅವಕಾಶ ನೀಡುತ್ತಿಲ್ಲ. ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಸರಿ ಸುಮಾರು 200 ಲಾರಿಗಳು ಕಳೆದ ಹಲವು ದಿನಗಳಿಂದ ನಿಂತಲ್ಲಿಯೇ ನಿಲ್ಲುವಂತಾಗಿದೆ. ಇದರಿಂದ ಲಾರಿ ಮಾಲೀಕರು, ಚಾಲಕರು, ಕೂಲಿ ಕಾರ್ಮಿಕರು ತೊಂದರೆ ಪಡುವಂತಾಗಿದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ. ಕೂಡಲೇ ಲೋಡಿಂಗ್ ಪಾಯಿಂಟ್ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆಯ ವ್ಯವಸ್ಥೆ ಮಾಡಬೇಕು. ಪರ್ಮಿಟ್ ಪಡೆದು ಮರಳು ತುಂಬಲು ಅವಕಾಶ ಮಾಡಿಕೊಡಬೇಕು. ಮರಳು ತುಂಬಲು ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಿ. ರಾಜಶೇಖರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

