ಶಿವಮೊಗ್ಗ

ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಪುರುಷೋತ್ತಮ ಅಭಿಮತ

Published On :

ಸಾಗರ: ಕನ್ನಡ ರಾಜ್ಯೋತ್ಸವ ಕನ್ನಡಿಗರ ಬದುಕಿನ ನಿತ್ಯೋತ್ಸವವಾಗಬೇಕು. ನಾವು ಕನ್ನಡಿಗರು ಎಂಬ ತೃಪ್ತಿ ಮಾತ್ರ ಸಾಕಾಗುವುದಿಲ್ಲ. ಬದಲಾಗಿ ಭಾಷೆ ಬೆಳವಣಿಗೆಗೆ ನಾವು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಪುರುಷೋತ್ತಮ ಹೇಳಿದರು.
ತಾಲೂಕಿನ ಮಡಸೂರು ಲಿಂಗದಹಳ್ಳಿಯಲ್ಲಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಉಳಿಸಿಕೊಳ್ಳುವ ವಿಷಯದಲ್ಲಿ ಕನ್ನಡಿಗರು ಇನ್ನಷ್ಟು ಗಟ್ಟಿ ನಿಲುವು ತೆಳೆಯಬೇಕು. ಇಂದಿಗೂ ದೊಡ್ಡ- ದೊಡ್ಡ ನಗರಗಳಲ್ಲಿ ಕನ್ನಡ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಗ್ರಾಮಾಂತರ ಪ್ರದೇಶಗಳು ಕನ್ನಡ, ಸಂಸ್ಕೃತಿ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ಕೆ. ವಿಜಯಕುಮಾರ್, ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ. ನಮ್ಮ ಸಂಸ್ಕೃತಿ ಉಳಿಸುವಲ್ಲಿ ನಾವು ಹೆಚ್ಚು ನಿಗಾ ವಹಿಸಬೇಕು. ವಿಶ್ವದಲ್ಲಿಯೆ ಕನ್ನಡ ಭಾಷೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಹೊಂದಿದೆ. ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದರೂ ಈತನಕ ಸೂಕ್ತ ಸೌಲಭ್ಯ ಒದಗಿಸದೆ ಇರುವುದು ಖಂಡನೀಯ ಎಂದು ಹೇಳಿದರು.
ನಾಟಿ ವೈದ್ಯರಾದ ಎಂ.ಕೆ. ಶಿವಪ್ಪ ಗುಡ್ಡಕೌತಿ ಹಾಗೂ ಚೌಡಪ್ಪ ಗೌಡ ಕೋಳಿಸಾಲು ಇವರನ್ನು ಸನ್ಮಾನಿಸಲಾಯಿತು. ತಾಲೂಕು ಮಟ್ಟದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಸದಸ್ಯ ಸೈಯದ್ ಇಕ್ಬಾಲ್, ಸುರೇಶ್ ಮೇಸ್ತ್ರಿ, ಸೈಯದ್ ತನ್ವೀರ್, ದಿನೇಶ್, ಪದ್ಮನಾಭ, ಸೌಭಾಗ್ಯ, ಸಾವಿತ್ರಮ್ಮ, ನಾಗರತ್ನಮ್ಮ, ಆಶಾ, ಜಯಮ್ಮ, ನಾರಾಯಣ ಪೂಜಾರ್, ಸಣ್ಣಪ್ಪ, ನಾಗರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.