ನಿವೇಶನ ಹಂಚಿಕೆ: ಪ್ರತಿಭಟನೆ
ಕ.ಪ್ರ.ವಾರ್ತೆ, ಶಿಕಾರಿಪುರ, ನ. 25
ತಾಲೂಕಿನ ಹೊಸಗೊದ್ದನಕೊಪ್ಪ ಗ್ರಾಮದಲ್ಲಿ ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದೆ ಎಂದು ಹೊಸಮುಗಳಗೆರೆ ಗ್ರಾಮಸ್ಥರು ತಾಪಂ ಎದುರು ಸೋಮವಾರ ಧರಣಿ ನಡೆಸಿದರು.
ಹೊಸಗೊದ್ದನಕೊಪ್ಪ ಗ್ರಾಪಂ, ಹೊಸಮುಗಳಗೆರೆ ಸರ್ವೆ ನಂ. 18ರಲ್ಲಿ 10- 20 ಗುಂಟೆ ಜಮೀನು ಗೋಮಾಳವಾಗಿದ್ದು, ಸರ್ಕಾರ ನಿವೇಶನ ಇಲ್ಲದವರಿಗೆ ಮಂಜೂರು ಮಾಡಿತ್ತು. ಅದರಲ್ಲಿ 209 ನಿವೇಶನಗಳಾಗಿ ವಿಂಗಡಿಸಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಖಾತೆ ಏರಿಸಿ ನಿವೇಶನ ನೀಡಿದ್ದರು. ಆದರೆ, 2012ರಲ್ಲಿ ಪಿಡಿಒ ರಾಜಕೀಯ ನಡೆಸಿ ಅರ್ಹ ಫಲಾನುಭವಿಗಳ ಖಾತೆ ವಜಾ ಮಾಡಿ, ತಮಗೆ ಬೇಕಾದವರಿಗೆ ಖಾತೆ ಏರಿಸಲು ಪಂಚಾಯಿತಿ ನಡಾವಳಿ ಮಾಡಿಕೊಂಡಿದ್ದಾರೆ.
ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರು ಬೆಂಬಲ ನೀಡಿದ್ದಲ್ಲದೆ ಪ್ರತಿಭಟಿಸಿದ 14 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಧರಣಿ ನಿರತರು ದೂರಿದರು.
ಗೊದ್ದನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 30 ಲಕ್ಷ ದುರುಪಯೋಗವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಕಾನೂನುಕ್ರಮ ಜರುಗಿಸಿ ಜೈಲಿಗೆ ಕಳುಹಿಸಬೇಕು. ನಿವೇಶನ ಪಡೆಯಲು ಉಳ್ಳವರು ರಾಜಕೀಯ ನಡೆಸಿದ್ದು, ಬಡವರಿಗೆ ಮೋಸವಾಗಿದೆ. ಪರಿಶೀಲನೆ ನಡೆಸಿ ಬಡವರಿಗೆ ನಿವೇಶನ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬೂದ್ಯಪ್ಪ, ವಿನಾಕಾರಣ ಊರಿನಲ್ಲಿ ಅಶಾಂತಿ ಮತ್ತು ಶಾಂತಿ ಭಂಗಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಕಾರಣಕರ್ತರಾಗಿದ್ದು, ಕೂಡಲೇ ಮರು ಪರಿಶೀಲನೆ ನಡೆಸಿ ಅರ್ಹರಿಗೆ ನಿವೇಶನ ನೀಡಿ ಮೋಸದ ಪಟ್ಟಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಎಸ್.ಕೆ. ಸಿದ್ದಲಿಂಗಪ್ಪ, ಗುರುಬಸಪ್ಪ, ತಿರುಕಪ್ಪ, ರುದ್ರಪ್ಪ, ಪೂಜಾರ್ ಬಸವರಾಜಪ್ಪ, ಸಿದ್ದಪ್ಪ, ಪ್ರಮೀಳಮ್ಮ, ಯಶೋಧ ಸೇರಿದಂತೆ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

