ರಾಜಕಾರಣಿಗಳು ಆತ್ಮಹತ್ಯೆ ಮಾಡಿಕೊಂಡಲ್ಲಿ ನಾವೇ ಪರಿಹಾರ ನೀಡುತ್ತೇವೆ: ಶಿವಪ್ಪ
ಶಿಕಾರಿಪುರ: ರೈತನ ಆತ್ಮಹತ್ಯೆಗೆ ಲಕ್ಷ ಪರಿಹಾರ ಘೋಷಿಸಿ ಸಮಾಧಾನಪಟ್ಟುಕೊಳ್ಳುತ್ತಿರುವ ರಾಜಕಾರಣಿಗಳು ತಮ್ಮ ಐಷಾರಾಮಿ ಜೀವನವನ್ನು ತ್ಯಜಿಸಿ ಆತ್ಮಹತ್ಯೆ ಮಾಡಿಕೊಂಡಲ್ಲಿ ರೈತ ವರ್ಗದ ಪರವಾಗಿ ವೈಯುಕ್ತಿಕವಾಗಿ 20 ಲಕ್ಷ ಪರಿಹಾರ ನೀಡುವುದಾಗಿ ತಾಲೂಕು ರೈತ ಸಂಘದ ಮುಖಂಡ ಈಸೂರು ಗ್ರಾಮದ ಶಿವಪ್ಪ ಬೇಗೂರು ಸವಾಲು ಹಾಕಿದರು.
ಶನಿವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘದ ವತಿಯಿಂದ ಬೆಳಗಾಂ ಸುವರ್ಣ ವಿಧಾನಸೌಧ ಮುಂಭಾಗ ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಶರಣಾದ ರೈತ ವಿಠಲ ಅರಬಾವಿ ಹಾಗೂ ತಾಲೂಕಿನ ಮಹಾಂತಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಿ, ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇವಲ ರೈತ ವರ್ಗದ ಪರವಾಗಿರುವ ರೀತಿ ಮೊಸಳೆ ಕಣ್ಣೀರು ಸುರಿಸುವ ಮುಖ್ಯಮಂತ್ರಿ, ಸಚಿವರು, ರೈತರು ಬೆಳೆದಿರುವ ಭತ್ತ, ಜೋಳ ಮತ್ತಿತರ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಕೇವಲ 25 ಕ್ವಿ. ಮಾತ್ರ ಖರೀದಿಸುವ ಮೂಲಕ ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ತಾ.ರೈತ ಸಂಘದ ಅದ್ಯಕ್ಷ ಶಿವಯೋಗಿ ಕೆಂಚಳ್ಳಿ ಮಾತನಾಡಿ, ಭ್ರಷ್ಟ ಸರ್ಕಾರ,ಅಧಿಕಾರಿಗಳ ವಿರುದ್ಧ ರೈತರು ನಿರಂತರವಾಗಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.
ಭತ್ತ, ಜೋಳ,ರಾಗಿ ಬೆಳೆಗೆ 30 ಸಾವಿರ ರು. ಹಾಗೂ ಹತ್ತಿಗೆ 8.5 ಸಾವಿರ, ಕಬ್ಬಿಗೆ 3 ಸಾವಿರ ಬೆಂಬಲ ಬೆಲೆಗೆ ಆಗ್ರಹಿಸಿ ಮೈಕೋ ಕಂಪನಿಯ ಕಳಪೆ ಕನಕ ಹತ್ತಿ ಬೀಜಕ್ಕೆ ಪರಿಹಾರವಾಗಿ ಎಕರೆಗೆ 50 ಸಾವಿರ ಪರಿಹಾರ ಸಹಿತ ವಿವಿಧ ಬೇಡಿಕೆಗೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಹಾವೇರಿ ಜಿಲ್ಲಾ ಪ್ರ.ಕಾ ರಾಜು ಪೂಜಾರ್, ಹಿರೇಕೇರೂರು ತಾ. ಅಧ್ಯಕ್ಷ ರಾಜಶೇಖರ್ ದೂದಿಹಳ್ಳಿ, ಶಿಕಾರಿಪುರ ತಾ. ಕಾರ್ಯದರ್ಶಿ ಪರಮೇಶ್ವರಪ್ಪ ಕೇರೂರು, ಗಂಗಮ್ಮ ಅನ್ನದಾನಿ, ಸತೀಶ್, ಪ್ರವೀಣ, ಶ್ರೀಪತಿ ಆಚಾರ್, ರೇವಣಪ್ಪ, ಶಿವರುದ್ರಪ್ಪ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

