15 ದಿನದಲ್ಲಿ ಬೆಳೆಹಾನಿ ಪರಿಹಾರ ನೀಡದಿದ್ದರೆ ಹೋರಾಟ: ಎಚ್ಡಿಕೆ
ಶಿವಮೊಗ್ಗ: ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿ ಅಧಿಕೃತ ಮಾಹಿತಿಯಂತೆ 3,231 ಕೋಟಿ. ಇದಕ್ಕೆ ಪ್ರತಿಯಾಗಿ ಬಿಡುಗಡೆಯಾಗಿರುವ ಸಿಆರ್ಎಫ್ ನಿಧಿ 10.46 ಕೋಟಿ ಮಾತ್ರ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಹಾನಿಯಾಗಿರುವ ಅಡಕೆ ಬೆಳೆ ಪ್ರಮಾಣ 204 ಕೋಟಿ ಇದ್ಯಾವುದರ ಬಗ್ಗೆಯೂ ಸರ್ಕಾರ ಯೋಚಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದು, 15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದರೆ ಪಕ್ಷದಿಂದ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರಾಜ್ಯ ಸರ್ಕಾರ ವಿಫಲ: ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿಲ್ಲ. ತನ್ನ ಬೊಕ್ಕಸದಿಂದಲೂ ಹಣ ನೀಡುತ್ತಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದರೆ ಒಂದು ಹೆಕ್ಟೇರ್ಗೆ 12 ಸಾವಿರ ಪರಿಹಾರಕ್ಕೆ ಅವಕಾಶವಿದೆ. ಎನ್ಡಿಆರ್ಎಫ್ ನಿಧಿ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಇದೆ. ಆದರೆ ರೈತರಿಗೆ ನೀಡಿಲ್ಲ. ಏಕೆಂದು ಕೇಳಿದರೆ ಸರ್ಕಾರ ಇನ್ನೂ ಸೂಚನೆ ಕೊಟ್ಟಿಲ್ಲ ಎನ್ನುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಬಡಾಯಿ ನಡೆಯೊಲ್ಲ: ಇದೂವರೆಗೆ ಶಿವಮೊಗ್ಗ ಜಿಲ್ಲೆಗೆ 5 ಕೋಟಿ ಹಾಗೂ ಕಾರವಾರಕ್ಕೆ 5.46 ಕೋಟಿ ಬಿಡುಗಡೆಯಾಗಿದೆ ಎಂದ ಅವರು, 100ದಿನದೊಳಗೆ 5 ವರ್ಷಕ್ಕಾಗುವಷ್ಟು ಸಾಧನೆ ಮಾಡಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಬೀಗುತ್ತಿದೆ. ಬಿಜೆಪಿ ಮಾಡಿದಂತೆ ಜಾಹೀರಾತುಗಳ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳಲು ಹೊರಟಿದೆ. ಇಂತಹ ಬಡಾಯಿ ಬಹಳ ದಿನ ನಡೆಯೋಲ್ಲ. ಶಿವಮೊಗ್ಗ, ಚಿಕ್ಕಮಗಳೂರು, ಕಾರವಾರ, ಮಂಗಳೂರು, ಉಡುಪಿ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇದುವರೆಗೆ 3,231 ಕೋಟಿ ಹಾನಿಯಾಗಿದೆ. 15 ದಿನದಲ್ಲಿ ರೈತರಿಗೆ ಪರಿಹಾರದ ಹಣ ತಲುಪದಿದ್ದರೆ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

