'ಪ್ರತಿಭೆ ಗುರುತಿಸಿದರೆ ಕಲಾವಿದನಿಗೆ ಸಂತೃಪ್ತಿ'
ಸಾಗರ: ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರೇಕ್ಷಕ ವರ್ಗ ಗುರುತಿಸಿ, ಆಸ್ವಾದಿಸಿದಾಗ ಮಾತ್ರ ನಿಜವಾದ ಸಂತೃಪ್ತಿ ಸಿಗುತ್ತದೆ ಎಂದು ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ವೇಷಧಾರಿ ಡಾ. ಪುತ್ತೂರು ಶ್ರೀಧರ ಭಂಡಾರಿ ಹೇಳಿದರು.
ಇಲ್ಲಿನ ಯಕ್ಷಪ್ರಪಂಚ ಯಕ್ಷಸೇವಾ ಪ್ರತಿಷ್ಠಾನ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ರಂಗಸ್ಥಳದಲ್ಲಿ ಅಭಿನಯವನ್ನು ಗುರುತಿಸಿ ನೇಪಥ್ಯದಲ್ಲಿ ಬಂದು ಅಭಿಮಾನಪೂರ್ವಕವಾಗಿ ಹೃದಯ ತುಂಬಿ ಮಾತನಾಡಿಸುವ ಅಭಿಮಾನಿಗಳೇ ಕಲಾವಿದರ ನಿಜವಾದ ಸಂಪತ್ತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜೀವವಿಮಾ ನಿಗಮದ ಶಾಖಾಧಿಕಾರಿ ಎಚ್.ಎನ್. ಕೃಷ್ಣಮೂರ್ತಿ, ಸಾಂಸ್ಕೃತಿಕ ಸಂಘಟನೆಗಳು ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಪರಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಕಲಾ ಮಾಧ್ಯಮಕ್ಕೆ ಅಪಚಾರವೆಸಗುವ ಅಪಾಯಗಳಿರುತ್ತವೆ. ಸಾಂಸ್ಕೃತಿಕ ಸಂಘಟನೆಗಳಿಗೆ ಬದ್ಧತೆ ಅಗತ್ಯ ಎಂದರು.
ಮೊದಲ ವೃತ್ತಿ ಕಲಾವಿದ: ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷ ಪ್ರಂಪಂಚದ ಎಂ.ಎಲ್. ಭಟ್, ಶ್ರೀಧರ ಭಂಡಾರಿಯವರು ಯೂನಿವರ್ಸಿಟಿ ಆಫ್ ಗ್ಲೋಬಲ್ ಅಕಾಡೆಮಿಯ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿರುವುದು ಹೆಮ್ಮೆಯ ಸಂಗತಿ. ಇವರು ವಿದೇಶಿ ವಿವಿಯ ಮನ್ನಣೆಗೆ ಪಾತ್ರರಾದ ಮೊದಲ ವೃತ್ತಿ ಕಲಾವಿದರು ಎಂದು ಹೇಳಿದರು.
ಸಮಾರಂಭದಲ್ಲಿ ಮುಂಬೈನಲ್ಲಿ ಹೋಟೆಲ್ ಉದ್ಯಮದಲ್ಲಿ ಯಶಸ್ಸುಗಳಿಸಿರುವ ದಾನಿ ಪಿ.ಆರ್. ಪ್ರಭಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಹಿರಿಯ ದಾನಿ ಚಿಪ್ಪಳಿ ಗೋಪಾಲಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮಠದ ಅಶ್ವಿನ್‌ಕುಮಾರ್, ಕುಮಾರ ಶೆಟ್ಟಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

