ನಾಳೆ ಸರ್ ಎಂ.ವಿ. ಜನ್ಮದಿನಕ್ಕೆ ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಸರ್ ಎಂ. ವಿಶ್ವೇಶ್ವರಯ್ಯ ಕೋ- ಆಪರೇಟಿವ್ ಸೊಸೈಟಿ ಸೆ.15ರಂದು ಸಂಜೆ 5.30ಕ್ಕೆ ಬಿ.ಎಚ್. ರಸ್ತೆಯ ಕರ್ನಾಟಕ ಸಂಘದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಗಣ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಿದೆ. ಮುಖ್ಯಅತಿಥಿಯಾಗಿ ಕೈಗಾರಿಕೋದ್ಯಮಿ ಅರುಂಧತಿ, ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ವಹಿಸುವರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಾಧನೆಗೈದ ಎಚ್. ರಾಮುರ, ಎ.ಎಚ್.ರಾಮಸ್ವಾಮಿ, ಕೆ. ಶಾರದಬಾಯಿ, ಕೆ. ಶಾರದಮ್ಮ ಅವರನ್ನು ಸನ್ಮಾನಿಸಲಾಗುವುದು. ಸಂಘದ ಸಮಾರಂಭಕ್ಕೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೊಸೈಟಿಯ ಅಧ್ಯಕ್ಷರು ತಿಳಿಸಿದ್ದಾರೆ.
ಚೆಸ್ ತರಬೇತಿ
ಶಿವಮೊಗ್ಗ: ಯಾದವ್ ಸ್ಕೂಲ್ ಆಫ್ ಚೆಸ್ ಸೆ.14ರಿಂದ ಮೂರು ತಿಂಗಳು ನಗರದ ಕೆಲ ಸ್ಥಳಗಳಲ್ಲಿ ಇಂಟರ್ಮಿಡಿಯೇಟ್ ಚೆಸ್ ತರಬೇತಿ ಶಿಬಿರ ಹಮ್ಮಿಕೊಂಡಿದೆ. ವಿದ್ಯಾನಗರದ ತುಂಗಾ ಪ್ರೌಢಶಾಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ, ಕೋಟೆ ರಸ್ತೆಯ ಮಾರಿಕಾಂಬ ದೇವಸ್ಥಾನದ ಹತ್ತಿರದ ವಿದ್ಯಾಜ್ಯೋತಿ ಶಾಲೆಯಲ್ಲಿ ಶುಕ್ರವಾರ ಮತ್ತು ಭಾನುವಾರ, ಗಾಂಧಿನಗರದ ಶಿವಮೊಗ್ಗ ಚೆಸ್ ಅಕಾಡೆಮಿಯಲ್ಲಿ ಪ್ರತಿ ಬುಧವಾರ, ಗುರುವಾರದಂದು ತರಬೇತಿಗಳು ನಡೆಯಲಿವೆ. ಪ್ರತಿ ತರಗತಿಗೆ 20 ಮಕ್ಕಳಿಗೆ ಮಾತ್ರ ಅವಕಾಶ. 8 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ತಮ್ಮ ಪೋಷಕರೊಂದಿಗೆ ಭಾಗವಹಿಸಬೇಕು ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಾಣೇಶ್ ಯಾದವ್ ತಿಳಿಸಿದ್ದಾರೆ. ವಿವರಗಳಿಗಾಗಿ- 9242401702.
ನಾಡಿ ಪರೀಕ್ಷಾ ಶಿಬಿರ
ಶಿವಮೊಗ್ಗ: ಆರ್ಟ್ ಆಫ್ ಲಿವಿಂಗ್ನ ಶ್ರೀ ಆಯುರ್ವೇದ ಟ್ರಸ್ಟ್ ಆಶ್ರಯದಲ್ಲಿ ಸೆ.15ರಂದು ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ದುರ್ಗಿಗುಡಿಯ ಆಯುಷ್ ಭಂಡಾರದಲ್ಲಿ ನಾಡಿ ಪರೀಕ್ಷಾ ಶಿಬಿರ ಏರ್ಪಡಿಸಲಾಗಿದೆ. ಆಶ್ರಮದ ತಜ್ಞ ವೈದ್ಯರು ಕೇವಲ 10 ನಿಮಿಷ್ಗಳಲ್ಲಿ ನಿಮ್ಮ ದೇಹದ ವಿಶಿಷ್ಟವಾದ ಪ್ರಕೃತಿಯನ್ನು ನಾಡಿ ಪರೀಕ್ಷೆ ಮುಖಾಂತರ ತಿಳಿಸಲಿದ್ದಾರೆ. ಡಯಾಬಿಟಿಸ್, ಹೃದಯ ಸಂಬಂಧಿ ತೊಂದರೆಗಳು, ಜೀರ್ಣಾಕ್ರಿಯೆ, ಚರ್ಮ ಸಂಧಿನೋವು, ಅಲರ್ಜಿ, ಅಸ್ತಮಾ ಮತ್ತು ಮತ್ತಿತರ ತೊಂದರೆಗಳಿಗೆ ಚಿಕಿತ್ಸೆ ನೀಡುವರು. ನಾಡಿ ಪರೀಕ್ಷೆಗೆ ಹಾಜರಾಗುವವರು 3 ಗಂಟೆ ಮುಂಚೆ ಖಾಲಿ ಹೊಟ್ಟೆಯಲ್ಲಿರಬೇಕು ಎಂದು ಟ್ರಸ್ಟ್ ತಿಳಿಸಿದೆ. ವಿವರಗಳಿಗಾಗಿ- 9886654780.
ಸರ್ವ ಸದಸ್ಯರ ಸಭೆ
ಶಿವಮೊಗ್ಗ: ಶ್ರೀ ಆದಿ ಶಂಕರಾಚಾರ್ಯ ಲೇಜೌಟ್ ನಿವೇಶನ ಮಾಲೀಕರ ಸಂಘ ಸೆ.15ರಂದು ಬೆಳಿಗ್ಗೆ 10.30ಕ್ಕೆ ಆಲ್ಕೊಳ ನಿವೇಶನದಲ್ಲಿ ಸರ್ವ ಸದಸ್ಯರ ಸಭೆ ಹಾಗೂ ಮುಂದಿನ ಅವಧಿಯ ಕಾರ್ಯ ಸಮಿತಿ ರಚನೆ ಕುರಿತು ವಾರ್ಷಿಕ ಸಭೆಯನ್ನು ಏರ್ಪಡಿಸಿದೆ. ನಿವೇಶನದ ಎಲ್ಲಾ ಮಾಲೀಕರುಗಳು ತಮ್ಮ ಕುಟುಂಬ ಸಮೇತ ಸಭೆಯಲ್ಲಿ ಪಾಲ್ಗೊಳ್ಳಲು ಸಂಘದ ಅಧ್ಯಕ್ಷ, ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 9483100656.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

