ವಂಡರ್ ಲಾ ಹಸ್ತಕಲಾ ಕ್ರಾಫ್ಟ್ ಮೇಳ
ಶಿವಮೊಗ್ಗ: ನಗರದಲ್ಲಿ ಇದೇ ಪ್ರಥಮ ಬಾರಿಗೆ ಬಿ.ಎಚ್. ರಸ್ತೆಯ ಸೈನ್ಸ್ ಮೈದಾನದಲ್ಲಿ ವಂಡರ್ ಲಾ ಹಸ್ತಕಲಾ ಕ್ರಾಫ್ಟ್ ಮೇಳ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದೆ.
ಶುಕ್ರವಾರ ಸುದ್ದಿಗೋಷ್ಠಿಯಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ವಿವೇಕಾನಂದ, ಆ.30ರಿಂದ ಸೆ.22ರವರೆಗೆ ಪ್ರದರ್ಶನಗೊಳ್ಳುವ ಈ ಮೇಳ ಬೆಳಿಗ್ಗೆ 11ರಿಂದ ರಾತ್ರಿ 9 ಗಂಟೆವೆರೆಗೆ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳ ತಮ್ಮದೇ ಆದ ವಿಶೇಷತೆ ಹೊಂದಿದ ಮಹಿಳೆಯರ ಮತ್ತು ಪುರುಷರ ವೈವಿಧ್ಯಮಯ ಉಡುಪು ಮತ್ತು ವಸ್ತುಗಳು ಇಲ್ಲಿ ಸಿಗಲಿದ್ದು, ಈಗಾಗಲೇ ಸಂಸ್ಥೆಯಿಂದ ಆಯೋಜಿಸಿರುವ ವಸ್ತು ಪ್ರದರ್ಶನ ಯಶಸ್ವಿಯಾಗಿದೆ ಎಂದರು.
ಈಗಾಗಲೇ ವಂಡರ್‌ಲಾ ಹಸ್ತಕಲಾ ಕ್ರಾಫ್ಟ್ ಪ್ರದರ್ಶನ ಮಾರಾಟದಲ್ಲಿ ಸಾರ್ವಜನಿಕರ ಮನ್ನಣೆ ಗಳಿಸಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಫಲಿತಾಂಶ ಲಭಿಸಿದೆ. ಬೇರೆ ರಾಜ್ಯಗಳಲ್ಲಿ ತಯಾರಿಸಿದ ಗೃಹಪಯೋಗಿ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಸಂಸ್ಥೆ ಒಂದೇ ಸೂರಿನಡಿಯಲ್ಲಿ ಮಾಡುತ್ತಿದೆ ಎಂದು ತಿಳಿಸಿದರು.
ಸುಮಾರು 80 ವಿವಿಧ ಬಗೆಯ ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಖಾದಿ ಉತ್ಪನ್ನಗಳು, ಹ್ಯಾಂಡ್‌ಲೂಮ್ಸ್, ಬಗೆಬಗೆಯ ಫರ್ನೀಚರ್ಸ್ ಮುಂತಾದ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಮಕ್ಕಳಿಗಾಗಿಯೇ ಆಟವಾಡಲು ವಿವಿಧ ಬಗೆಯ ಆಟಿಕೆಗಳು, ತಿಂಡಿ-ತಿನಿಸುಗಳ ಮಾರಾಟದ ವಸ್ತುಗಳನ್ನು ಪ್ರದರ್ಶಿಸಲಾಗುತ್ತಿದ್ದು, ಮಾರಾಟಕ್ಕೂ ಲಭ್ಯವಿರುತ್ತದೆ ಎಂದರು.
ವಿಶೇಷವಾಗಿ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಕೋಲ್ಕತ್ತಾ, ಕರ್ನಾಟಕ, ಗುಜರಾತ್, ರಾಜಾಸ್ಥಾನ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಹರಿಯಾಣ ರಾಜ್ಯಗಳ ಉಡುಪು, ವಸ್ತುಗಳು, ಕರಕುಶಲ ಸಾಮಾಗ್ರಿಗಳು ಸಿಗುತ್ತವೆ. ಪ್ರತಿಯೊಬ್ಬರಿಗೂ ಉಚಿತ ಪ್ರವೇಶವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಳೆದ ಬಾರಿ ನಗರದಲ್ಲಿ ನಡೆಸಿದ ಮೇಳಕ್ಕಿಂತ, ಈ ಸಾಲಿನಲ್ಲಿ ಅತಿ ಹೆಚ್ಚಿನ ಪ್ರೋತ್ಸಾಹ ಸಾರ್ವಜನಿಕರಿಂದ ಲಭಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಂಜುಳಾ, ಮೇಳದ ವ್ಯವಸ್ಥಾಪಕ ಟಿಂಕು ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

