ಶಿವಮೊಗ್ಗ

ಆಸ್ತಿ ಬಗ್ಗೆ ಅನುಮಾನವಿದ್ದರೆ ಸಿಬಿಐ ತನಿಖೆ ನಡೆಸಿ: ಈಶ್ವರಪ್ಪ

Published On :

ಶಿವಮೊಗ್ಗ: ನಮ್ಮ ಆಸ್ತಿ ಕುರಿತಂತೆ ವೃಥಾ ಆರೋಪ ಮಾಡುವ ಬದಲು ಅನುಮಾನವಿದ್ದರೆ ಸಿಬಿಐ ತನಿಖೆ ನಡೆಸಿ, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ಬಾಯಿ ಮುಚ್ಚಿಕೊಳ್ಳಿ ಎಂದು ಡಿಸಿಎಂ ಕೆ.ಎಸ್.ಈಶ್ವರಪ್ಪನವರು ಸಿಎಂ ಸಿದ್ದರಾಮಯ್ಯನವರಿಗೆ ಸವಾಲೆಸೆದಿದ್ದಾರೆ.
ನಗರದ ವಿವಿಧ ಕಡೆ ಶುಕ್ರವಾರ ರೋಡ್ ಶೋ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದೇಶದೆಲ್ಲೆಡೆಯಂತೆ ರಾಜ್ಯದಲ್ಲಿಯೂ ಎದ್ದಿರುವ ಮೋದಿಯವರ ಭಾರಿ ಅಲೆ ಕಂಡು ಹತಾಶರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡುತ್ತಿದ್ದಾರೆ. ಕೇವಲ ಬಾಯಿ ಚಪಲಕ್ಕೆ ಆಡುವ ಮಾತುಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಕ್ರಮ ಆಸ್ತಿ ಕುರಿತಂತೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆದು, ಆರೋಪಗಳಲ್ಲಿ ಹುರುಳಿಲ್ಲ ಎಂದಿದೆ. ಆದರೂ ಪದೇ ಪದೇ ಅಕ್ರಮ ಆಸ್ತಿ ಎಂದು ಪ್ರಸ್ತಾಪ ಮಾಡುತ್ತಿರುವುದು ರಾಜಕೀಯ ಹೇಳಿಕೆಯಾಗಿದೆ ಎಂದು ಟೀಕಿಸಿದರು.
ಮರಳು ದಂಧೆ: ಮುಖ್ಯಮಂತ್ರಿವರ ಕುಟುಂಬ ವರ್ಗವೇ ಅಕ್ರಮ ಮರಳು ಸಾಗಣೆ ದಂಧೆಯಲ್ಲಿ ತೊಡಗಿದೆ. ಮೈಸೂರು ಭಾಗದಲ್ಲಿ ನಡೆಸುತ್ತಿರುವ ಅವ್ಯವಹಾರವೂ ತನಿಖೆಗೆ ಒಳಪಟ್ಟು ಸತ್ಯಾಂಶ ಹೊರಬರಬೇಕು ಎಂದರು.
ಒಂದೆಡೆ ಸಿಎಂ ಸಿದ್ದರಾಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾಜಿ ಪ್ರಧಾನಿಯ ಬಗ್ಗೆ ನಿರ್ಲಕ್ಷ್ಯವಾಗಿ ಮಾತನಾಡುತ್ತಾರೆ. ಕಾನೂನು ಸಚಿವ ಜಯಚಂದ್ರ ಮೋದಿ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಇವೆಲ್ಲಾ ಹತಾಶೆಯ ಸಂಕೇತಗಳೆಂದರು.
ಗೋಪಾಳ, ಅಣ್ಣಾ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಈಶ್ವರಪ್ಪ ರೋಡ್ ಶೋ ನಡೆಸಿದರು. ಅವರೊಂದಿಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಸ್ಥಳೀಯ ಕಾರ್ಪೊರೇಟರ್ ಸೇರಿದಂತೆ ಬಿಜೆಪಿ ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.