ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಗೂ ಸಮಾನ ಹಕ್ಕಿದೆ
ಹೊಸನಗರ: ಸಾಮಾಜಿಕ ನ್ಯಾಯ ಪಡೆಯುವ ಹಿನ್ನೆಲೆಯಲ್ಲಿ ಮಹಿಳೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಹಿರಿಯ ವಕೀಲ ಎಂ.ಆರ್. ಈಶ್ವರಪ್ಪ ತಿಳಿಸಿದರು.
ಇಲ್ಲಿನ ಶಹರಿ ರೋಜಾಗಾರ್ ಯೋಜನೆ ಭವನದಲ್ಲಿ ತಾಲೂಕು ವಕೀಲರ ಸಂಘ, ಕಾನೂನು ನೆರವು ಸಮಿತಿ ಹಾಗೂ ವಿವಿಧ ಗ್ರಾಪಂಗಳು ಸಂಯುಕ್ತವಾಗಿ ಯುವಜನತೆ, ಶ್ರೀಸಾಮಾನ್ಯ, ರೈತರು, ಕೂಲಿ ಕಾರ್ಮಿಕರು, ಮಹಿಳೆಯರಿಗಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಆಸ್ತಿ ನೋಂದಣಿ ಕಡ್ಡಾಯವಾಗಿದ್ದು, ಅದು ವಾರಸುದಾರನಿಗೆ ಸಾಮಾಜಿಕ -ಆರ್ಥಿಕ ಭದ್ರತೆ ಒದಗಿಸುತ್ತದೆ ಎಂದರು.
ಹಿರಿಯ ವಕೀಲ ರಾಯ್ ಜೊಸಫ್ ಮಾತನಾಡಿ, ಮನೋಸ್ಥಿತಿ ಸ್ಥಿಮಿತದಲ್ಲಿರುವ ಯಾವುದೇ ವ್ಯಕ್ತಿ ತನ್ನ ಆಸ್ತಿ ಕುರಿತು ಮರಣ ಶಾಸನ ಪತ್ರ ಬರೆಯಲು ಅರ್ಹನಾಗುತ್ತಾನೆ ಎಂದರು. ವಕೀಲ ಸುರೇಶ್ ಕುಮಾರ್, ಗುರುಕಿರಣ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕ್ರಮವಾಗಿ ಜೀವನಾಂಶ, ಜನತಾ ನ್ಯಾಯಾಲಯ ಕುರಿತು ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ವಿಜಯ್ ಹೊಳೆಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪಟ್ಟಣ ಸಮುದಾಯ ಅಭಿವೃದ್ಧಿ ಸಂಘದ ಅಧ್ಯಕ್ಷೆ ಸವಿತಾ ಶ್ರೀನಿವಾಸ್ ಭಾಗವಹಿಸಿದ್ದರು. ಶಾರದಾ ಪ್ರಾರ್ಥಿಸಿ, ಸುಮಿತ್ರ ಸ್ವಾಗತಿಸಿದರು. ಆರಕ್ಷಕ ಪ್ರವೀಣ್ ನೀರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

