ಬಂಗಾರಪ್ಪರನ್ನು ರಾಜಕೀಯವಾಗಿ ಮುಗಿಸಿದ್ದು ಕಾಂಗ್ರೆಸ್: ಮಧು
ಶಿವಮೊಗ್ಗ: ಎಸ್.ಬಂಗಾರಪ್ಪ ಅವರನ್ನು ರಾಜಕೀಯವಾಗಿ ಮುಗಿಸಿದ್ದು ಮಾಜಿ ಪ್ರಧಾನಿ ದೇವೇಗೌಡರಲ್ಲ, ಬಂಗಾರಪ್ಪ ಮೇಲೆ ಸುಳ್ಳು ದೂರು ದಾಖಲಿಸಿ ಕೋರ್ಟ್ಗೆ ಅಲೆಯುವಂತೆ ಮಾಡಿದ್ದು ಕಾಂಗ್ರೆಸ್ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ಎಸ್.ಬಂಗಾರಪ್ಪ ಅವರ ರಾಜಕೀಯ ಅತಂತ್ರಕ್ಕೆ ಕಾರಣವಾದ ಕಾಂಗ್ರೆಸ್ ಈಗ ಕುಮಾರ್ ಬಂಗಾರಪ್ಪ ವಿಷಯದಲ್ಲೂ ಅದೇ ನೀತಿ ಅನುಸರಿಸುತ್ತಿದೆ. ಗೀತಾ ಹರಕೆ ಕುರಿ ಎಂದು ಕುಮಾರ್ ಹೇಳುತ್ತಿದ್ದಾರೆ, ಈಗ ನೋಡಿದರೆ ಕುಮಾರ್ ಬಂಗಾರಪ್ಪನವರೇ ಹರಕೆ ಕುರಿ ಆಗುವ ಸಾಧ್ಯತೆ ಹೆಚ್ಚಿದೆ ಎಂದರು.
ಕುಮಾರ್ ಬಂಗಾರಪ್ಪ ಅವರ ಆರೋಪಗಳ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಅವರು ಮಾಡುವ ಆರೋಗಳಿಗೆಲ್ಲಾ ಉತ್ತರಕೊಡಲ್ಲ ಎಂದು ಉದಾಸೀನ ಧೋರಣೆ ಅನುಸರಿಸಿದರು.
ಬಿಎಸ್ವೈಗೆ ಸೋಲು: ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರನ್ನು. ಈಶ್ವರಪ್ಪ ಮತ್ತವರ ಬೆಂಬಲಿಗರು ಚುನಾವಣೆಯಲ್ಲಿ ಸೋಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಜಮೀರ್ ಅಹಮದ್ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಸೋಲಿಗೆ ಬಿಎಸ್ವೈ ಕಾರಣರಾಗಿದ್ದರು.ಭವಿಷ್ಯದಲ್ಲಿ ತಮಗೆ ಮಗ್ಗಲು ಮುಳ್ಳಾಗಬಹುದೆಂಬ ಹೆದರಿಕೆ ಈಶ್ವರಪ್ಪನವರಿಗಿದೆ. ಹೀಗಾಗಿ, ಬಿಎಸ್ವೈ ಸೋಲಿಗೆ ಅವರು ಪ್ರಯತ್ನಿಸುವುದು ಖಚಿತ ಎಂದು ಅಭಿಪ್ರಾಯಪಟ್ಟರು.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸೋಲುವ ಸಾಧ್ಯತೆ ಇದೆ. ಇದರಿಂದಾಗಿ ಅಲ್ಪಸಂಖ್ಯಾತ ಸಮುದಾಯ ಈ ಬಾರಿ ಜೆಡಿಎಸ್ ಬೆಂಬಲಕ್ಕೆ ನಿಲ್ಲಲಿದೆ. ನಮಗೆ ಗೆಲುವಿನ ಹಾದಿ ಸುಗಮವಾಗಿದೆ ಎಂದು ಹೇಳಿದರು.
ಬಿಎಸ್ವೈ ಹೋರಾಟ ಸರಿ: ಜಮೀರ್ ಅಹ್ಮದ್
“ËÛ¦ºÛVÚÀ’ ಯೋಜನೆ ಎಲ್ಲಾ ಧರ್ಮದವರಿಗೂ ವಿಸ್ತರಿಸಬೇಕು ಎಂದು ಸದನದ ಹೊರಗೆ ಹಾಗೂ ಒಳಗೆ ಮಾಜಿ ಸಿಎಂ ಯಡಿಯೂರಪ್ಪ ನಡೆಸಿದ ಹೋರಾಟಕ್ಕೆ ನಮ್ಮ ಸಮ್ಮತಿ ಇದೆ. ಈ ವಿಚಾರದಲ್ಲಿ ಬಿಎಸ್ವೈ ಅನಿಸಿಕೆ ಸರಿ ಇದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಮಾತ್ರವಲ್ಲದೇ ಎಲ್ಲಾ ಸಮುದಾಯದಲ್ಲೂ ಕಡುಬಡವರಿದ್ದಾರೆ. ಮೇಲಾಗಿ ಈ ಯೋಜನೆಗೆ ಮೀಸಲಿರುವುದು ಕೇವಲ 5 ಕೋಟಿ. ಅದರಲ್ಲಿ ಮುಸ್ಲಿಂ ಸಮುದಾಯಕ್ಕೆ ಸಿಗುವ ಹಣ ಕೇವಲ ್2 ಕೋಟಿ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 6 ಮಂದಿ ಮುಸ್ಲಿಂ ಸಮುದಾಯದ ಫಲಾನುಭವಿಗಳಿಗೆ ಯೋಜನೆ ತಲುಪಲಿದೆ. ಕೇವಲ 2 ಕೋಟಿ ಅನುದಾನಕ್ಕೆ ಮುಸ್ಲಿಂ ಸಮುದಾಯ ಕಾಂಗ್ರೆಸ್ನ ಅಡಿಯಾಳಾಗಿರಬೇಕೆ? ಇಷ್ಟು ಹಣ ಬೇಕಾದರೆ ನಾನು ವೈಯಕ್ತಿಕವಾಗಿ ನೀಡಬಲ್ಲೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

