ಬಿಜೆಪಿ ಸರ್ಕಾರವಿದ್ದಾಗ ಏಳ್ಗೆಯಾಗಿದ್ದು ಬಿಎಸ್ವೈ ಕುಟುಂಬ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಏ.7
ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯ ವಿಪರೀತವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದು, ಆದರೆ ಸಾಮಾನ್ಯ ಜನತೆಯ ಅಭಿವೃದ್ದಿಯಲ್ಲ ಅವರ ಕುಟುಂಬದ ಅಭಿವೃದ್ಧಿಯಲ್ಲಿ ಎಂದು ಮಾಜಿ ಸಚಿವ ಜೆ.ಡಿ.ಎಸ್. ಶಾಸಕ ಜಮೀರ್ ಅಹ್ಮದ್ ವ್ಯಂಗ್ಯವಾಡಿದರು.
ಸೋಮವಾರ ಪಟ್ಟಣದ ಜಾತ್ಯತೀತ ಜನತಾದಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನ ಬದಲಾವಣೆ ಬಯಸಿದ್ದು, ಈಗಾಗಲೇ ಕೋಮುವಾದಿ ಬಿಜೆಪಿಯ ಜತೆ ಕಾಂಗ್ರೆಸ್ ಆಡಳಿತವನ್ನೂ ಕಂಡಿದ್ದಾರೆ. ಇದೀಗ ಜಾತ್ಯತೀತ ಜೆಡಿಎಸ್ನತ್ತ ಹೆಚ್ಚಿನ ಒಲವು ಹೊಂದಿದ್ದಾರೆ ಎಂದರು.
ಬಿಎಸ್ವೈ ಜಾತ್ಯತೀತರಲ್ಲ: ಕೆಜೆಪಿ ರಚನೆ ಆರಂಭದಲ್ಲಿಯೇ ಯಡಿಯೂರಪ್ಪನ ಜಾತ್ಯತೀತ ನಾಯಕರೆಂದು ಘೋಷಿಸಿಕೊಂಡಿದ್ದನ್ನು ಆ ಸಂದರ್ಭದಲ್ಲಿಯೇ ವಿರೋಧಿಸಿದ್ದಾಗಿ ತಿಳಿಸಿದ ಅವರು, ಯಡಿಯೂರಪ್ಪ ಎಂದಿಗೂ ಜಾತ್ಯತೀತ ನಾಯಕನಾಗಲು ಸಾಧ್ಯವಿಲ್ಲ. ಇಂದಿಗೂ ಅವರ ಪ್ಯಾಂಟ್ನ ಒಳಗೆ ಚಡ್ಡಿ ಇದೆ ಎಂದಿದ್ದು ಅದನ್ನು ಪುನಃ ಬಿಜೆಪಿ ಸೇರ್ಪಡೆ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿಗೆ ಒಳ್ಳೆಯ ಇಮೇಜ್ ಇಲ್ಲ. ಜನರ ಸಮಸ್ಯೆ ಪರಿಹರಿಸಿದ ಹೋರಾಟದ ಹಿನ್ನೆಲೆ ಇಲ್ಲ. ಕೇವಲ ಪೈಪೋಟಿ ಜೆಡಿಎಸ್ನ ಗೀತಾ ಹಾಗೂ ಬಿಜೆಪಿಯ ಯಡಿಯೂರಪ್ಪನವರಿಗೆ ಮಾತ್ರ ಎಂದರು.
ಗಂಭೀರ ಚಿಂತನೆ ಅಗತ್ಯ: ಪಕ್ಷದ ತಾಲೂಕು ಮುಖಂಡ ಎಚ್.ಟಿ. ಬಳಿಗಾರ್ ಮಾತನಾಡಿ, ಜಾತ್ಯತೀತ ಹಾಗೂ ಹಣ ಬಲದ ಮಧ್ಯೆ ಈ ಬಾರಿಯ ಚುನಾವಣೆಯಲ್ಲಿ ಕೋಮುವಾದಿ ಪಕ್ಷವನ್ನು ವಿರೋಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದ್ದು, ಜಿಲ್ಲೆಯ ಜನರಿಗೆ ನಿರ್ಣಾಯಕ ಪಾತ್ರ ವಹಿಸುವ ಅವಕಾಶ ಒದಗಿಬಂದಿದೆ ಎಂದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಕೀಲ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಯೂಸುಫ್ ಸಾಬ್, ಮುಖಂಡ ಅಬ್ದುಲ್ ವಾಜೀದ್, ಮಹಮ್ಮದ್ ಗೌಸ್, ಬುಡೇನ್ ಖಾನ್, ಮಲ್ಲೇಶಪ್ಪ, ಗಜೇಂದ್ರ, ನಿವೃತ್ತ ಎಸಿಎಫ್ ರೇವಣಪ್ಪ, ಶಿವನಗೌಡ ಪಾಟೀಲ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

