'ಮಹಿಳೆಯರ ಹಿತಕ್ಕಾಗಿ ಬಿಜೆಪಿ ಬೆಂಬಲಿಸಿ'
ಕ.ಪ್ರ.ವಾರ್ತೆ, ಹೊಸನಗರ, ಏ.9 ದೇಶದಲ್ಲಿ ಮಹಿಳೆಯರಿಗೆ ಭದ್ರತೆಯೇ ಇಲ್ಲದಂತಾಗಿದ್ದು, ಮಹಿಳೆಯರ ಹಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಶಶಿಕಲಾ ಜಲ್ಲೆ ಹೇಳಿದರು.
ಹೊಸನಗರ ಮತ್ತು ನಗರದಲ್ಲಿ ನಡೆದ ಮಹಿಳಾ ಸಮಾವೇಶ ಉದ್ಘಾಟಿಸಿ ಬಿಜೆಪಿ ಪರ ಮತಯಾಚಿಸಿದ ಅವರು, ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯ ಮಂತ್ರಿಯೇ ಅಭ್ಯರ್ಥಿಯಾಗಿದ್ದು, ಅವರ ಅಧಿಕಾರಾವಧಿಯಲ್ಲಿ ಎಲ್ಲಾ ವರ್ಗದವರಿಗೆ ನೀಡಿದ ಕಾರ್ಯಕ್ರಮಗಳ ಋಣ ತೀರಿಸುವ ಅವಕಾಶ ಮತದಾರರಿಗೆ ಸಿಕ್ಕಿದೆ ಎಂದರು.
ದೇಶವನ್ನೂ ಮುನ್ನಡೆಸಬಲ್ಲಳು: ವಿಪ ಸದಸ್ಯೆ ಭಾರತೀ ಶೆಟ್ಟಿ ಮಾತನಾಡಿ, ಹಿಂದೆಲ್ಲ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದಳು. ಕುಟುಂಬವನ್ನು ಅಚ್ಚುಕಟ್ಟಾಗಿ ಮುನ್ನೆಡೆಸುವ ಮಹಿಳೆ ದೇಶವನ್ನೂ ಮುನ್ನಡೆಸಬಲ್ಲಳು. ಈ ಚುನಾವಣೆಯಲ್ಲಿ ಮಹಿಳೆಯ ಪಾತ್ರ ಬಹಳ ದೊಡ್ಡದಿದೆ. ಮಹಿಳೆಯರು ತಮ್ಮ ಜವಾಬ್ದಾರಿಯರಿತು, ಮಹಿಳೆಯರಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಂತಿ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸರಸ್ವತಿ, ಕಾರ್ಯದರ್ಶಿ ಶೋಭಾ, ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್, ಉಪಾಧ್ಯಕ್ಷೆ ಮಲ್ಲಿಕಾ ಸುರೇಂದ್ರ, ಸದಸ್ಯರಾದ ಜಯಲಕ್ಷ್ಮೀ ವೆಂಕಟೇಶ ಆಚಾರ್, ನಿರ್ಮಲಾ ಗಣೇಶ್, ಶಾಂತಾ ಶೇಖರಪ್ಪ, ಪ್ರಮುಖರಾದ ಸರಸ್ವತಿ ಚಿನ್ನಮಲ್ಲಿಗೆ, ಆರ್.ಎಸ್.ಶೋಭಾ, ಅನಿತಾ ರವಿಶಂಕರ್, ಶ್ರೀಲತಾ ಭಾರಧ್ವಾಜ್, ಸುಮಿತ್ರಾ ರಂಗನಾಥ್, ರತ್ನಮ್ಮ, ಗುಲಾಬಿ ಮರಿಯಪ್ಪ, ಮಲ್ಲಿಕಾ ಸುರೇಂದ್ರ, ಶಾಲಿನಿ ಜೋಗಿ, ಶಾರದಮ್ಮ, ಸರೋಜಾ ಸತೀಶ್ ಮೊದಲಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

