ಶಿವಮೊಗ್ಗ

ವೆಚ್ಚ ತಪಾಸಣೆ ವೈಫಲ್ಯ: ಮೂವರಿಗೆ ನೋಟಿಸ್

Published On :

ಶಿವಮೊಗ್ಗ: ಚುನಾವಣಾ ವೆಚ್ಚ ಪುಸ್ತಕ ತಪಾಸಣೆಗೆ ಹಾಜರಾಗದ ಮೂವರು ಅಭ್ಯರ್ಥಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್. ಸುರೇಶ್ ಪೂಜಾರಿ, ಬಿ.ಕೆ. ಶಶಿಕುಮಾರ್ ಹಾಗೂ ಶ್ರೀಲತಾ ಶೆಟ್ಟಿ ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 3 ದಿನದೊಳಗಾಗಿ ಲೆಕ್ಕಪತ್ರ ತಪಾಸಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ ಅಭ್ಯರ್ಥಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಅಭ್ಯರ್ಥಿ ಬಿ.ಕೆ. ಶಶಿಕುಮಾರ್ ಏ.7ರಂದು ಬೆಳಗ್ಗೆ 11 ಗಂಟೆಗೆ ಚುನಾವಣಾ ವೆಚ್ಚ ಪುಸ್ತಕ ತಪಾಸಣೆಗೆ ಹಾಜರಾಗುವಂತೆ ಅಧಿಕೃತ ಜ್ಞಾಪನಾಪತ್ರ ಹೊರಡಿಸಿ, ಸಮಯ ನಿಗದಿಪಡಿಸಲಾಗಿತ್ತು. ಈ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗಲೂ ಅಭ್ಯರ್ಥಿಯಾಗಲಿ ಅಥವಾ ಏಜೆಂಟರ ಮೂಲಕವಾಗಲಿ ಲೆಕ್ಕಪತ್ರ ನಮೂನೆ 14ರ ಪರಿಶೀಲನೆಗೆ ಹಾಜರಿ ಪಡಿಸಿಲ್ಲ.
ಜನತಾ ಪ್ರಾತಿನಿಧ್ಯ ಅಧಿನಿಯಮ ದಡಿಯಲ್ಲಿ ವೆಚ್ಚ ಲೆಕ್ಕ ನಿರ್ವಹಿಸಲು ವಿಫಲರಾಗಿರುವ ಬಗ್ಗೆ ಏ.8 ರಂದು ತಿಳಿವಳಿಕೆ ನೋಟಿಸ್ ಜಾರಿ ಮಾಡಲಾಗಿತ್ತು. ನಂತರ 3 ದಿನಗಳ ವಾಯಿದೆ ಮುಗಿದ ನಂತರವೂ ಹಾಜರಾಗಿಲ್ಲ. ಏ.11 ರಂದು 2ನೇ ಹಂತದ ಚುನಾವಣಾ ವೆಚ್ಚದ ಲೆಕ್ಕ ಪುಸ್ತಕ ತಪಾಸಣೆಗೆ ಹಾಜರುಪಡಿಸುವಂತೆ ಸೂಚಿಸಲಾಗಿತ್ತು. ಆದರೆ, ಅಭ್ಯರ್ಥಿ ಲೆಕ್ಕ ಪುಸ್ತಕ ತಪಾಸಣೆಗೆ ಹಾಜರುಪಡಿಸಲು ವಿಫಲರಾಗಿದ್ದು, ನಿಯಮ ಉಲ್ಲಂಘಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.