ಶಿವಮೊಗ್ಗ

ದ್ವೇಷ ರಾಜಕೀಯ ಬೇಡ: ಕುಮಾರ್

Published On :

ಹೊಸನಗರ: ಅಪ್ಪ ಬದುಕಿದ್ದಷ್ಟು ಕಾಲ ರಾಜಕೀಯ ಗಂಧಗಾಳಿ ಸೋಂಕಲು ಬಿಡದ, ರೋಗಪೀಡಿತರಾಗಿದ್ದ ತಮ್ಮ ತಾಯಿಯನ್ನು ಈಗ ರಾಜಕಾರಣಕ್ಕೆ ಬಳಸಿಕೊಳ್ಳುವುದು ಅಮಾನವೀಯ ಕೃತ್ಯ ಎಂದು ಕುಮಾರ್ ಬಂಗಾರಪ್ಪ ವಿಷಾದಿಸಿದರು. ಪ್ರಚಾರ ಸಭೆಯಲ್ಲಿ ಶನಿವಾರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪರ ಮತಯಾಚಿಸಿ ಮಾತನಾಡಿದ ಅವರು, ರಾಜಕೀಯದ ಆಸೆ ಇರಲಿ. ಆದರೆ ರಾಜಕೀಯ ದ್ವೇಷ ಒಳ್ಳೆಯದಲ್ಲ. ಡಾ.ರಾಜಕುಮಾರ್ ಹಾಗೂ ಎಸ್.ಬಂಗಾರಪ್ಪ ಅವರ ಕುಟಂಬಗಳು ದ್ವೇಷ, ಸ್ವಾರ್ಥ ರಾಜಕಾರಣ ಮಾಡಿದ ಉದಾಹರಣೆ ಇರಲಿಲ್ಲ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಈಗ ರಾಜಕಾರಣ ಮಾಡುತ್ತಿದ್ದಾರೆ. ಇದು ಕ್ಷಣಿಕ ಮಾತ್ರ, ಮುಂದಿನ ದಿನಗಳಲ್ಲಿ ಇದಕ್ಕ ಭವಿಷ್ಯ ಇಲ್ಲ ಎಂದರು. ಜಿಲ್ಲೆಯಲ್ಲಿರುವ ಬಹುಸಂಖ್ಯಾತ ದೀವರ ಋಣ ಬಂಗಾರಪ್ಪ ಕುಟುಂಬದ ಮೇಲೆ ಇದ. ಆದರೆ, ದೀವರ ಸಮಾಜದ ಆಸ್ತಿಯನ್ನು ಈಗ ಮಧು ಬಂಗಾರಪ್ಪ ತಮ್ಮ ಸ್ವಂತ ಆಸ್ತಿ ಎಂದು ಮಾರಲು ಹೊರಟಿದ್ದಾರೆ ಎಂದು ಆಪಾದಿಸಿದ ಅವರು, ಭ್ರಷ್ಟ ಬಿಜೆಪಿ ಆಡಳಿತ ನೋಡಿದ ಜನತೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ನೀಡಿಲಿದ್ದಾರೆ. ಮೋದಿ ಪರ ಯಾವುದೆ ಅಲೆ ಶಿವಮೊಗ್ಗ ಕ್ಷೇತ್ರದಲ್ಲಿ ಇಲ್ಲ ಎಂದರು. ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು. ತಾಲೂಕು ಅಧ್ಯಕ್ಷ ಪಟೇಲ್ ಗರುಡಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ನಾರಾಯಣಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಪ್ರಮುಖರಾದ ಅಬ್ಬಿಮಲ್ಲೇಶಪ್ಪ, ನೋರಾ ಮೆಟಿಲ್ಡಾ ಸ್ವಿಕ್ವೇರಾ, ಗೀತಾ ನಿಂಗಪ್ಪ, ಏರಗಿ ಉಮೇಶ್ ಹಾಜರಿದ್ದರು.
ಜೆಡಿಯು ಅಭ್ಯರ್ಥಿ ಕಾರು, ಲಾರಿ ಡಿಕ್ಕಿ
ಹೊಸನಗರ:  ಇಲ್ಲಿಗೆ ಸಮೀಪದ ಕಾರಣಗಿರಿ ಎಂಬಲ್ಲಿ ಜೆಡಿಯು ಅಭ್ಯರ್ಥಿ ಬಿ.ಧರ್ಮಪ್ಪ ಅವರ ಕಾರು ಹಾಗೂ ಲಾರಿ ಡಿಕ್ಕಿ ಹೊಡೆದ ಘಟನೆ ಶನಿವಾರ ನಡೆದಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಹೊನ್ನಾಳಿ -ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಕಾರಣಗಿರಿ ಎಂಬಲ್ಲಿ ಅತಿ ವೇಗದಿಂದ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆಯಿತು ಎಂದು ತಾಲೂಕು ಸಂಚಾಲಕ ಬೇಹಳ್ಳಿ ನಾಗರಾಜ್ ತಿಳಿಸಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.