ರಂಗಕಲೆಯಲ್ಲಿ ಹೊಸತನ ಆಕರ್ಷಿಸುವ ಶಕ್ತಿ: ಅರುಣ್
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಏ.22
ದೂರದರ್ಶನದ ಜನಪ್ರಿಯತೆಯು ಮಂದಗತಿಯಲ್ಲಿ ಕುಸಿಯುವ ಆಂತಕವಿದೆ. ಆದರೆ, ರಂಗಭೂಮಿ ಕಲೆ ಮಾತ್ರ ನಿತ್ಯ ಹೊಸತನದಿಂದ ಜನಸಾಮಾನ್ಯರನ್ನು ಆಕರ್ಷಿಸುವ ಬಹುಜನಪ್ರಿಯ ರಂಗವಾಗಿದೆ ಎಂದು ಕಲಾ ನಿರ್ದೇಶಕ ಅರುಣ ಸಾಗರ್ ತಿಳಿಸಿದರು.
ಪಟ್ಟಣದ ಗುಡಿ ಸಾಂಸ್ಕೃತಿಕ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿರುವ ಮಕ್ಕಳ ಬೇಸಿಗೆ ಶಿಬಿರ ಕಾರ್ಯಾಗಾರದಲ್ಲಿ ಸೋಮವಾರ 'ಮಕ್ಕಳ ಜತೆಗಿನ ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಅಂತರಂಗದಲ್ಲಿಯೂ ಸುಪ್ತವಾದ ರಂಗಕಲೆಯಿದೆ. ಅವುಗಳ ಅನಾವರಣಕ್ಕೆ ಸೂಕ್ತ ವೇದಿಕೆ ಕೊರತೆ ಕಾಣುತ್ತಿದೆ. ಪರಿಸರದ ಪಾಠದಿಂದ ರಂಗ ಕಲೆಯು ಪ್ರತಿಯೊಬ್ಬರಲ್ಲಿಯೂ ತನ್ನದೇ ಆದ ಹೊಸಬಗೆಯ ಕಲೆ ಮೂಡಿಸಲಿದೆ. ಈ ದಿಸೆಯಲ್ಲಿ ರಂಗಭೂಮಿಗೆ ಆಗಮಿಸುವ ಮುನ್ನಾ ಮನುಷ್ಯನ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಚಟ್ಟ ಕಟ್ಟುವುದರಿಂದ ಚಪ್ಪರ ಹಾಕುವವರೆಗೂ, ಊಟ ಬಡಿಸುವವರೆಗೂ ಹಲವು ವಿವಿಧ ಬಗೆಯ ಅನುಭವಗಳ ಪಾಠ ಪ್ರಥಮ ಶಾಲೆಯಾಗಿದೆ. ಹೆಸರಾಂತ ರಂಗಕಲಾವಿದ ಬಿ.ವಿ ಕಾರಂತರ ಬಳಿ ಅಭಿನಯ ಸಿದ್ಧಾಂತಗಳನ್ನು ಅಭ್ಯಸಿಸಿ ಇದೀಗ ಆಸಕ್ತರಿಗೆ ಕಲಿಸುವ ಮೂಲಕ ಕಾರಂತರನ್ನು ಆ ಮೂಲಕ ಕಾಣುತ್ತಿರುವುದಾಗಿ ತಿಳಿಸಿದರು.
ಪ್ರೋತ್ಸಾಹಿಸಿ: ರಂಗನಿರ್ದೇಶಕ ಚಿತ್ರನಟ ಮಂಡ್ಯ ರಮೇಶ್ ಮಾತನಾಡಿ, ಮಗುವೊಂದು ಕಲಿಕೆಗಾಗಿ ರಂಗಭೂಮಿಗೆ ಆಗಮಿಸಿದಲ್ಲಿ ಪೋಷಕರನ್ನು ಕರೆತರುವ ಮೂಲಕ ಅವರಲ್ಲಿಯೂ ಆಸಕ್ತಿಯನ್ನು ಮೂಡಿಸಲಿದೆ. ರಂಗಭೂಮಿ ಮಕ್ಕಳಿಗೆ ಮನೋವೈಜ್ಞಾನಿಕ ಅಧ್ಯಯನ ಕೇಂದ್ರದಂತೆ ಎಂದು ನಂಬಿ ಪೋಷಿಸಿಕೊಂಡು ಬಂದಿರುವ ಹಿರಿಯ ರಂಗಕರ್ಮಿ ಇಕ್ಬಾಲ್ ಅಹ್ಮದ್ ಅವರಿಗೆ ತಾಲೂಕಿನ ಜನತೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿದಲ್ಲಿ ಮಾತ್ರ ರಂಗ ಚಳವಳಿ ಅರ್ಥಪೂರ್ಣವಾಗಿ ತನ್ನ ಗತವೈಭವ ಮರಳಿ ಪಡೆಯಲಿದೆ ಎಂದರು.
ಈ ಸಂದರ್ಭ ಗುಡಿ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಇಕ್ಬಾಲ್ ಅಹ್ಮದ್, ಜಿಯಾವುಲ್ಲಾ,ಅರುಣ ಭಟ್, ಭಾಸ್ಕರ್, ಕಲ್ಲಪ್ಪ, ತಾಜು, ಸೋಮಶೇಖರ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

