ಶಿವಮೊಗ್ಗ

ಸಾಹಿತ್ಯ-ಹೋರಾಟ-ಚಿಂತನೆ 27ರಂದು

Published On :

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ವಕೀಲರ ಸಂಘ ಸಂಯುಕ್ತವಾಗಿ ಏ.27ರಂದು ಭಾನುವಾರ ಸಂಜೆ 6ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗವಿರುವ ವಕೀಲರ ಭವನದಲ್ಲಿ ಶಾಂತವೇರಿ ಗೋಪಾಲಗೌಡರ ದತ್ತಿ ಮತ್ತು ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಅಂಗವಾಗಿ ಪ್ರಜಾಪ್ರಭುತ್ವ-ಸಾಹಿತಿ-ಸಾಹಿತ್ಯ-ಹೋರಾಟ-ಚಿಂತನೆ ವಿಚಾರವಾಗಿ ಹಲವು ಕ್ಷೇತ್ರದ ಪ್ರಮುಖರು ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ.
ಹಿರಿಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಗತಿಪರ ಚಳವಳಿ- ಸಾಹಿತ್ಯದ ಪ್ರಭಾವ ವಿಚಾರವಾಗಿ ಮಾತನಾಡಲಿದ್ದಾರೆ. ದತ್ತಿದಾನಿಗಳಾದ ಪ್ರೊ. ಎಂ.ಬಿ. ನಟರಾಜ್ ಅವರು ಆಶಯ ಮಾತುಗಳನ್ನಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಚುನಾವಣೆಯಲ್ಲಿ ಸಾಹಿತಿಗಳ ನಿಲುವಿನ ವಿಚಾರವಾಗಿ ನಡೆದ ಚರ್ಚೆಗೆ ಪೂರಕವಾಗಿ ಪ್ರಜಾಪ್ರಭುತ್ವದಲ್ಲಿ ಸಾಹಿತಿ-ಸಾಹಿತ್ಯ-ಚಳವಳಿ ವಿಚಾರವಾಗಿ ಹಲವು ಕ್ಷೇತ್ರದ ಗಣ್ಯರಾದ ಚಿಂತಕರಾದ ಡಾ. ಎ.ಎಸ್. ನಾಗರಾಜ್, ಹಿರಿಯ ವಕೀಲ ಜಿ.ಎಸ್. ನಾಗರಾಜ್, ಡಾ. ರಾಚಪ್ಪ, ಪಿ. ಪುಟ್ಟಯ್ಯ, ಪ್ರೊ. ಸಿರಾಜ್ ಅಹಮದ್, ಕೆ.ಪಿ. ಶ್ರೀಪಾಲ್, ಅಕ್ಷತಾ, ಕೆ.ವಿ. ವಸಂತಕುಮಾರ್, ಪತ್ರಕರ್ತ ಎಂ. ರಾಘವೇಂದ್ರ, ಕೃಷ್ಣಮೂರ್ತಿ ಸಿರ್ಸಿ, ಕೋಣಂದೂರು ಲಿಂಗಪ್ಪ ಅವರು ಭಾಗವಹಿಸಲಿದ್ದಾರೆ. ಪ್ರೊ. ಎಂ.ಬಿ. ನಟರಾಜ್ ಮತ್ತು ಡಾ. ಪ್ರಕಾಶ್ ಮರಗನಳ್ಳಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.