ಸೂಡಾ ಯೋಜನಾಧಿಕಾರಿ ಮನೆ ರೈಡ್
ಆದಾಯಕ್ಕಿಂತ ಶೇ.259 ಹೆಚ್ಚು ಆಸ್ತಿ ಪತ್ತೆ ಹಚ್ಚಿದ ಲೋಕಾಯುಕ್ತ ಅಧಿಕಾರಿಗಳು
ಶಿವಮೊಗ್ಗ: ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಟೌನ್ ಪ್ಲಾನಿಂಗ್ ವಿಭಾಗದ ನಗರ ಯೋಜಕ ಆರ್. ನಾಗರಾಜ್ ಅವರ ಮನೆ ಮೇಲೆ ಶುಕ್ರವಾರ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದರು.
ನಗರದ ಗೋಪಾಳಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿರುವ ಈ ಮನೆ ಮೇಲೆ ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ನೇತೃತ್ವದ ತಂಡವು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ನಗರ ಯೋಜಕ ಆರ್. ನಾಗರಾಜ್ ಅವರು ಮನೆಯಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಆದಾಯಕ್ಕಿಂತ ಶೇ.258.74ರಷ್ಟು ಹೆಚ್ಚು ಆಸ್ತಿ ಪತ್ತೆಯಾಗಿದೆ.
ಯೋಜನಾ ಸಹಾಯಕರಾಗಿರುವ ಆರ್. ನಾಗರಾಜ್ ಅವರಲ್ಲಿ ಗೋಪಾಲಗೌಡ ಬಡಾವಣೆಯಲ್ಲಿ ಎರಡು ನಿವೇಶನ, ವಾಜಪೇಯಿ ಬಡಾವಣೆಯಲ್ಲಿ ಒಂದು ನಿವೇಶನ, ಗೋಪಾಲಗೌಡ ಬಡಾವಣೆಯಲ್ಲಿ ಎರಡು ಅಂತಸ್ತಿನ ಒಂದು ಮನೆ ಇದೆ. 1 ಹೋಂಡಾ ಆಕ್ಟಿವಾ ಬೈಕ್, 1 ಮಾರುತಿ ಎಸ್ಟರ್ ಕಾರು, 1 ಯಮಹಾ ಬೈಕ್, 3,12,100 ಮೌಲ್ಯದ 220 ಗ್ರಾಂ ಬಂಗಾರ, 204 ಗ್ರಾಂ ಬೆಳ್ಳಿ, 33,420 ನಗದು ಪತ್ತೆಯಾಗಿದೆ. ಗೃಹೋಪಯೋಗಿ ವಸ್ತುಗಳ ಮೌಲ್ಯ 12,01,755 ಅಲ್ಲದೆ, ನಗರದ ಎಪಿಎಂಸಿ ಯಾರ್ಡ್ನಲ್ಲಿ ಅನಿಲ್ ಇಂಡಸ್ಟ್ರೀನ್ 5 ಲಕ್ಷ ಬಂಡವಾಳ ತೊಡಗಿಸಿದ್ದಾರೆ. ಹಾಯ್ಹೊಳೆ ಗ್ರಾಮದಲ್ಲಿ 3 ಎಕರೆ ಬಗರ್ಹುಕುಂ ಸಾಗುವಳಿ ಭೂಮಿ, ಅಡಕೆ ತೋಟ, ಮನೆಗೆ 3 ಲಕ್ಷ ವೆಚ್ಚ ಮಾಡಿದ್ದಾರೆ.
1,650- 32,000 ವೇತನ ಶ್ರೇಣಿ ಹೊಂದಿರುವ ಆರ್. ನಾಗರಾಜ್ ಅವರು ಹೊಂದಿರುವ ಒಟ್ಟು ಆಸ್ತಿ ಮೌಲ್ಯ 64,79,275 ಇವರು ತಮ್ಮ ಸೇವಾವಧಿಯಲ್ಲಿ ಪಡೆದಿರುವ ಆದಾಯ 20,50,000 ಮಾಡಿರುವ ವೆಚ್ಚ 8,75,000 ಇದರಂತೆ ಒಟ್ಟ 53,04,275 ಹೆಚ್ಚುವರಿ ಆದಾಯ ಹೊಂದಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬೆಳಗಿನಿಂದ ಸಂಜೆಯವರೆಗೂ ಅಧಿಕಾರಿಗಳು ಆರ್. ನಾಗರಾಜ್ ಅವರ ನಿವಾಸದಲ್ಲಿ ತಪಾಸಣೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

