ವಿದ್ಯುತ್ ತಗುಲಿ ರೈತ ಸಾವು
ಶಿರಾಳಕೊಪ್ಪ: ಶಿರಾಳಕೊಪ್ಪ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಿಡಿಲು ಸಹಿತ ಭಾರಿ ಮಳೆ ಗಾಳಿ ಸಂಭವಿಸಿ ಹತ್ತಿರದ ಉಡಗಣಿ ಗ್ರಾಮದಲ್ಲಿ ಸಿಡಿಲಿಗೆ ವಿದ್ಯುತ್ ತಂತಿ ಹರಿದು ಗದ್ದೆಯಲ್ಲಿ ಬಿದ್ದ ಪರಿಣಾಮ ಉಡಗಣಿ ಗ್ರಾಮದ ಬಣಕಾರ ಹನುಮಂತಪ್ಪ ಎಂಬುವವರು(60)ಮ್ರತ ಪಟ್ಟಿದ್ದಾರೆ.
ಭಾನುವಾರ ಮಧ್ಯರಾತ್ರಿ ಶಿರಾಳಕೊಪ್ಪ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಸಿಡಿಲು ಸಹಿತ ಭಾರಿ ಮಳೆ ಬಂದು ಸಿಡಿಲಿನಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ತಂತಿ ಕಟ್ಟಾಗಿ ಮೃತ ಬಣಕಾರ ಹನುಮಂತಪ್ಪ ಎಂಬುವವರ ಜಮೀನಿನಲ್ಲಿ ಬಿದ್ದಿದೆ.
ಪ್ರತಿದಿನ ಗದ್ದೆಗೆ ಹೋದಂತೆ ಒಬ್ಬ ಮಗನೊಂದಿಗೆ ಗದ್ದೆಗೆ ಹೋದ ಹನುಮಂತಪ್ಪ ಗದ್ದೆಯಲ್ಲಿ ಇಳಿದಾಗ, ತಂತಿ ಹರಿದು ಬಿದ್ದಿರುವುದನ್ನು ಗಮನಿಸದ ಕಾರಣ ವಿದ್ಯುತ್ ತಗುಲು ಮೃತಪಟ್ಟಿದ್ದಾರೆ.
ಆದರೆ ಮಗ ನೀರಿಗೆ ಇಳಿಯದೇ ಗದ್ದೆಯ ಬದುವಿನಲ್ಲಿ ಕಾಲಲ್ಲಿ ಚಪ್ಪಲಿ ಹಾಕಿಕೊಂಡ ಕಾರಣ ಅಪಾಯ ದಿಂದ ಪಾರಾಗಿದ್ದಾಗಿ ತಿಳಿದಿದೆ.
ಮೃತ ಹನುಮಂತಪ್ಪ ಪತ್ನಿ, ನಾಲ್ಕು ಗಂಡು ಮಕ್ಕಳು ಹಾಗು ಐದು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
ಉಡಗಣಿ ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಹನುಮಂತಪ್ಪನವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

