ಶಿವಮೊಗ್ಗ ಹಬ್ಬಕ್ಕೆ ತೆರೆ
ಶಿವಮೊಗ್ಗ: ಇದೇ ಮೊದಲ ಬಾರಿ ಶಿವಮೊಗ್ಗದ ರಂಗತಂಡಗಳು ಒಗ್ಗೂಡಿ, ಸಹಕಾರ ತತ್ವದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಹಬ್ಬ ಕಾರ್ಯಕ್ರಮವು ಸೋಮವಾರ ವಿಧ್ಯುಕ್ತವಾಗಿ ತೆರೆ ಕಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಶಿವಮೊಗ್ಗ ಸಾಂಸ್ಕೃತಿಕವಾಗಿ ಶಕ್ತಿಯುತ ಜಿಲ್ಲೆ. ಸತತ ನಾಟಕಗಳ ಪ್ರದರ್ಶನವಾದರೂ ಸಹ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಖುಷಿಯ ವಿಷಯ ಎಂದರು.
ಶಿವಮೊಗ್ಗ ಹಬ್ಬ ಸಂಚಾಲಕ ವೈದ್ಯ, ಶಿವಮೊಗ್ಗದ ರಂಗತಂಡಗಳು ಎಲ್ಲೆಲ್ಲೋ ರಂಗತಾಲೀಮು ನಡೆಸುತ್ತಿವೆ. ರಂಗತಾಲೀಮು ಕೊಠಡಿ ಬೇಕೆಂಬುದು ಎಲ್ಲಾ ರಂಗತಂಡಗಳ ಬಹುದಿನಗಳ ಬೇಡಿಕೆ. ಈಗಾಗಲೇ ಇದಕ್ಕೆ ಯೋಜನೆ ಸಿದ್ಧವಾಗಿದ್ದು, ಅನುದಾನವೂ ಸಹ ಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಯವರು ಈ ಬಗ್ಗೆ ಗಮನ ಹರಿಸಿ ರಂಗಭೂಮಿ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಕೋರಿದರು. ಜತೆಗೆ ಉತ್ಸವಕ್ಕೆ ನೆರವಾದವರಿಗೆ ಅಭಿನಂದಿಸಿದರು.
ಕಲಾವಿದರು ಒಕ್ಕೂಟದ ಅಧ್ಯಕ್ಷ ಪ್ರೊ. ಎಸ್.ಸಿ. ಗೌರಿಶಂಕರ್ ಅಧ್ಯಕ್ಷತೆ ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ ಉಪಸ್ಥಿತರಿದ್ದರು.
ಹಬ್ಬದಲ್ಲಿ ಪ್ರದರ್ಶನಗೊಂಡ ನಾಟಕಗಳ ನಿರ್ದೇಶಕರಾದ ಪ್ರೊ. ಎನ್.ಕೆ. ಹಾಲೇಶಪ್ಪ, ಎಸ್.ಆರ್. ವಿಜಯಲಕ್ಷ್ಮಿ, ಡಾ. ಸಾಸ್ವೆಹಳ್ಳಿ ಸತೀಶ್, ಚಂದ್ರಶೇಖರ ಹಿರೇಗೋಣಿಗೆರೆ, ಟಿ.ಪಿ. ಭಾಸ್ಕರ, ಗಣೇಶ್ ಕೆಂಚನಾಲ, ಲವ ಜಿ.ಆರ್., ಚೇತನ್ ಸಿ. ರಾಯನಹಳ್ಳಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಎಚ್.ಎಸ್. ನಾಗಭೂಷಣ ಸ್ವಾಗತಿಸಿದರು. ಸುಧೀಂದ್ರ ರಾವ್ ನಿರೂಪಿಸಿದರು. ಉತ್ಸವಕ್ಕೆ ನೆರವು ನೀಡಿದ ಎಲ್ಲರಿಗೂ ಅಭಿನಂದಿಸಲಾಯಿತು. ನಂತರ ಗಣೇಶ್ ಕೆಂಚನಾಲ ಅವರ ನಿರ್ದೇಶನದಲ್ಲಿ ಮಲೆನಾಡು ಕಲಾತಂಡದ ಕಲಾವಿದರು ಬಿ.ಟಿ. ಲಲಿತಾ ನಾಯಕ್ ಅವರ ಕಥೆ ಆಧರಿಸಿದ 'ಕಳ್ರು' ನಾಟಕ ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

