ಶಿವಮೊಗ್ಗ

ನಿಮ್ಮ ರಾಘಣ್ಣ ನಿಂತಿದ್ದಾನೆ, ಅತ್ಯಧಿಕ ಮತದಿಂದ ಗೆಲ್ಲಿಸಿ: ಬಿಎಸ್‌ವೈ

Published On :

ಶಿರಾಳಕೊಪ್ಪ: ಈ ಹಿಂದಿನ ಮುಖ್ಯಮಂತ್ರಿಗಳು ವೋಟ್ ಬ್ಯಾಂಕ್‌ಗಳಾಗಿ ಮತದಾರರನ್ನು ಬಳಸಿಕೊಂಡರು. ಆದರೆ ನಾನು ಮುಖ್ಯ ಮಂತ್ರಿ ಆದಮೇಲೆ ಬಡವರನ್ನು ಗುರುತಿಸುವ, ರೈತರ ಅಭಿವೃದ್ಧಿ ಬಗ್ಗೆ ಚಿಂತಿಸುವ ಕಾರ್ಯ ಪ್ರಾರಂಭವಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದರು.
ಶಿರಾಳಕೊಪ್ಪ ಹತ್ತಿರವಿರುವ ಉಡಗಣಿ, ತಡಗಣಿ, ಬೆಲವಂತನಕೊಪ್ಪ, ನೇರಲಗಿ ಸೇರಿದಂತೆ14 ಗ್ರಾಮಗಳಲ್ಲಿ ಮಳೆಯಲ್ಲಿ ಮಿಂಚಿನ ಪ್ರವಾಸ ಕೈಗೊಂಡ ಯಡಿಯೂರಪ್ಪ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ರೈತ ಪರ ಬಜೆಟ್ ಮಂಡಿಸಿ ರೈತರಿಗೆ 3 ಲಕ್ಷದ ವರೆಗೆ ಬಡ್ಡಿರಹಿತ ಸಾಲ, ಬಡ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಿ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಜಿಲ್ಲೆಯಲ್ಲಿಯೇ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.  
ತಾವು ಐದು ವರ್ಷ ಪೂರ್ಣ ಮುಖ್ಯಮಂತ್ರಿ ಆಗಿದ್ದರೆ, ಯಾವುದೇ ಕೆಲಸ ಬಾಕಿ ಇಲ್ಲದಂತೆ ಮುಗಿಸುತ್ತಿದ್ದೆ.  ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉತ್ತಮ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಕಾರಣ ಕಳೆದ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.
ಇತರ ಪಕ್ಷಗಳಿಂದ ಯಾರೇ ಸ್ಪರ್ಧಿಸಲಿ ಅವರ ಬಗ್ಗೆ ತಲೆಕಡಿಸಿಕೊಳ್ಳದೇ ಕಳೆದ ಚುನಾವಣೆಯಲ್ಲಿ ಬಿದ್ದ ಮತಗಳಿಗಿಂತ ಹೆಚ್ಚು ಮತ ಬೀಳುವಂತೆ ನೋಡಿಕೊಳ್ಳಿ ನಿಮ್ಮ ರಾಘಣ್ಣ ನಿಂತಿದ್ದಾನೆ ಅವನನ್ನು ಅತ್ಯಧಿಕ ಅಂತರ ದಿಂದ ಗೆಲ್ಲಿಸಲು ಪ್ರಯತ್ನಿಸಿ ಎಂದರು.   
ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮಾತನಾಡಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಸರ್ವರಿಗೂ ಸಮಬಾಳು -ಸಮಪಾಲು ಎಂಬಂತೆ ಎಲ್ಲ ಜನಾಂಗದವರನ್ನು ಯಾವದೇ ಭೇದಭಾವವಿಲ್ಲದೇ ಕಾರ್ಯನಿರ್ವಹಿಸಿದರು.ಈ ಹಿಂದೆ ಬಗರ್‌ಹುಕುಂ ರೈತರಿಗೆ ಭೂಮಿಕೊಡಿಸಿದ ಯಡಿಯೂರಪ್ಪನವರಿಗೆ ಹಕ್ಕುಪತ್ರಕೊಡಿಸುವದು ದೊಡ್ಡ ಕೆಲಸವಲ್ಲ,ಅದಕ್ಕೆ ಬೇಕಾಗುವ ಕಾನೂನು ತಿದ್ದಪಡಿ ಆಗಬೇಕಿದೆ ಎಂದು ಹೇಳಿದರು.
ಮಾಜಿ ಶಾಸಕ ಮಹಲಿಂಗಪ್ಪ, ಜಿಪಂ ಸದಸ್ಯ ಈಶ್ವರಪ್ಪ, ಬಂಗಾರನಾಯ್ಕ್, ತಾಪಂ ಅಧ್ಯಕ್ಷೆ ಸವಿತ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ,ನಿರ್ದೇಶಕ ಸಣ್ಣ ಹನುಮಂತಪ್ಪ, ಕೋಡಿಕೊಪ್ಪ ಮಂಜಣ್ಣ,ಸಿದ್ದರಾಮಣ್ಣ,ರವಿಶಾನಭೋಗ ಹಲವಾರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.