ಶಿವಮೊಗ್ಗ

ವಿಕಲಚೇತನರ ಬಗ್ಗೆ ಸರ್ಕಾರ, ಸಮಾಜ ನಿರ್ಲಕ್ಷ್ಯ: ಗಣೇಶ್ ಶೇರಿಗಾರ್

Published On :

ಶಿವಮೊಗ್ಗ: ತೀವ್ರತರ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ ಆಶಾಕಿರಣದಲ್ಲಿ ವಿಕಲಚೇತನರಿಗೆ ವಿಶೇಷ ತರಬೇತಿದಾರರನ್ನು ಸಿದ್ದಪಡಿಸುವ ಕೇಂದ್ರವನ್ನು ಹೈದ್ರಾಬಾದ್‌ನ ಮಾತೃ ಸಂಸ್ಥೆಯ ನಿರ್ದೇಶಕ ಗಣೇಶ್ ಶೇರಿಗಾರ್ ಉದ್ಘಾಟಿಸಿದರು.
ಬುದ್ಧಿಮಾಂದ್ಯ ಮಕ್ಕಳ ರಾಷ್ಟ್ರೀಯ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾಪ ಕಳೆದ 5-6 ವರ್ಷಗಳಿಂದಲೂ ಚಾಲನೆಯಲ್ಲಿದ್ದು ಇಂದಿಗೂ ಸಕ್ರಿಯವಾಗಿ ಸಾಕಾರವಾಗದಿರುವುದು ರಾಜ್ಯಕ್ಕೆ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ಗಣೇಶ್ ಶೇರಿಗಾರ್ ತಿಳಿಸಿದರು. ಮಗುವೊಂದರ ಬುದ್ಧಿಮಾಂದ್ಯತೆ ಆ ಕುಟುಂಬದ ಮೇಲೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ದೈಹಿಕ, ಜೈವಿಕ, ಸಮಾಜಿಕ ಕಾರಣಗಳು ಪ್ರಮುಖ ಪಾತ್ರ ವಹಿಸುವ ಈ ಸಮಸ್ಯೆ ಶೇ.5 ಜನಸಮಾನ್ಯರಲ್ಲಿ ಇರುತ್ತದೆ. ಅದರಲ್ಲೂ ಬುದ್ಧಿಮಾಂದ್ಯತೆ ವಿವಿಧ ಬಗೆಯ ವೈಕಲ್ಯಗಳಲ್ಲಿ ಶೇ.10.3ರಷ್ಟಿದೆ. ಇದೊಂದು ಗಂಭೀರ ಆರೋಗ್ಯ ಸಮಸ್ಯೆ ಎಂದರು. ಅಧ್ಯಕ್ಷತ್ನೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷೆ ಲಕ್ಷ್ಮಿದೇವಿ ಗೋಪಿನಾಥ್, ಆಶಾಕಿರಣ ಕಳೆದ ಮೂರೂವರೆ ದಶಕಗಳಿಂದ ನಡೆದು ಬಂದ ರೀತಿ, ಎದುರಿಸಿರುವ ಸವಾಲು, ಹೊಂದಾಣಿಕೆ, ಒಡಂಬಡಿಕೆಗಳ ಬಗ್ಗೆ ಪ್ರಸ್ತಾಪಿಸಿ ಸುಮಾರು ಮೂರುವರೆಸಾವಿರ ಬುದ್ಧಿಮಾಂದ್ಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ ಎಂದು ತಿಳಿಸಿದರು.  ಸಭೆಯಲ್ಲಿ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಅಶೋಕ್ ಪೈ, ರೋಟರಿ ದತ್ತಿನಿಧಿ ಅಧ್ಯಕ್ಷ ನಾಗೇಶ್ ನಾಯಕ್, ಆಶಾಕಿರಣ ಬುದ್ಧಿಮಾಂದ್ಯ ಶಾಲೆಯ ಅಧ್ಯಕ್ಷೆ ಡಾ. ರಜಿನಿ ಪೈ ಮತ್ತು ಪ್ರಾಶುಂಪಾಲ ಎ. ಮಂಜುನಾಥ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.