ಶಿವಮೊಗ್ಗ

ಅರಮನೆಕೊಪ್ಪ ಅರಣ್ಯ ಸಮಿತಿಗೆ 34 ಲಕ್ಷ

Published On :

ಕ.ಪ್ರ.ವಾರ್ತೆ, ಹೊಸನಗರ, ಫೆ. 5
ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿಯ ಅರಮನೆಕೊಪ್ಪ ಗ್ರಾಮ ಅರಣ್ಯ ಸಮಿತಿ ಗ್ರಾಮ ಅರಣ್ಯ ಅಭಿವೃದ್ಧಿ ಫಂಡ್ನಿಂದ 34.45 ಲಕ್ಷ ಅನುದಾನ ಪಡೆದುಕೊಂಡು ಗಮನ ಸೆಳೆದಿದೆ.
ಶಿವಮೊಗ್ಗದ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಣ್ಯ ಸಚಿವರಿಂದ ಅನುದಾನದ ಚೆಕ್ ಪಡೆದುಕೊಂಡಿದೆ. ಇದರಲ್ಲಿ ಅರಣ್ಯ ಅಭಿವೃದ್ಧಿ ನಿಧಿಯ 17.22 ಲಕ್ಷ ಮತ್ತು ಗ್ರಾಮ ಅಭಿವೃದ್ಧಿ ನಿಧಿಯ 17.22 ಲಕ್ಷ ಸೇರಿದೆ.
ಅರಮನೆಕೊಪ್ಪ ಗ್ರಾಮ ಅರಣ್ಯ ಸಮಿತಿ 1984 ರಲ್ಲಿ 8 ಹೆಕ್ಟೇರ್ ಮತ್ತು 1985 ರಲ್ಲಿ 15 ಹೆಕ್ಟೇರ್ ನಡುತೋಪಿನ ಕಟಾವಿನಿಂದ ಬಂದ ಅನುದಾನದಲ್ಲಿ ಶೇ.50ರಷ್ಟನ್ನು ನೇರವಾಗಿ ಗ್ರಾಮ ಅರಣ್ಯ ಸಮಿತಿಗೆ ನೀಡಲಾಗಿದೆ.
ಕ್ರಿಯಾಶೀಲ ಸಾಧ್ಯ: ಗ್ರಾಮ ಅರಣ್ಯ ಸಮಿತಿ ನಿರ್ವಹಿಸಿದ ಅಭಿವೃದ್ಧಿಯಿಂದ ಬಂದ ಹಣದಲ್ಲಿ ಅರ್ಧದಷ್ಟು ಗ್ರಾಮ ಅರಣ್ಯ ಸಮಿತಿ ನೀಡುವುದರಿಂದ ಸಮಿತಿ ಇನ್ನಷ್ಟು ಕ್ರಿಯಾಶೀಲವಾಗಿ ಅರಣ್ಯ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲು ಸಾಧ್ಯ. ಅಲ್ಲದೆ ನೇರವಾಗಿ ಅನುದಾನ ನೀಡುವುದರಿಂದ ಗ್ರಾಮಸ್ಥರಿಗೂ ಅರಣ್ಯ ಇಲಾಖೆ ಬಗ್ಗೆ ವಿಶ್ವಾಸ ಹೊಂದುವಂತಾಗಿದೆ. 34 ಲಕ್ಷ ಅನುದಾನ ದೊರತಿರುವುದು ಗ್ರಾಮ ಅರಣ್ಯ ಸಮಿತಿ ಕ್ರೀಯಾಶೀಲತೆಗೆ ಸಂದ ಪುರಸ್ಕಾರವಾಗಿದೆ ಎಂದು ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಸಂತಸ ವ್ಯಕ್ತಪಡಿಸಿದರು.
ಅರಣ್ಯ ಸಚಿವ ರಮಾನಾಥ ರೈ ಅವರಿಂದ ಚೆಕ್ ಸ್ವೀಕರಿಸುವ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ. ಸೂಗೂರು, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮೀತಾ ಬಿಜ್ಜೂರು, ಸಾಗರ ಡಿಎಫ್ಒ ಪಿ.ಪಿ. ಬ್ಯಾನರ್ಜಿ, ಹೊಸನಗರ ಎಸಿಎಫ್ ಆಲ್ವಿನ್, ನಗರ ಆರ್ಎಫ್ಒ ಮೃತ್ಯುಂಜಯಪ್ಪ, ಅರಮನೆಕೊಪ್ಪ ಗ್ರಾಮ ಅರಣ್ಯಸಮಿತಿ ಅಧ್ಯಕ್ಷ ಡಿ.ಟಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.