'ಉದ್ವೇಗ, ಹತಾಶೆಯಿಂದ ಕಲಿಯದಿರಿ'
ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ ಫೆ.7
ಮಾನವನ ಮೆದುಳಿನಲ್ಲಿ ವಿಷಯ ಗ್ರಹಿಸಲು, ಅದನ್ನು ನೋಂದಾಯಿಸಲು, ವಿಶ್ಪೇಷಿಸಲು ಹಾಗೂ ನೆನಪಿನಲ್ಲಿಡಲು ಪ್ರತ್ಯೇಕ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ವ್ಯವಸ್ಥಿತವಾಗಿ ಓದಿದ ವಿಷಯಗಳನ್ನು ಅಥವಾ ಕೇಳಿದ ವಿಷಯಗಳನ್ನು ಮೆದುಳು ವ್ಯವಸ್ಥಿತವಾಗಿ ನೆನಪಿನಲ್ಲಿಟ್ಟುಕೊಂಡು ಅವಶ್ಯಕತೆ ಬಿದ್ದಾಗ ಅವನ್ನು ಅಷ್ಟೇ ವ್ಯವಸ್ಥಿತವಾಗಿ ಹೊರಗೆಡಹುತ್ತದೆ ಎಂದು ಶಿವಮೊಗ್ಗದ ಖ್ಯಾತ ಮನೋವೈದ್ಯ ಡಾ. ಕೆ.ಆರ್. ಶ್ರೀಧರ್ ತಿಳಿಸಿದರು.
ಪಟ್ಟಣದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ಸ್ಟೀಲ್‌ಟೌನ್ ಮತ್ತು ಅಕ್ಕಮಹಾದೇವಿ ಬಳಗ ಶುಕ್ರವಾರ ಸಂಜೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು, ಪೋಷಕರಿಗೆ ಏರ್ಪಡಿಸಿದ್ದ “®ÚÂÞOæÐ¾Úᒀ ಶೇ.100 ಅಂಕ ಗಳಿಸಲು n®éÓ’ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒತ್ತಡ ಹೆಚ್ಚಾದಾಗ ಕಾರ್ಯಕೌಶಲ್ಯತೆ ಕಡಮೆಯಾಗುತ್ತದೆ. ಉದ್ವೇಗ ಹೆಚ್ಚಾದಾಗ ಸಮಾಧಾನದಿಂದ ವರ್ತಿಸಬೇಕು. ಓದಬೇಕಾದ ವೇಳಾಪಟ್ಟಿ ತಯಾರಿಸಿ ಪಠ್ಯೇತರ ಚಟುವಟಿಕೆ ಮತ್ತು ದೈನಂದಿನ ಕ್ರಿಯೆಗಳಿಗೆ ನಿಗದಿತ ಸಮಯ ಕಾಯ್ದಿರಿಸಿಕೊಳ್ಳಬೇಕು. ಓದಿನಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆ, ಆಹಾರ, ನಿದ್ರೆಗಳ ಬಗ್ಗೆ ಗಮನ ಹರಿಸುವುದು ಅತಿ ಮುಖ್ಯ ಎಂದು ಡಾ.ಶ್ರೀಧರ್ ತಿಳಿಸಿದರು.
ಕ್ಲಬ್ ಅಧ್ಯಕ್ಷ ಆಲ್ವಿನ್ ಎಸ್.ಕ್ರಾಸ್ಟಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಡಿ.ಮುರಳೀಧರ, ಮುಖ್ಯ ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಸೋಮಶೇಖರಯ್ಯ, ರೋಟರಿ ವಲಯಾಧಿಕಾರಿ ಡಿ.ಕೇಶವಮೂರ್ತಿ ಮತ್ತು ಶ್ರೀ ಅಕ್ಕಮಹಾದೇವಿ ಬಳಗದ ಕಾರ್ಯದರ್ಶಿ ಅನಿತಾ ಬಸವರಾಜ್ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಚಂದನಾ ಮತ್ತು ತಂಡದವರು ಪ್ರಾರ್ಥಿಸಿದರು. ಬಾರಂದೂರು ಪ್ರಕಾಶ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕ್ಲಬ್ ಕಾರ್ಯದರ್ಶಿ ಎಚ್.ಮಲ್ಲಿಕಾರ್ಜುನ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

