ದಿಟ್ಟ ಕ್ರಮ: ಕೈದಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಫೆ.10
ಕ್ಷುಲ್ಲಕ ಕಾರಣಕ್ಕೆ ಶಿವಮೊಗ್ಗ ಜೈಲಿನಲ್ಲಿ ಖೈದಿಗಳು ಪ್ರತಿಭಟನೆ ನಡೆಸಿದ ಪ್ರಸಂಗ ಸೋಮವಾರ ಬೆಳಗ್ಗೆ ನಡೆಯಿತು.
ಜೈಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿನಾಕಾರಣ ಹಿಂಸೆ ನೀಡುತ್ತಾರೆ. ರಾತ್ರಿ ಮಲಗಿದ್ದಾಗ ಎಬ್ಬಿಸಿ ಕಿರುಕುಳ ನೀಡುತ್ತಾರೆ ಮತ್ತು ಪ್ರಾರ್ಥನೆಗೆ ಅವಕಾಶ ಕೊಡುವುದಿಲ್ಲ. ಧಾರ್ಮಿಕ ಗ್ರಂಥಗಳನ್ನು ಅವಮಾನಿಸಿದ್ದಾರೆ ಎಂಬುದು ಖೈದಿಗಳ ಆರೋಪವಾಗಿತ್ತು.
3 ತಾಸು ಪ್ರತಿಭಟನೆ: ಗುಂಪುಗೂಡಿಕೊಂಡ ಖೈದಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಖೈದಿಗಳ ಕೂಗು ಜೈಲಿನ ಹೊರಗೂ ಸಹ ಮಾರ್ದನಿಸುತ್ತಿತ್ತು. ಜೊತೆಗೆ ಬೆಳಗಿನ ಉಪಹಾರ ತಿರಸ್ಕರಿಸಿದರಲ್ಲದೇ, ನ್ಯಾಯಾಲಯಕ್ಕೆ ವಿಚಾರಣೆಗೂ ಹೋಗುವುದಿಲ್ಲ ಎಂದು ಪಟ್ಟುಹಿಡಿದರು. ಸುಮಾರು 3 ತಾಸು ಪ್ರತಿಭಟನೆ ನಡೆಯಿತು.
ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಖೈದಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಜಿಲ್ಲಾ ಮ್ಯಾಜಿಸ್ಟ್ರೇಟರು ಸ್ಥಳಕ್ಕೆ ಬರುವವರೆಗೂ ತಾವು ಪ್ರತಿಭಟನೆ ಕೈಬಿಡುವುದಿಲ್ಲ ಪಟ್ಟು ಹಿಡಿದರೆನ್ನಲಾಗಿದೆ. ಪೊಲೀಸರು ಹೇಳುವಂತೆ, ಜೈಲಿನಲ್ಲಿ ಮೊಬೈಲ್ ಮತ್ತು ಮಾದಕ ವಸ್ತುಗಳ ಬಳಕೆ ಕುರಿತಂತೆ ಮಾಹಿತಿಯ ಹಿನ್ನೆಲೆಯಲ್ಲಿ ಖೈದಿಗಳನ್ನು ತಪಾಸಣೆ ನಡೆಸಿದ್ದಾರೆ.
ದಿಟ್ಟ ಕ್ರಮವೇ ಕಾರಣ: ಧಾರ್ಮಿಕ ಗ್ರಂಥಗಳಲ್ಲಿ ಮೊಬೈಲ್, ಸಿಮ್, ಚಾರ್ಜರ್, ಮಾದಕ ವಸ್ತುವನ್ನು ಕೆಲ ಖೈದಿಗಳು ತರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ತೀವ್ರ ತಪಾಸಣೆಗೊಳಪಡಿಸಲಾಗಿದೆ. ಇದರಿಂದ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಅರಿತು ಕೆಲವು ಖೈದಿಗಳು ಧಾರ್ಮಿಕ ಭಾವನೆಗೆ ಧಕ್ಕೆ ಎಂದು ಕೂಗೆಬ್ಬಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಉಳಿದೆಲ್ಲಾ ಖೈದಿಗಳೂ ಒಟ್ಟಾಗಿ ಪ್ರತಿಭಟನೆ ನಡೆಸಿದ್ದಾರೆ.
ಜೈಲ್ ಅಧಿಕಾರಿಗಳ ದಿಟ್ಟ ಕ್ರಮವೇ ಖೈದಿಗಳ ಪ್ರತಿಭಟನೆಗೆ ಕಾರಣ ಎಂದು ಹೇಳಿರುವ ಪೊಲೀಸರು ಅಂತಿಮವಾಗಿ ಖೈದಿಗಳ ಮನವೊಲಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

