ಶಿವಮೊಗ್ಗ

ಸಂವಿಧಾನದ ಪರಿಕಲ್ಪನೆ ಬಿಚ್ಚಿಟ್ಟ ರಾಜನೀತಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.12 ಸಂವಿಧಾನ ಪರಿಕಲ್ಪನೆಯನ್ನು ಇಂದಿನ ಯುವ ಜನಾಂಗಕ್ಕೆ ಹಾಗೂ ಮಕ್ಕಳಿಗೆ ತಿಳಿಯುವಂತೆ ಮಾಡುವ ಉದ್ದೇಶದಿಂದ ರಾಜನೀತಿ ಹೆಸರಿನ ಅಪರೂಪದ ಕಾರ್ಯಕ್ರಮ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮನ್ವಯ ಸಂಸ್ಥೆ ಸರ್ಕಾರಿ ನೌಕರರ ಸಂಘ, ಕೆನರಾ ಬ್ಯಾಂಕ್ ಹಾಗೂ ಪರ್ಫೆಕ್ಟ್ ಅಲಾಯ್ ಕಾಂಪೋನೆಂಟ್ಸ್ ಆಶ್ರಯದಲ್ಲಿ ಆಯೋಜಿಸಿದ್ದ ರಾಜನೀತಿ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಆಶಯ, ಯುವ ಜನಾಂಗ ಮತ್ತು ನೈತಿಕತೆ, ಕಾರ್ಯಾಂಗ ವ್ಯವಸ್ಥೆ, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕು, ನ್ಯಾಯಾಂಗ ಹಾಗೂ ಶ್ರೀಸಾಮಾನ್ಯ ವಿಚಾರವಾಗಿ ಹಿರಿಯ ರಾಜಕಾರಣಿಗಳು, ಸ್ವಾಮೀಜಿ, ನ್ಯಾಯಾಧೀಶರು, ಅಧಿಕಾರಿಗಳು ಮಾಹಿತಿ ನೀಡಿ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಯುವ ಮನುಸ್ಸುಗಳಿಗೆ ರಾಜನೀತಿಯ ಜಗತ್ತನ್ನು ಪರಿಚಯಿಸಿದರು.
ಸಾವಿರ ವಿದ್ಯಾರ್ಥಿಗಳು: ಸ್ವಯಂಸೇವಾ ಸಂಸ್ಥೆ ಮೂಲಕ ರೂಪುಗೊಂಡ ಕಾರ್ಯಕ್ರಮದ ಮೊದಲನೇ ಹಂತದಲ್ಲಿ ಶಿವಮೊಗ್ಗ ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 26 ಪದವಿ ಕಾಲೇಜಿನ ಆಯ್ದ ಒಂದು ಸಾವಿರ ವಿದ್ಯಾರ್ಥಿಗಳು ತೊಡಗಿಕೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸ್ವಾತಂತ್ರ್ಯಬಂದು ಹಲವು ದಶಕ ಕಳೆದರೂ ಮಹಾತ್ಮಾ ಗಾಂಧಿ ಕಂಡ ಕನಸು ನನಸಾಗದೆ. ಹಾಗೆಯೇ ಉಳಿದಿದೆ ಎಂದು ಬೇಸರಿಸಿದರು. ಶ್ರೀ ರಾಮಕೃಷ್ಣ  ವಿವೇಕಾನಂದ ಆಶ್ರಮದ ಬೆಂಗಳೂರು ಶಾಖೆಯ ತ್ಯಾಗೀಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್, ಪ್ರಾಧ್ಯಾಪಕ ಪ್ರೊ. ಬಿ.ಎಸ್. ಗುಂಜಾಲ್, ಮಾಜಿ ವಿಧಾನ ಪರಿಷತ್ ಸದಸ್ಯ ಜಿ. ಮಾದಪ್ಪ ಮೊದಲಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.