ಡಿಪ್ಲೊಮೊ ಕಾಲೇಜು ಆರಂಭಿಸಿ
ಹೊಳಲೂರು ಗ್ರಾಮವು ಶಿವಮೊಗ್ಗ ತಾಲೂಕಿನ ಅತಿ ದೊಡ್ಡ ಗ್ರಾಮವಾಗಿದೆ. ಸುಮಾರು 10 ಸಾವಿರ ಜನಸಂಖ್ಯೆ ಹೊಂದಿದೆ. ಎಲ್ಲಾ ರೀತಿಯ ಶಾಲಾ ಕಾಲೇಜುಗಳು ಇದ್ದರೂ ಡಿಪ್ಲೊಮೊ ಕಾಲೇಜಿನ ಕೊರತೆ ಕಂಡುರುತ್ತಿದೆ
. ಅದೇ ರೀತಿ ಈ ಭಾಗದಲ್ಲಿ ಸಾಕಷ್ಟು ಮುಸ್ಲಿಮರು ಇರುವುದರಿಂದ ಇಲ್ಲಿ ಉರ್ದು ವಸತಿ ಸಹಿತ ಪ್ರೌಢಶಾಲೆ ಆರಂಭಿಸಬೇಕು. ಎಸ್ಎಸ್ಎಲ್ಸಿ ಪಾಸಾದ ನಂತರ ಡಿಪ್ಲೊಮೊ ಕಾಲೇಜು ಸೇರಿ ಕೌಶಲ್ಯ ಪಡೆದು ಪಡೆದು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಆರಂಭಿಸಲು ಅವಕಾಶ ಇರುವುದರಿಂದ ಆದ್ಯತೆ ಮೇಲೆ ಈ ಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಪಾಲಿಟೆಕ್ನಿಕ್ ಆರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಸಂಬಂಧಪಟ್ಟವರು ಗಮನಹರಿಸಬೇಕು.
ಕೆ.ಜಿ.ನಿಂಗಪ್ಪ, ಹೊಳಲೂರು ಗ್ರಾಮಸ್ಥರು.
ಗುಡ್ಡೇಮರಡಿ ಅಭಿವೃದ್ಧಿಪಡಿಸಿ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಅತಿ ದೊಡ್ಡ ಏಕಶಿಲಾ ಬೆಟ್ಟವಾದ ಗುಡ್ಡೇಮರಡಿಯನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಗಮನಹರಿಸುವ ಅಗತ್ಯವಿದೆ.
ನಗರ ವ್ಯಾಪ್ತಿಯಲ್ಲಿ ಅತಿ ಎತ್ತರದ ಬೆಟ್ಟವಾಗಿರುವ ಇಲ್ಲಿಗೆ ಮೆಟ್ಟಿಲುಗಳು, ರಸ್ತೆ ಸಂಪರ್ಕ ಉತ್ತಮವಾಗಿದೆ. ಆದರೆ, ಪ್ರಚಾರ ಹಾಗೂ ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಪ್ರವಾಸಿ ತಾಣವಾಗುವ ಎಲ್ಲಾ ಅರ್ಹತೆ ಇದ್ದರೂ ಜನಸಾಮಾನ್ಯರಿಂದ ದೂರ ಉಳಿದಿದೆ.
ಇಲ್ಲಿ ಈಶ್ವರ ದೇವಸ್ಥಾನ ಸಹ ಇದೆ. ಧಾರ್ಮಿಕ ಪ್ರವಾಸಿ ತಾಣವಾಗಿ ಮಾಡುವ ಅವಕಾಶವಿದೆ. ಜಿಲ್ಲಾಡಳಿತ- ಪ್ರವಾಸೋದ್ಯಮ ಇಲಾಖೆಯವರು ಒಮ್ಮೆ ತಮ್ಮ ಕಚೇರಿಯಿಂದ ಹೊರಬಂದು ಇಂತಹ ತಾಣಗಳನ್ನು ವೀಕ್ಷಿಸಿ ಸೂಕ್ತ ಸೌಕರ್ಯ ಮಾಡಿಕೊಟ್ಟರೆ ಜನರಿಗೂ ಒಳಿತು, ಶಿವಮೊಗ್ಗದಲ್ಲಿ ಒಂದು ಪ್ರವಾಸಿ ತಾಣವೂ ಸೃಷ್ಟಿಯಾದಂತಾಗುತ್ತದೆ.
ರಾಜೇಶ್ ಶಾನುಭೋಗ್, ಶಿವದುರ್ಗ
ರಸ್ತೆ ಅಗಲೀಕರಣಗೊಳಿಸಿ
ಶಿವಮೊಗ್ಗದ ಕುವೆಂಪು ರಸ್ತೆಯ ಮೇಲೆ ಹೆಚ್ಚಿನ ವಾಹನದ ಒತ್ತಡವಿದ್ದರೂ ಈ ರಸ್ತೆಯನ್ನು ಅಗಲೀಕರಣಕ್ಕೆ ಸಂಬಂಧಪಟ್ಟ ಇಲಾಖೆಯವರು ಕೈ ಹಾಕದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಗೋಪಾಳ, ಸಾಗರ ರಸ್ತೆ ಭಾಗದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿರುವುದರಿಂದ ಸಹಜವಾಗಿ ಕುವೆಂಪು ರಸ್ತೆಯಲ್ಲಿ ಸಂಚಾರ ಹೆಚ್ಚಾಗುತ್ತಿದೆ. ಅತಿಯಾದ ವಾಹನ ಓಡಾಟದಿಂದ ಪಾದಚಾರಿಗಳು ಸಾಕಷ್ಟು ಸಮಸ್ಯೆ ಪಡುತ್ತಿದ್ದಾರೆ.
ಇಷ್ಟೇ ಅಲ್ಲದೇ ಜೈಲ್ ಸರ್ಕಲ್ ಸಮೀಪದಿಂದ ಹೆಲಿಪ್ಯಾಡ್ವರೆಗೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಪರದಾಡುತ್ತಾರೆ. ಇದನ್ನು ಕಂಡೂ ಕಾಣದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ತಿರುಗುತ್ತಾರೆ. ಕೂಡಲೇ ಕುವೆಂಪು ರಸ್ತೆಯನ್ನು ಅಗಲೀಕರಣ ಮಾಡುವ ಅಗತ್ಯವಿದೆ.
- ಚಂದ್ರಶೇಖರ್, ಗೋಪಾಳ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

