ಶಿವಮೊಗ್ಗ

ಪ್ರಯತ್ನವಿಲ್ಲದೇ ಗುರಿ ತಲುಪಲು ಅಸಾಧ್ಯ: ಪ್ರೊ. ಕೃಷ್ಣೇಗೌಡ

Published On :

ಕ.ಪ್ರ.ವಾರ್ತೆ, ಭದ್ರಾವತಿ, ಫೆ. 17
ಬಹಳಷ್ಟು ಬಾರಿ ಗುರಿಯನ್ನು ಮುಟ್ಟಲು ಯತ್ನ ಮಾಡದಿರುವುದು ವೈಫಲ್ಯದ ಕಾರಣವಾಗಿರದೆ ಗುರಿಯನ್ನೇ ಹೊಂದದಿರುವುದು ವೈಫಲ್ಯದ ಕಾರಣವಾಗಿರುತ್ತದೆ ಎಂದು ಮೈಸೂರಿನ ಖ್ಯಾತ ಹಾಸ್ಯ ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.
ಪಟ್ಟಣದ ಬಿಜಿಎಸ್ ಕೇಂದ್ರೀಯ ಶಾಲೆಯ ಬಿಜಿಎಸ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಮಾತನಾಡಿದರು.
ವಿವೇಕಾನಂದರು ಹೇಳುವಂತೆ ಶಿಕ್ಷಣ ಮಾನವನಲ್ಲಿ ಮೊದಲೇ ಅಂಕುರವಾಗಿರುವ ಪ್ರತಿಭೆಯನ್ನು ವಿಶದೀಕರಿಸುವ ಒಂದು ಪ್ರಕ್ರಿಯೆಯಾಗಿದೆ. ಭಾರತರತ್ನ ಪ್ರಶಸ್ತಿ ಪಡೆದ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಕೋಲಾರದ ಕುಗ್ರಾಮದ ಶಾಲೆಯೊಂದರಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಎಂದು ತಿಳಿಸಿದರು.
ಜಾಗೃತರಾಗಿರಿ:  ಶಿಕ್ಷಣವೆಂದರೆ ಉತ್ತಮ ಉನ್ನತ ಪದವಿಯನ್ನು ಪಡೆದು ಕೈ ತುಂಬಾ ಹಣ ಗಳಿಸುವುದೆಂದಷ್ಟೇ ನಾವು ಅರ್ಥೈಸಿಕೊಳ್ಳುವ ವ್ಯಾಪಾರೀಕರಣ ಚಿಂತನೆಯಾಗಿಬಿಟ್ಟಿದೆ. ಮಕ್ಕಳಿಗೆ ಹೆಚ್ಚು ಗ್ರಹಿಸುವ ಮತ್ತು ಅನುಕರಿಸುವ ಶಕ್ತಿ ಇರುತ್ತದೆ. ಹಾಗಾಗಿ, ಮಕ್ಕಳ ಎದುರು ನಾವು ಮಾತಾಡುವಾಗ ಮತ್ತು ವ್ಯವಹರಿಸುವಾಗ ಜಾಗೃತರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಶ್ರೀಬಾಲಗಂಗಾಧರನಾಥ ಸ್ವಾಮಿಗಳು ಅತಿ ದೊಡ್ಡ ಶೈಕ್ಷಣಿಕ ಕೈಂಕರ್ಯವನ್ನು ಮಾಡಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಮುಖದಲ್ಲಿ ಅಪೂರ್ವವಾದ ಕಾಂತಿ ಇದೆ. ಮುಂದೆ ಇಂತಹ ಮಕ್ಕಳು ದೇಶದ ಸಕ್ರಿಯ ನಾಗರಿಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಲೆಯ ಪ್ರಾಂಶುಪಾಲ ಅಶ್ವತ್ಥ್ ಶಾಲೆಯ ಚಟುವಟಿಕೆಗಳ ವರದಿ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಮಾರಂಭವನ್ನು ಉದ್ಘಾಟಿಸಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.