ಶಿವಮೊಗ್ಗ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ

Published On :

ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಫೆ.17
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾದ್ದು, ಸರ್ಕಾರದ ಖಜಾನೆ ದಿವಾಳಿಯಾಗುತ್ತಿದೆ. ಸುವರ್ಣ ಗ್ರಾಮ ಯೋಜನೆ, ಗ್ರಾಮ ಸಡಕ್, ಭಾಗ್ಯಲಕ್ಷ್ಮಿ ಯೋಜನೆ ಜಾರಿಯಾಗುತ್ತಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಮೈದಾನದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಪ್ರಕರಣದಲ್ಲಿ ತಲೆ, ಮೈಗೆ ಗುಂಡು ಬಡಿದಿತ್ತು. ಆದರೆ, ಗುಂಡು ಸಿಕ್ಕಿಲ್ಲ. ಅದೇನಾದರೂ ಸಿದ್ಧರಾಮಯ್ಯ ಅವರ ಮನೇಲಿ ಇದ್ಯಾ ಎಂದು ಬಿಎಸ್‌ವೈ ವ್ಯಂಗ್ಯವಾಡಿದರು.
ಮುಂದಿನ ಬಜೆಟ್ ಮೋದಿಯಿಂದ:  ಅಟಲ್ ಬಿಹಾರಿ ವಾಜಪೇಯಿ, ಎಪಿಜೆ ಅಬ್ದುಲ್ ಕಲಾಂ ಅವರ ಕನಸು ನನಸಾಗಿಸಲು ಜನ ತೀರ್ಮಾನಿಸಿದ್ದಾರೆ.    ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಶೇ.70 ರಷ್ಟು ಜನ ಅವರನ್ನು ಈಗಾಗಲೇ ಗುರುತಿಸಿದ್ದಾರೆ. ಜನಪರವಾಗಿದ್ದುದರಿಂದಲೇ ಬಿಜೆಪಿ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಇದೊಂದು ಐತಿಹಾಸಿಕ ಘಟನೆ ಎಂದ ಅವರು, ಚಿದಂಬರ್ ಅವರ ಬಜೆಟ್ಟಿನಲ್ಲಿ ಏನೂ ಇರುವುದಿಲ್ಲ. ಮುಂದಿನ ಬಜೆಟ್ ಮೋದಿ ನೇತೃತ್ವದಲ್ಲಿ ನಡೆಯಲಿದೆ ಎಂದು ಭವಿಷ್ಯ ನುಡಿದರು.
ಆರೋಗ್ಯ ಸಚಿವರಿಗೆ ಅರಿವಿಲ್ಲ:  ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಅಡಕೆ ಬೆಳೆಗಾರರ ವಿಷಯದಲ್ಲಿ ಸಂಸದರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಆರೋಗ್ಯ ಸಚಿವ ಗುಲಾಂನಬಿ ಆಜಾದ್ ಅವರಿಗೆ ಅಡಕೆ ಬಗ್ಗೆ ಏನೂ ಗೊತ್ತಿಲ್ಲ. ಬಗರ್‌ಹುಕುಂ ರೈತರ ಸಮಸ್ಯೆ, ಅರಣ್ಯ ಒತ್ತುವರಿ ಸಮಸ್ಯೆ ಬಗೆಹರಿಸಲು ದಾರಿ ಇದೆ. 1980 ರಲ್ಲಿ ಮಾಡಿದ ಕೇಂದ್ರ ಮಸೂದೆಯನ್ನು ವಾಪಾಸು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಆರಗ ಜ್ಞಾನೇಂದ್ರ:  ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶ ಇದೆ ಎನ್ನುವ ಟಾಟಾ ಸಂಶೋಧನಾ ಕೇಂದ್ರದ ವರದಿಗೆ ಯಾವುದೇ ಆಧಾರವಿಲ್ಲ. ಅಡಕೆಯ ಗುಣಗಳ ಸಂಶೋಧನೆ ನಡೆಸಲು ಈ ಕೇಂದ್ರದಲ್ಲಿ ಯಾವುದೇ ಸವಲತ್ತುಗಳಿಲ್ಲ. ಕೇಂದ ಸರ್ಕಾರ ಸಿಗರೇಟು ಲಾಬಿಗೆ ವರದಿ ಮಾರಿಕೊಂಡಿದೆ ಎಂದು ಆರೋಪಿಸದ ಅಳರು, ಮೈಸೂರಿನ ಸಿಎಫ್‌ಟಿಆರ್‌ಐ ಅಧಿಕತ ಸಂಶೋಧನಾ ವರದಿಯಂತೆ ಅಡುಗೆಯಲ್ಲಿ ಬಹುತೇಕ ಆರೋಗ್ಯವರ್ಧಕ ಅಂಶಗಳಿವೆ ಎಂದು ಹೇಳಿದರು.
ವಿಧನಪರಿಷತ್ ಸದಸ್ಯ ಭಾನುಪ್ರಕಾಶ್, ಪದ್ಮನಾಭ ಭಟ್, ತಾಲೂಕು ಪ್ರಮುಖರಾದ ಚಕ್ಕೋಡಬೈಲು ರಾಘವೇಂದ್ರ, ಸಾಲೆಕೊಪ್ಪ ರಾಮಚಂದ್ರ, ಜಿ.ಪಂ. ಸದಸ್ಯ ಬಿ.ಎಸ್.ಯಲ್ಲಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.