ಶಿವಮೊಗ್ಗ

ಹುಮಾಯೂನ್ ಹರ್ಲಾಪುರ್‌ಗೆ ಬಿಜಿಎಸ್ ಸಂಗೀತ ಪ್ರಶಸ್ತಿ ಪ್ರದಾನ

Published On :

ಭದ್ರಾವತಿ:  ಇಂದು ನನಗೆ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಅನುಗ್ರಹವಾಗಿದೆ ಎಂದು ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಹುಮಾಯೂನ್ ಹರ್ಲಾಪುರ್ ನುಡಿದರು.
ಸೋಮವಾರ ಸಂಜೆ ಪಟ್ಟಣದ ಜಯಶ್ರೀ ಕಲ್ಯಾಣ ಮಂದಿರದಲ್ಲಿ ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿಯು ಏರ್ಪಡಿಸಿದ್ದ 9ನೇ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಸಾದರ ಪಡಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸ್ಮರಣಾತ್ಮ ಬಿ.ಜಿ.ಎಸ್ ಮ್ಯೂಸಿಕ್ ಪ್ರಶಸ್ತಿ ಹಾಗೂ 25 ಸಾವಿರ ನಗದು ಪುರಸ್ಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಹಿಂದೊಮ್ಮೆ ಶ್ರೀ ಬಾಲಗಂಗಾಧನರಾಥ ಸ್ವಾಮಿಗಳೆದುರು ಗುರುಕೃಪೆಯೊಂದು ನನಗೆ ಸಾಕೆಂದು ಪಾರ್ಥಿಸಿದ್ದೆ, ಅದು ಇಂದು ಈಡೇರಿದೆ ಎಂದು ಭಾವಪರವಶರಾಗಿ ನುಡಿದರು.
ಹುಬ್ಬಳ್ಳಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ಪಂ. ಜಯರಾಮ್ ಕುಲಕರ್ಣಿಯವರಿಗೆ ಡಾ. ಗಂಗೂಬಾಯಿ ಹಾನಗಲ್ ಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕರ್ನಾಟಕ ಸುಗಮ ಸಂಗೀತ ಒಕ್ಕೂಟದ ಅಧ್ಯಕ್ಷ ವಿಜಯ ಹಾವನೂರು ಇವರಿಗೆ ಪಿ.ಕಾಳಿಂಗರಾವ್ ಸ್ಮರಣ ಪ್ರಶಸ್ತಿ ನೀಡಲಾಯಿತು. ದಾವಣಗೆರೆಯ ಜಾನಪದ ಗಾಯಕ ಜಿ.ಮಹಂತೇಶ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಡಾ. ಎಚ್.ಎಲ್.ನಾಗೇಗೌಡ ಸ್ಮರಣ ಪ್ರಶಸ್ತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ಎಸ್.ಸುಜಿತ್ ಕುಮಾರ್, ಬೆಂಗಳೂರಿನ ಸುಗಮ ಸಂಗೀತ ಗಾಯಕ ಆನಂದ ಮಾದಲಗೆರೆ, ಹೊಸನಗರದ ಸುಗಮ ಸಂಗೀತ ಗಾಯಕಿ ಎನ್.ವಿ.ಲಲಿತ, ಜೂನಿಯರ್ ವಿಷ್ಣುವರ್ಧನ್ ಖ್ಯಾತಿಯ ಕಲಾವಿದ ಅಪೇಕ್ಷ ಮಂಜುನಾಥ್, ಅಂಗವಿಕಲ ಮಕ್ಕಳ ಶಿಕ್ಷಣ ತಜ್ಞೆ ನಾಗೇಶ್ವರಿ ಪಿ.ನಟರಾಜ್, ನಗರಸಭಾ ಸದಸ್ಯರುಗಳಾದ ಜೆ.ಡಿ.ನಟರಾಜ್ ಮತ್ತು ಲಕ್ಷ್ಮಿದೇವಿ ಆನಂದ್ ಅವರುಗಳನ್ನು ಅಭಿನಂದಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.