ಪೊಲೀಸರೊಂದಿಗೆ ಸಹಕರಿಸಿ ಕಾನೂನು ಪಾಲಿಸಿ: ಎಸ್‌ಪಿ
ಶಿರಾಳಕೊಪ್ಪ: ಕೇವಲ ಪೊಲೀಸ್ ಸಿಬ್ಬಂದಿಯಿಂದ ಕಾನೂನು ವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಇವರಿಗೆ ಸಹಕಾರ ಕೊಟ್ಟಾಗ ಮಾತ್ರ ಆ ಕಾರ್ಯ ಯಶಸ್ವಿಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಶೈಲೇಂದ್ರಕುಮಾರ್ ತಿಳಿಸಿದರು.
ಶಿರಾಳಕೊಪ್ಪ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಜಿಲ್ಲಾ ಪೊಲೀಸ್ ಅಧಿಕಾರಿ ನಾಗರಿಕರ ಸಭೆಯಲ್ಲಿ ಮಾತನಾಡಿ, ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಜೊತೆಗೆ ಸುಧಾರಣೆ ಕಾರ್ಯದ ಬಗ್ಗೆ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸುಲಿಗೆ ನಡೆಯದು: ಈ ಹಿಂದೆ ಠಾಣೆಯಲ್ಲಿ ಯಾವುದೇ ಅಪರಾಧ ತನಿಖೆಗೆ ಪೊಲೀಸರು ಹೋಗಬೇಕೆಂದರೆ ಅವರ ಖರ್ಚುವೆಚ್ಚ ನೋಡಿಕೊಳ್ಳಬೇಕಿತ್ತು. ಹಾಗೆಯೇ ಯಾವುದೇ ತಪ್ಪು ಮಾಡಿ ಠಾಣೆಗೆ ಬಂದಾಗ ಠಾಣೆಗೆ ಪೇಪರ್ ಬೇಕು, ಇತರ ಸಾಮಗ್ರಿ ಬೇಕು ಎಂದು ಸುಲಿಗೆ ಮಾಡಲಾಗುತ್ತಿತ್ತು. ಅಂತಹ ಕಾರ್ಯ ಈಗ ನಡೆಯುವುದಿಲ್ಲ. ಕಾರಣ ಠಾಣೆಗೆ ಎಲ್ಲಾ ಸಾಮಗ್ರಿಕೊಳ್ಳಲು ಹಣ ನೀಡುತ್ತೇವೆ. ಒಂದು ವೇಳೆ ಠಾಣೆಯಲ್ಲಿ ಹಣ, ವಸ್ತು ಕೇಳಿದರೆ ನೀವು ಪ್ರಶ್ನಿಸಬಹುದು ಎಂದರು. ಪೊಲೀಸ್ ಠಾಣೆಗೆ ನಾಗರಿಕರು ಸಮಸ್ಯೆ ಇದ್ದಾಗ ಬರುತ್ತಾರೆ. ಆಗ ಠಾಣೆಯಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಮುಖ್ಯ, ಹಾಗೆಯೇ ಈಗ ಹೊಸಬೀಟ್ ವ್ಯವಸ್ಥೆ ಪ್ರಾರಂಭವಾಗಿದೆ. ಬೀಟ್‌ನಲ್ಲಿ ಸಾರ್ವಜನಿಕರ ಸ ಹಕಾರ ಪಡೆಯಲಾಗುತ್ತಿದೆ ಎಂದರು.
ಬಿಗಿ ಕಾನೂನು ಅವಶ್ಯಕ: ಇಂದು ಕ್ರಿಮಿನಲ್ ಹಾಗೂ ಗೂಂಡಾಗಳ ಮೇಲೆ ಬಿಗಿಯಾದ ಕಾನೂನು ಅವಶ್ಯವಾಗಿದೆ. ಅದು ಅನಿವಾರ್ಯವೂ ಆಗಿದೆ. ಸಾರ್ವಜನಿಕರು ಕೇಳಿದ ಕೆಲ ಸಮಸ್ಯೆಗಳಿಗೆ ಪರಿಹಾರ ದೊರಸುವುದಾಗಿ ತಿಳಿಸಿದರು.
ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್, ಜಿಪಂ ಸದಸ್ಯ ಈಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಪಪಂ ಮಾಜಿ ಅಧ್ಯಕ್ಷ ಟಿ. ರಾಜು, ಶಿವಾನಂದ ಸ್ವಾಮಿ, ರೈತಸಂಘದ ಪದಾಧಿಕಾರಿಗಳು ಪಟ್ಟಣದ ಹಾಗೂ ಗ್ರಾಮಾಂತರ ಪ್ರದೇಶದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಇಲಾಖೆ ಗಮನ ಹರಿಸಬೇಕಾದ ಸಂಗತಿಯನ್ನು ಗಮನಕ್ಕೆ ತಂದರು. ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷರಾದ ರಟ್ಟಿಹಳ್ಳಿ ಲೋಕೇಶ್ ಗಾಂಧಿ, ಸೈಫುಲ್ಲಾ, ರೈತಸಂಘದ ಅಧ್ಯಕ್ಷ ರಾಜಣ್ಣ ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಅಡಿಷನಲ್ ಎಸ್‌ಪಿ ಭೀಮಾಶಂಕರ್, ಸಿಪಿಐ ಮಾದಪ್ಪ, ಎಸ್.ಐ ಗುರುಪ್ರಸಾದ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

