'ರಾಜಕೀಯ ಪಕ್ಷ ತೋರುವ ಹೆಂಡದ ಆಮಿಷಕ್ಕೆ ಬಲಿಯಾಗದಿರಿ'
ಶಿರಾಳಕೊಪ್ಪ: ಧ.ಗ್ರಾ.ಯೋ. ಬಿಡಿಸಿದ ಕುಡಿತದ ಚಟವನ್ನು ಬರಲಿರುವ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ ಪಡೆಯಲು ತೋರಿಸುವ ಹೆಂಡದ ಆಮಿಷಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕರೆ ನೀಡಿದರು.
ಪಟ್ಟಣದಲ್ಲಿ ಎರಡು ದಿನಗಳ ಕಾಲ ನಡೆದ ಕೃಷಿ ಉತ್ಸವ ಸಮಾರಂಭದಲ್ಲಿ ಸಮಾರೋಪ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಸಬಲರಾಗಿರುವುದರಿಂದ ಏನನ್ನಾದರೂ ಸಾಧಿಸಬಹುದು ಎಂದರು.
ಧ.ಗ್ರಾ.ಯೋ. ನಿಮಗೆ ಬದುಕನ್ನು ಕೊಟ್ಟಿದೆ. ಹಾಗೆಯೇ ಮನೆಯಿಂದ ಹೊರಗೆ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡಿದೆ, ಹಲವಾರು ಶಿಕ್ಷಣವನ್ನು ಕೊಟ್ಟಿರುವುದರಿಂದ ಮುಂದೆ ನೀವು ಅನ್ಯಾಯದ ವಿರುದ್ಧ ಮತ್ತು ನ್ಯಾಯಕ್ಕಾಗಿ ಬೀದಿಗೆ ಇಳಿಯಲು ಹಿಂದೇಟು ಹಾಕಬಾರದು ಎಂದ ಅವರು, ಉತ್ತಮವಾಗಿ ನಮ್ಮಕಾರ್ಯ ನಿರ್ವಹಿಸಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನಿಮಗೆ ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಮಾತನಾಡಿ, ಸರ್ಕಾರ ಮಾಡಬೇಕಾದ ಕಾರ್ಯವನ್ನು ಧ.ಗ್ರಾ.ಯೋ. ಮಾಡುತ್ತಿದೆ. ಆರ್ಥಿಕ ಭದ್ರತೆ, ಧಾರ್ಮಿಕ ಮನೋಭಾವನೆ ಬೆಳೆಸಿ, ಕುಡಿತದ ಚಟ ಬಿಡಿಸಿದಂತಹ ಅನೇಕ ಕಾರ್ಯಮಾಡಿದೆ ಎಂದರು.
ಜಿಲ್ಲಾ ಜಾಗ್ರತ ಸಮಿತಿ ಗುರುಮೂರ್ತಿ ಮಾತನಾಡಿ, ಧ.ಗ್ರಾ.ಯೋ. ಕೃಷಿ ಉತ್ಸವದ ಮುಖಾಂತರ ಕ್ರಾಂತಿ ಮಾಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ದಾನೇರ್ ಮಾತನಾಡಿ, ಜಿಲ್ಲಾ ಮಟ್ಟದ ಕಾರ್ಯಕ್ರಮದಂತೆ ಈ ಉತ್ಸವ ನಡೆಯಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಹುನವಳ್ಳಿ ಗಂಗಾಧರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಶಿವಶಂಕರ, ಕೆಂಗಟ್ಟಿ ಲಕ್ಷ್ಮಣ, ಧ.ಗ್ರಾ.ಯೋ. ತಾಲೂಕು ಅಧ್ಯಕ್ಷ ಶಿವಮೂರ್ತಿ ಮಾತನಾಡಿದರು. ರಾಸು ಪ್ರದರ್ಶನದಲ್ಲಿ ಭಾಗವಹಿಸಿ ಬಹುಮಾನ ಪಡೆದವರಿಗೆ ಹಾಗೂ ಮೆಣಸಿನಕಾಯಿ ಮನೆ ಇತರ ಮನೆ ನಿರ್ಮಿಸಿ ಎಲ್ಲರ ಗಮನಸೆಳೆದ ತಾಲೂಕಿನ ಸಂಘಗಳಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

