'ಸಮಾಜ ಅಭಿವೃದ್ಧಿಗೆ ಮಹಿಳೆ ಶ್ರಮಿಸಲಿ'
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಫೆ.25
ಸಮಾಜದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ಕಾರ್ಯ ಮಹಿಳೆಯರಿಂದಾಗಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹೇಳಿದರು.
ಇಲ್ಲಿನ ರಾಮಚಂದ್ರಾಪುರ ಹವ್ಯಕ ಮಾತೃ ಮಂಡಲ ಏರ್ಪಡಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಕೇವಲ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಹಾಗೇ ಸಂಘಟನೆಯ ಶಕ್ತಿ ಕೂಡ ತೋರ್ಪಡಿಸಿದ್ದಾಳೆ. ಈ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡುವಂತಾಗಬೇಕು ಎಂದರು.
ಸಾಗರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರಶಾಸ್ತ್ರಿ ಮಾತನಾಡಿ, ಆರಾಧನೆಗಿಂತ ಅರ್ಥೈಸುವ ಕಾರ್ಯವಾಗಬೇಕು. ಅರ್ಥವಿಲ್ಲದೆ ಕೇವಲ ಆಚರಣೆ ಮಾಡುವ ಮೌಢ್ಯ ಖಂಡಿತಾ ನಮಗಿಲ್ಲ. ಮತ್ತೊಬ್ಬರು ನಮಗೆ ಆದರ್ಶರಾಗದೆ ನಾವು ಮತ್ತೊಬ್ಬರಿಗೆ ಆದರ್ಶರಾಗುವಂತಾಗುವ ಗುಣ ಕೂಡ ನಮ್ಮಲ್ಲಿದೆ ಎಂದರು.
ಮಂಡಲ ಅಧ್ಯಕ್ಷ ಭಾಗಿ ಸತ್ಯನಾರಾಯಣ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಮಾತೃ ವಿಭಾಗದ ಅಧ್ಯಕ್ಷೆ ಭಾನುಮತಿ, ರಚನಾ ಸ್ವಾಗತಿಸಿ, ಮಾಲಿನಿ ಸಭಾಹಿತ್ ನಿರೂಪಿಸಿ, ಶಾಲಿನಿ ರಂಗನಾಥ್ ವಂದಿಸಿದರು. ನಂತರ ಮಹಿಳೆಯಿಂದ ಭಜನಾ ಸ್ಪರ್ಧೆ, ಪುಟಾಣಿಗಳ ಛದ್ಮವೇಷ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

