ಶಿವಮೊಗ್ಗ

ಮಳೆಗೆ ಸಿಲುಕಿದ ಬತ್ತ; ಖರೀದಿ ಕೇಂದ್ರಗಳ ಪರಿಶೀಲನೆ

Published On :

ಸೊರಬ: ಕೆಲವೆಡೆಯ ಖರೀದಿ ಕೇಂದ್ರಗಳಲ್ಲಿ ಬತ್ತ ಮಳೆಗೆ ಸಿಲುಕಿದೆ. ಮೋಡ ಮುಸುಕಿದ ವಾತಾವರಣ ಕಾರಣ ಮತ್ತೆ ಮಳೆ ಆಗುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಬತ್ತ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ತಹಸೀಲ್ದಾರ್ ನಟರಾಜ್ ತಿಳಿಸಿದರು.
ಕೇಂದ್ರದಲ್ಲಿ ಸುಮಾರು 40 ಸಾವಿರ ಕ್ವಿಂಟಾಲ್‌ಗಿಂತಲೂ ಅಧಿಕ ಬತ್ತ ದಾಸ್ತಾನು ಇದೆ. ಮಂಗಳವಾರ ಶಿವಮೊಗ್ಗ, ತೀರ್ಥಹಳ್ಳಿ ಸಾಗರ, ತಾಲೂಕುಗಳಲ್ಲಿ ಮಳೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಮುಂದಾಗಿದ್ದಾಗಿ ತಿಳಿಸಿದರು.
 ತಾಲೂಕು ಎಪಿಎಂಸಿ ಅಧ್ಯಕ್ಷ ತಬಲಿ ಬಂಗಾರಪ್ಪ, ತಹಸೀಲ್ದಾರ್ ಆನವಟ್ಟಿ ಎಪಿಎಂಸಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
  ಜಿಲ್ಲಾಧಿಕಾರಿ, ಸಾಗರ ಉಪ ವಿಭಾಗಾಧಿಕಾರಿ, ಆಹಾರ ನಿಗಮದ ಅಧಿಕಾರಿಗಳು, ಸುರಕ್ಷಾ ನಾಗರಾಜ್‌ರೊಂದಿಗೆ ಸಂಪರ್ಕಿಸಿ, ದಾಸ್ತಾನು ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದರು.
 ಬತ್ತ ಖರೀದಿ ಕೇಂದ್ರಗಳಲ್ಲಿ ಕೆಲವು ಹಗರಣಗಳು ನಡೆಯುತ್ತಿದೆ. ಈ ಬಗ್ಗೆ ದೂರು ಬಂದಿವೆ. ಅಗತ್ಯ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
ರೈತರೂ ಕೂಡ ಸರ್ಕಾರ ನೀಡಿದ ಯೋಜನೆ ತಮಗಾಗಿ ಎಂಬುದನ್ನು ಅರಿತು, ವ್ಯಾಪಾರಿಗಳೊಂದಿಗೆ ಕೈಜೋಡಿಸದೇ ಜಾಗೃತಿ ಆಗಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.