ಜೀರ್ಣೋದ್ಧಾರ ಹೆಸರಲ್ಲಿ ಸ್ವರೂಪಕ್ಕೆ ಧಕ್ಕೆ ಸಲ್ಲ
ಕ.ಪ್ರ.ವಾರ್ತೆ, ಸಾಗರ, ಜ.1
ನಮ್ಮ ಹಳೆ ತಲೆಮಾರಿನ ಜನರು ಕಟ್ಟಿಸಿರುವ ದೇವಾಲಯಗಳು, ಕೋಟೆಗಳು, ವಾಸ್ತುಶಿಲ್ಪಗಳು ಅಚ್ಚರಿ ಮೂಡಿಸುತ್ತವೆ. ಅವರ ಚಿಂತನೆಗಳು ನಮ್ಮ ಕಲ್ಪನೆಗೂ ಮೀರಿದ್ದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ತಾಲೂಕಿನ ಹೊಸಗುಂದದ ದೇವಾಲಯಗಳ ನಗರಿಗೆ ಭೇಟಿ ನೀಡಿ 11ನೇ ಶತಮಾನದ ಪ್ರಾಚೀನ ದೇವಾಲಯಗಳ ಪುನರ್ ನಿರ್ಮಾಣ ಕಾಮಗಾರಿ ವೀಕ್ಷಿಸಿ ಮಾತನಾಡಿ, ಇಂತಹ ದೇವಾಲಯ ಸಂರಕ್ಷಿಸುವ ಮೂಲಕ ನಮ್ಮ ಐತಿಹ್ಯ ಉಳಿಸಿಕೊಳ್ಳಬೇಕು ಎಂದರು.
ಪುರಾತನ ದೇವಾಲಯಗಳ ಪುನರ್ ನಿರ್ಮಾಣ ಹೆಸರಿನಲ್ಲಿ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ನಡೆಯುತ್ತಿದೆ. ಪುನರ್ ನಿರ್ಮಾಣ ಮಾಡುವಾಗಲೂ ಯಥಾವತ್ತಾಗಿ ನಿರ್ಮಿಸಿ ಅಭಿವೃದ್ಧಿಪಡಿಸುವ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಗತಕಾಲದ ವೈವಭ ಉಳಿಸುವಲ್ಲಿ ಹೊಸಗುಂದದ ದೇವಾಲಯಗಳ ನಿರ್ಮಾಣ ಮಾದರಿಯಾಗಿದೆ ಎಂದರು.
ದೇವಾಲಯಗಳ ಪ್ರಾಚೀನತೆ ಉಳಿಸಿಕೊಳ್ಳುವುದೂ ಬಹುಮುಖ್ಯವಾಗಿದೆ. ಸರ್ಕಾರದ ವತಿಯಿಂದ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟಂತೆ ಹಾಗೂ ಇಲ್ಲಿಯ ಅಭಿವೃದ್ಧಿ ಕುರಿತಂತೆ ಗಮನ ಹರಿಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದರು.
ಇಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣಿ, ಕಂಚಿ ಕಾಳಮ್ಮ ದೇವಾಲಯ, ಉಮಾಮಹೇಶ್ವರ ದೇವಾಲಯ ಎಲ್ಲವನ್ನೂ ವೀಕ್ಷಿಸಿ ಕಾಮಗಾರಿಯ ಕುರಿತಂತೆ ಕೆಲವು ಸಲಹೆ ನೀಡಿದ ವಿಧಾನಸಭಾಧ್ಯಕ್ಷರು ಗೋಶಾಲೆಗೂ ಭೇಟಿ ನೀಡಿದರು. ಕಾಮಗಾರಿಗಳ ವಿವರಗಳನ್ನು ಉಮಾ ಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎಂ. ನಾರಾಯಣಶಾಸ್ತ್ರಿ ನೀಡಿದರು. ಜಿಪಂ ಸದಸ್ಯ ರತ್ನಾಕರ ಹೊನಗೋಡು, ತಾಪಂ ಸದಸ್ಯೆ ಜ್ಯೋತಿ ಮುರಳೀಧರ್, ಹೊಸೂರು ಗ್ರಾಪಂ ಅಧ್ಯಕ್ಷ ಲೋಕೇಶ, ಸದಸ್ಯ ನಾಗಪ್ಪ, ಟ್ರಸ್ಟಿನ ಕೋವಿ ಪುಟ್ಟಪ್ಪ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

