ಶಿವಮೊಗ್ಗ

ವೃತ್ತಿಯಲ್ಲಿ ಹೊಸ ಆವಿಷ್ಕಾರಕ್ಕೆ ಆದ್ಯತೆ ನೀಡಿ

Published On :

ಕ.ಪ್ರ.ವಾರ್ತೆ, ಜೋಗ್‌ಫಾಲ್ಸ್, ಜ.2
ಪೂರ್ವಿಕರು ಹಾಕಿ ಕೊಟ್ಟ ಅನುಭವದ ಮಾರ್ಗದರ್ಶನ ಪಾಲಿಸುವುದರೊಂದಿಗೆ ಕೆಲಸದಲ್ಲಿ ಹೊಸ ಆವಿಷ್ಕಾರ ಸಾಧಿಸಿ. ಲವಲವಿಕೆಯಿಂದ ಕೆಲಸ ನಿರ್ವಹಿಸಿ. ಸಂಸ್ಥೆಯ ಏಳಿಗೆಗೆ ದುಡಿಯಬೇಕಿದೆ ಎಂದು ಮುಖ್ಯ ಅಭಿಯಂತರ ಜಿ.ಹನುಮಂತಪ್ಪ ಹೇಳಿದರು.
ಶರಾವತಿ ಯೋಜನಾ ಪ್ರದೇಶದ ನಿಗಮದ ಕಚೇರಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಹೊಸ ವರ್ಷ 2014 ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಹಬಾಳ್ವೆ, ಪ್ರೀತಿ, ಅನುಕಂಪ ಬಹಳ ಮುಖ್ಯ. ಬೆಳಕು ಹರಿಯುತ್ತದೆ, ಗಾಳಿ ಬೀಸುತ್ತದೆ, ಬಡವ-ಶ್ರೀಮಂತ ಎಂಬ ಭೇದಭಾವ ಇಲ್ಲದೆ ಎಲ್ಲರ ಮನೆಯಂಗಳಕ್ಕೆ ಪ್ರಹರಿಸುತ್ತದೆ. ಅದೇ ರೀತಿ ನಾವು ಎಲ್ಲಾ ಸಿಬ್ಬಂದಿ, ಸಾರ್ವಜನಿಕರೊಂದಿಗೆ ಪ್ರೀತಿಯಿಂದ ವರ್ತಿಸಿದಾಗ, ಕೆಲಸವೂ ಸುಗಮವಾಗುತ್ತದೆ. ಸಂತಸ ನೆಮ್ಮದಿ ದೊರೆಯುತ್ತದೆ. ಇದನ್ನು ಪ್ರತಿಯೊಬ್ಬರು ಕೆಲಸದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ರಾಜಮುಡಿ ಮಾತನಾಡಿ, ನಿಗಮದ ಉದ್ಯೋಗಿಗಳು ಕಚೇರಿಗಳಲ್ಲಿ ತಾವೆಲ್ಲರೂ ಒಂದೇ ಎಂಬ ಭಾವನೆಯಿಂದ ನಿರ್ವಹಿಸುತ್ತಿದ್ದಾರೆ. ಮಾನವ ಸಂಪನ್ಮೂಲಶಕ್ತಿ ಎಲ್ಲಿ ಪ್ರೀತಿ, ವಿಶ್ವಾಸಗಳಿಂದ ಸದ್ಬಳಕೆಯಾಗುತ್ತಿದೆಯೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಹೊಸ ಸಮೃದ್ಧ ಮಳೆ, ಬೆಳೆ ಬರುವಂತಾಗಲಿ, ಎಲ್ಲರ ಜೀವನ ಸುಖಮಯವಾಗಿರಲಿ ಎಂದರು.
ಅಧೀಕ್ಷಕ ಅಭಿಯಂತರ ಕೆ.ಆರ್.ಶಿವಾಜಿ ಕಾರ್ಯನಿರ್ವಾಹಕ ಅಭಿಯಂತರ ಸಿ. ಗಿರೀಶ್, ಹಣಕಾಸು ವಿಭಾಗದ ಪ್ರಧಾನ ಪ್ರಬಂಧಕ ಬಿ.ನಿಜೇಂದ್ರ. ಮಾನವ ಸಂಪನ್ಮೂಲ ಅಧಿಕಾರಿ ಎಸ್.ಆರ್.ಕೇಣಿಕರ್, ಭದ್ರತಾ ವಿಭಾಗದ ಮುಖ್ಯಸ್ಥ ಚೌದರಿ ಪೆಂಟಯ್ಯ ಯುನಿಯನ್‌ನ ಪದಾಧಿಕಾರಿಗಳು ಹಾಗೂ ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಂ.ಎಸ್.ಸತೀಶ್ ಸ್ವಾಗತಿಸಿ, ಕೆ.ಸಿ.ಕೃಷ್ಣಕುಮಾರ್ ವಂದಿಸಿ ಆರ್.ರಾಜೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.