ದೃಢೀಕರಣ ಪತ್ರ ಪರದಾಟ ತಪ್ಪಿಸಿ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಜ.3
ವಯಸ್ಸಿನ ದೃಢೀಕರಣ ಪತ್ರ ಪಡೆಯಲು ಹೋದಾಗ ಮೆಡಿಕಲ್ ಕಾಲೇಜಿನ ಬೇಜವಾಬ್ದಾರಿಯುತ ಕ್ರಮ ಖಂಡಿಸಿ ಹಾಗೂ ಇತರೆ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಘಟಕದ ಸದಸ್ಯರು ಶುಕ್ರವಾರ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ವತಿಯಿಂದ ವೃದ್ಧರು, ಅವಿವಾಹಿತರು, ಅಂಗವಿಕಲರು, ನಿರಾಶ್ರಿತರು ಇತರೆ ಸೌಲಭ್ಯಕ್ಕಾಗಿ ಮಾಸಾಶನ ಪಡೆಯಲು ತಾಲೂಕು ಕಚೇರಿಗೆ ಅರ್ಜಿಸಲ್ಲಿಸಬೇಕಾಗಿದೆ. ಈ ಅರ್ಜಿ ಸಲ್ಲಿಸುವಾಗ ವಯಸ್ಸಿನ ದೃಢೀಕರಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕೆಂದು ಸರ್ಕಾರದ ಸೂಚನೆ ಇರುತ್ತದೆ. ಇದರ ಮೇರೆಗೆ ವಯಸ್ಸಿನ ದೃಢೀಕರಣ ಪತ್ರ ಪಡೆಯಲು ಹೊಸ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಓಪಿಡಿ ಚೀಟಿ ಪಡೆಯಬೇಕು. ನಂತರ ಓಪಿಡಿ ಪಡೆದು ಪುನಃ ಮೆಡಿಕಲ್ ಕಾಲೇಜಿಗೆ ಬಂದು ಮತ್ತೆ ಪುನಃ ಹೊಸ ಮೆಗ್ಗಾನ್ ಆಸ್ಪತ್ರೆಗೆ ತಿರುಗಾಡಬೇಕಾಗಿರುತ್ತದೆ. ಈ ರೀತಿ ಪದೇ ಪದೇ 3- 4 ಬಾರಿ ಹೊಸ ಆಸ್ಪತ್ರೆಗೂ- ಮೆಡಿಕಲ್ ಕಾಲೇಜಿಗೂ ತಿರುಗಾಡಬೇಕು. ವೃದ್ಧರು, ಅಂಗವಿಕಲರು, ಅಶಕ್ತರು, ಪಾರ್ಶ್ವವಾಯುಪೀಡಿತರು ತಿರುಗಾಡುವುದಕ್ಕೆ ಆಟೋದಲ್ಲಿ ಸಾಕಷ್ಟು ಖರ್ಚಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದರು.
ಸರ್ಕಾರದ ಆಜ್ಞೆ: ಬೆಳಗ್ಗೆ 8 ಗಂಟೆಗೆ ಹೋದಲ್ಲಿ ಕೇವಲ 20 ಜನರಿಗೆ ಮಾತ್ರ ಈ ವಿಷಯದ ಬಗ್ಗೆ ಎಕ್ಸರೇ ತೆಗೆಯುತ್ತಾರೆ. ಈದಾದ ನಂತರ ಸಂಜೆ 4 ಗಂಟೆಯವರೆಗೆ ಅಲ್ಲೇ ಕಾಯ್ದು ವಯಸ್ಸಿನ ದೃಢೀಕರಣ ಪತ್ರ ಪಡೆಯಬೇಕಾಗಿರುತ್ತದೆ. ಅಂಗವಿಕಲರು 3ನೇ ಮಹಡಿಗೆ ಹೋಗಿ ಅಂಗವಿಕಲ ದೃಢೀಕರಣ ಪತ್ರ ತೆಗೆದುಕೊಳ್ಳಬೇಕು. ಈಗ ಮೆಡಿಕಲ್ ಕಾಲೇಜಿನಲ್ಲಿ ಜನವರಿ 13 ರವರೆಗೆ ಪರೀಕ್ಷೆ ನಡೆಯುತ್ತಿದ್ದು, ವಯಸ್ಸಿನ ದೃಢೀಕರಣ ಪತ್ರ ಪಡೆಯಲು ಅಸಾಧ್ಯವಾಗುತ್ತಿದೆ. ಅರ್ಜಿಗೆ ಮೆಗ್ಗಾನ್ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿನಿಂದಲೇ ಪಡೆದ ವಯಸ್ಸಿನ ದೃಢೀಕರಣ ಪತ್ರ ಮಾತ್ರ ಪಡೆದುಕೊಳ್ಳಬೇಕೆಂದು ಸರ್ಕಾರದ ಆಜ್ಞೆ ಇರುತ್ತದೆ.
ಅಲೆದಾಟ: ನಗರ, ಗ್ರಾಮೀಣ ಪ್ರದೇಶದವರು ಒಂದೇ ಕಡೆ ವಯಸ್ಸಿನ ದೃಢೀಕರಣ ಪತ್ರ ಪಡೆಯಬೇಕಾಗಿದ್ದು, ಅಲ್ಲಿ ಒಂದು ದಿನಕ್ಕೆ 20 ಜನಕ್ಕೆ ಮಾತ್ರ ದೃಢೀಕರಣ ಪತ್ರ ನೀಡುತ್ತಿದ್ದು, ಇದರಿಂದ ಒಂದು ದಿನ ಅಲೆದು ಪತ್ರ ಪಡೆಯಲು ಅಸಾಧ್ಯ. ಇದರಿಂದ ಕಳೆದ ವಾರ ರತ್ನಮ್ಮ ಮತ್ತು ಗಿರಿಜಮ್ಮ ಎಂಬವರು ಅಲೆದಾಡಿ ಅಲೆದಾಡಿ ಮೂರ್ಛೆ ಬಿದ್ದಿರುವ ಉದಾಹರಣೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನವಿ ನೀಡುವ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಸದಸ್ಯರಾದ ಸೀತಾಲಕ್ಷ್ಮಿ, ರಾಧಾ ರಾಮಚಂದ್ರ, ರಮಾದೇವಿ, ಶೋಭಾ ಮಂಜುನಾಥ್, ಆಶಾ ಚನ್ನಬಸಪ್ಪ, ರಶ್ಮಿ ಶ್ರೀನಿವಾಸ್, ಗೀತಾ, ಗಂಗಮ್ಮ, ಸುಧಾಮಣಿ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

