ಮತ್ತೆ ಒಂದಾದ ಹಳೇ ಸ್ನೇಹಿತರು
ಕ.ಪ್ರ.ವಾರ್ತೆ, ಶಿವಮೊಗ್ಗ, ಜ.5
ಕಳೆದ ವಿಧಾನಸಭಾ ಚುನಾವಣೆ ವೇಳೆ ಹಾವು ಮುಂಗುಸಿಯಂತಿದ್ದ ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಈಗ ಮತ್ತೆ ನಗು ನಗುತ್ತಾ ಒಂದಾಗಿದ್ದಾರೆ.
ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀಮದ್ ಭಗವದ್ಗೀತಾ ಪುನಶ್ಚೇತನ ಅಭಿಯಾನ ಜಿಲ್ಲಾ ಸಮಿತಿ ಭಾನುವಾರ ಶುಭ ಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮದ್ ಭಗವದ್ಗೀತಾ ಸಮರ್ಪಣಾ ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ ವೇದಿಕೆ ಹಂಚಿಕೊಂಡಿದ್ದರು. ಒಟ್ಟಿಗೆ ಅಕ್ಕಪಕ್ಕ ಕುಳಿತು ಗುಸುಗುಸು ಚರ್ಚೆಯಲ್ಲಿ ತಲ್ಲೀನರಾಗಿದ್ದರು.
ಈಶ್ವರಪ್ಪ ಸಭೆಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಯಡಿಯೂರಪ್ಪನವರನ್ನು ಕೊಂಡಾಡಿದರು.
ಭಗವದ್ಗೀತೆ ಎಂದಾಗ ಸನಾತನ ಸಂಸ್ಕೃತಿ ನೆನಪಾಗುತ್ತದೆ. ಕೃಷ್ಣ ನೆನಪಾಗುತ್ತಾನೆ. ಯುದ್ಧಭೂಮಿಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶ ನೆನಪಾಗುತ್ತದೆ.
ಬಿಎಸ್ವೈ ಗೋ ರಕ್ಷಕ: ಶ್ರೀ ಕೃಷ್ಣ ಸ್ತ್ರೀ ರಕ್ಷಕ, ಕೃಷ್ಣ ಗೋವು ರಕ್ಷಕ. ಗೋವಿನ ಹತ್ಯೆ ನಡೆಯುತ್ತಿರುವ ಸಂದರ್ಭದಲ್ಲಿ ಕೃಷ್ಣನನ್ನು ನೆನಪು ಮಾಡಿಕೊಂಡು ಈ ಸಮಾವೇಶದಲ್ಲಿ ಗೋವಿನ ರಕ್ಷಣೆಗೆ ನಾವೆಲ್ಲರೂ ಪಣ ತೊಡಗಬೇಕಾಗಿದೆ ಎಂದರು.
ಶ್ರೀಕೃಷ್ಣನು ಅರ್ಜುನನಿಗೆ ಯುದ್ಧದ ಸಂದರ್ಭದಲ್ಲಿ ಸಂದೇಶ ನೀಡಿ, ಯಾವ ರೀತಿ ಸಮಾಜವನ್ನು ಕೊಂಡೊಯ್ಯಬೇಕು ಎಂದು ತಿಳಿಸಿದ್ದ. ಅದೇ ರೀತಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಅಧಿಕಾರ ನಡೆಸಿದರು.ಗೋವುಗಳ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರು. ಭಾಗ್ಯಲಕ್ಷ್ಮೀ ಯೋಜನೆ ಮೂಲಕ ಸ್ತ್ರೀಯರ ರಕ್ಷಣೆಗೆ ಮುಂದಾದರು. ಸಾಧು ಸಂತರಿಗೆ ಹೆಚ್ಚಿನ ರಕ್ಷಣೆ ನೀಡುವುದರ ಜತೆಗೆ ಮಠಗಳನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿ, ಧರ್ಮ ರಕ್ಷಣೆ ಮಾಡಿ ಶ್ರೀಕೃಷ್ಣ ಹೇಳಿದ್ದ ಮಾರ್ಗದಲ್ಲಿ ನಡೆದರು ಎಂದರು.
ಮಾರ್ಗದರ್ಶನ: ಭಗವದ್ಗೀತೆಯಲ್ಲಿ ಕುರುಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದಂತೆ ಈಗ ಬಿಜೆಪಿಗೆ ಯಡಿಯೂರಪ್ಪವನವರು ಮಾರ್ಗದರ್ಶನ ಮಾಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ನಡೆಯುತ್ತೇವೆ. ನಾವೆಲ್ಲಾ ಈಗ ಒಂದಾಗಿ ರಾಷ್ಟ್ರಕಟ್ಟುವ ಕೆಲಸ ಮಾಬೇಕಿದೆ. ಭಗವದ್ಗೀತಾ ಅಭಿಯಾನದ ಈ ಸಂದರ್ಭದಲ್ಲಿ ಶ್ರೀಗಳ ಸಮ್ಮುಖದಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದು ಸಂತಸ ತಂದಿದೆ ಎಂದು ಈಶ್ವರಪ್ಪ ತಿಳಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿ, ಬಹಳ ದಿನಗಳ ನಂತರ ವೇದಿಕೆ ಇಬ್ಬರೂ ಹಂಚಿಕೊಂಡಿದ್ದೇವೆ. ಒಳ್ಳೆಯ ಶುಭ ಸಮಾರಂಭ, ಒಟ್ಟಾಗಿ ಕೆಲಸ ಮಾಡಲು ಪ್ರೇರಣೆ, ಶಕ್ತಿ ಕೂಟ್ಟಿದೆ, ಶುಭ ಸೂಚನೆ ಎಂದು ನಕ್ಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

