ವಿವಿಧ ಸಂಘಟನೆಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಸಾಗರ, ಜ.8
ಮಡಿಕೇರಿಯಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಡಾ. ನಾ. ಡಿಸೋಜ ಅವರು ಮಾತನಾಡುತ್ತಿರುವಾಗ ಸಂಘಟಕರು ಭಾಷಣ ಮೊಟಕುಗೊಳಿಸುವಂತೆ ಸೂಚಿಸಿದ ಕ್ರಮ ಖಂಡಿಸಿ ಸಾಗರದ ವಿವಿಧ ಸಂಘಟನೆಗಳ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವೇ ಮುಖ್ಯ ಸಂಗತಿಯಾಗಿದ್ದರೂ ಸಂಘಟಕರು ಅವರ ಭಾಷಣ ಮೊಟಕುಗೊಳಿಸುವಂತೆ ಹೇಳುವುದು ಸರಿಯಲ್ಲ. ಇದು ಸಮ್ಮೇಳನಾಧ್ಯಕ್ಷರಿಗೆ, ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ಹೇಳಿದರು.
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು, ಕನ್ನಡ, ಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕು. ಆದರೆ, ಇತ್ತೀಚಿನ ಎಲ್ಲ ಸಮ್ಮೇಳನಗಳಲ್ಲಿ ರಾಜಕಾರಣಿಗಳು, ಸರ್ಕಾರದ ಮುಖ್ಯ ಸ್ಥಾನದಲ್ಲಿರುವವರು ಮುಖ್ಯರಾಗುತ್ತಿದ್ದಾರೆ. ಅವರನ್ನು ಓಲೈಸುವ ಭರದಲ್ಲಿ ಸಾಹಿತಿ, ಸಾಹಿತ್ಯ ಗೌಣವಾಗುತ್ತಿರುವುದು ಖಂಡನಾರ್ಹ. ಮಡಿಕೇರಿ ಸಮ್ಮೇಳನದಲ್ಲಿಯೂ ಉದ್ಘಾಟನಾ ಸಮಾರಂಭದಲ್ಲಿ ಆಡಳಿತಾರೂಢ ಸರ್ಕಾರದ ಪ್ರಮುಖರೇ ವಿಜೃಂಭಿಸುತ್ತಿದ್ದರು. ರಾಜಕೀಯ ಪ್ರಮುಖರ ಭಾಷಣಕ್ಕೆ ಸೂಚನೆ ನೀಡದ ಸಂಘಟಕರು, ಸಮ್ಮೇಳನಾಧ್ಯಕ್ಷ ಭಾಷಣಕ್ಕೆ ಅವಸರ ಮಾಡಿರುವುದು ಖಂಡನೀಯ. ಇದಕ್ಕಾಗಿ ಸಂಘಟಕರು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ವಿ. ಹಿತಕರ ಜೈನ್, ಪರಮೇಶ್ವರ ದೂಗೂರು, ಐ.ವಿ. ಹೆಗಡೆ, ಟಿ.ಡಿ. ಮೇಘರಾಜ್, ಮೋಹನ್, ವಿಜಯಕುಮಾರ್, ಸುಳಗೋಡು ಗಣಪತಿ, ಕಬಸೆ ಅಶೋಕಮೂರ್ತಿ, ಚೇತನ್ರಾಜ್, ಕೆ.ಎಲ್. ಭೋಜರಾಜ್, ಕೃಷ್ಣಮೂರ್ತಿ(ಕಿಟ್ಟಿ), ಮಂಜುನಾಥ, ಉಮೇಶ್, ವೀರರಾಜ್ ಜೈನ್, ಸಂತೋಷ ಸೇಟ್, ಗಣೇಶಪ್ರಸಾದ್, ಅರವಿಂದ ರಾಯ್ಕರ್ ಮೊದಲಾದವರು ಹಾಜರಿದ್ದರು.
--
ಕಳಪೆ ಕಾಮಗಾರಿ: ತನಿಖೆಗೆ ಒತ್ತಾಯ
ಶಿವಮೊಗ್ಗ: ಇಲ್ಲಿನ ಸ್ವಾಮಿ ವಿವೇಕಾನಂದ ಬಡಾವಣೆಯ ಸಾರ್ವಜನಿಕ ಉದ್ಯಾನವನದ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿರುವ ಗೋಪಾಲಗೌಡ ಬಡಾವಣೆಯ ಚಂದನ ಸೇವಾ ಮತ್ತು ಆರೋಗ್ಯ ಪಾರ್ಕ್ನ ಅಭಿವೃದ್ಧಿ ಸಮಿತಿ, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ. ಕಳಪೆ ಕಾಮಗಾರಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವ ಜತೆಗೆ ನಗರಸಭೆಯ ಬೇಜವಾಬ್ದಾರಿ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಅರ್ಪಿಸಲಾಯಿತು. ಸಂಘಟನೆಯ ಅಧ್ಯಕ್ಷ ಎಲ್. ಜಯಕುಮಾರ್, ರುದ್ರಮುನಿ, ನಾಗೇಂದ್ರ, ಮಂಜುನಾಥ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

